ಸ್ಯಾಮಿಯನ್ನು ಜನಾಂಗೀಯ ನಿಂದನೆ ಮಾಡಿದ್ದು ಮತ್ಯಾರು ಅಲ್ಲ; ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ?

ಡೆರೆನ್​ ಸ್ಯಾಮಿ ಇತ್ತೀಚೆಗೆ ಐಪಿಎಲ್​​​​ನಲ್ಲೂ ಜನಾಂಗೀಯ ನಿಂದನೆ ನಡೆಯುತ್ತಿದೆ. ಹೈದರಾಬಾದ್​ ಸನ್​ರೈಸರ್ಸ್​​ ತಂಡದಲ್ಲಿ ಆಡುತ್ತಿರುವಾಗ ಕಾಲೂ ಎಂದು ಕರೆಯುತ್ತಿದ್ದರು (ಕರಿಯ).  ಅಂದು ನನಗೆ ಇದರ ಅರ್ಥ ತಿಳಿದಿರಲಿಲ್ಲ. ಆಗ ನನ್ನನ್ನು ಹಾಗೇಕೆ ಕರೆಯುತ್ತಿದ್ದರು ಎಂದು ಈಗ ತಿಳಿದಿದೆ ಎಂದಿದ್ದರು.

news18-kannada
Updated:June 9, 2020, 5:36 PM IST
ಸ್ಯಾಮಿಯನ್ನು ಜನಾಂಗೀಯ ನಿಂದನೆ ಮಾಡಿದ್ದು ಮತ್ಯಾರು ಅಲ್ಲ; ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ?
ಆದರೆ ಅಂದು ನನ್ನನ್ನು ಮತ್ತು ಶ್ರೀಲಂಕಾ ಆಟಗಾರ ತಿಸಾರ ಪೆರೇರಾರನ್ನು ಯಾಕೆ ಕಾಲೂ ಅಂತ ಕರೆಯುತ್ತಿದ್ದರು ಎಂಬುದು ತಿಳಿದಿರಲಿಲ್ಲ. ನಾನು ಕಪ್ಪನೆಯ ಗಟ್ಟಿಮುಟ್ಟಾದ ವ್ಯಕ್ತಿ ಎಂದು ಹೇಳುತ್ತಿದ್ದಾರೆ ಅಂದುಕೊಂಡಿದ್ದೆ. ಆದರೆ ಇದರ ನಿಜವಾದ ಅರ್ಥ ತಿಳಿದ ಮೇಲೆ ನನಗೆ ಕೋಪ ಬಂದಿದೆ ಎಂದು ಸ್ಯಾಮಿ ತಮ್ಮ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.
  • Share this:
ಇತ್ತೀಚೆಗೆ ವೆಸ್ಟ್​​ ಇಂಡೀಸ್​ ತಂಡದ ಮಾಜಿ ನಾಯಕ ಡೆರನ್​ ಸ್ಯಾಮಿ ಜನಾಂಗೀಯ ನಿಂದನೆ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಐಪಿಎಲ್​​​ ಪಂದ್ಯದ ವೇಳೆ ಸನ್​ರೈಸರ್ಸ್​ ಹೈದರಾಬಾದ್​​​​ ತಂಡದ ಪರ ಆಡುವಾಗ ತನ್ನನ್ನು ಕಾಲೂ (ಕರಿಯ) ಎಂದು ಕರೆಯುತ್ತಿದ್ದರು ಎಂದು ಹೇಳಿದ್ದರು. ಅದಕ್ಕೆ ಸರಿಯಾಗಿ ಟೀಂ ಇಂಡಿಯಾದ ಆಟಗಾರೊಬ್ಬರು ಸ್ಯಾಮಿಯನ್ನು ಕಾಲೂ ಎಂದು ಉಲ್ಲೇಖಿಸಿರುವ ಹಳೇಯ ಫೋಟೋವೊಂದು ಸದ್ಯ ವೈರಲ್​ ಆಗುತ್ತಿದೆ. 

ಟೀಂ ಇಂಡಿಯಾದ ವೇಗಿ ಇಶಾಂತ್​ ಶರ್ಮಾ ಅವರು ಸ್ಯಾಮಿಯನ್ನು ಕಾಲೂ ಎಂದು ಉಲ್ಲೇಖಿಸಿರುವ ಹಳೇಯ ಇನ್​​ಸ್ಟಾಗ್ರಾಂ ಪೋಸ್ಟ್​ವೊಂದು ವೈರಲ್​ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟಿಕೊಂಡಿದೆ.

ಇಶಾಂತ್​ ಶರ್ಮಾ ಮೇ 14, 2014ರಲ್ಲಿ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಭುವನೇಶ್ವರ್​ ಕುಮಾರ್​ ಮತ್ತು ಡೆರೆನ್​ ಸ್ಯಾಮಿ ಜೊತೆಗೆ ಇಶಾಂತ್​​ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದರು. ಫೋಟೋಗೆ ನಾನು, ಭುವಿ, ಕಾಲೂ ಮತ್ತು ಗನ್​ ಸನ್​​ರೈಸರ್ಸ್​ ಎಂದು ಅಡಿಬರಹ ಕೊಟ್ಟಿದ್ದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 

 
View this post on Instagram
 

Me, bhuvi, kaluu and gun sunrisers


A post shared by Ishant Sharma (@ishant.sharma29) on


ಡೆರೆನ್​ ಸ್ಯಾಮಿ ಇತ್ತೀಚೆಗೆ ಐಪಿಎಲ್​​​​ನಲ್ಲೂ ಜನಾಂಗೀಯ ನಿಂದನೆ ನಡೆಯುತ್ತಿದೆ. ಹೈದರಾಬಾದ್​ ಸನ್​ರೈಸರ್ಸ್​​ ತಂಡದಲ್ಲಿ ಆಡುತ್ತಿರುವಾಗ ಕಾಲೂ ಎಂದು ಕರೆಯುತ್ತಿದ್ದರು (ಕರಿಯ).  ಅಂದು ನನಗೆ ಇದರ ಅರ್ಥ ತಿಳಿದಿರಲಿಲ್ಲ. ಆಗ ನನ್ನನ್ನು ಹಾಗೇಕೆ ಕರೆಯುತ್ತಿದ್ದರು ಎಂದು ಈಗ ತಿಳಿದಿದೆ ಎಂದಿದ್ದರು.

ಶ್ರೀಲಂಕಾ ತಂಡದ ತಿಸಾರ ಅವರನ್ನು ಕಾಲೂ ಎಂದು ಕರೆಯುತ್ತಿದ್ದರು. ಅಂದು ನಾನು ಕಪ್ಪನೆಯ ಗಟ್ಟಿಮುಟ್ಟಾದ ವ್ಯಕ್ತಿ ಎಂದು ಹೇಳುತ್ತಿದ್ದಾರೆ ಅಂದುಕೊಂಡಿದ್ದೆ. ಆದರೆ ಇದರ ನಿಜವಾದ ಅರ್ಥ ತಿಳಿದು ಕೋಪ ಬಂದಿದೆ ಎಂದು ತಮ್ಮ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ಇತ್ತೀಚೆಗೆ ಬರೆದುಕೊಂಡಿದ್ದರು.

ಇದೀಗ ಟೀಂ ಇಂಡಿಯಾದ ವೇಗಿ ಇಶಾಂತ್​ ಶರ್ಮಾ ಅವರು ಸ್ಯಾಮಿಯನ್ನು ಕಾಲೂ ಎಂದಿರುವ ಪೋಸ್ಟ್​ವೊಂದು ವೈರಲ್​​ ಆಗಿದೆ.

ಫಾರ್ಮ್​ಹೌಸ್​ನಲ್ಲಿ ಕುಳಿತುಕೊಂಡು ಕಿರುಚಿತ್ರ ಮಾಡಲು ಹೊರಟ ಸಲ್ಲು ಭಾಯ್​​?
First published: June 9, 2020, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading