HOME » NEWS » Sports » CRICKET DANIELLE WYATT REVEALS HOW SHE FIRST MET SACHIN AND ARJUN TENDULKAR HG

ತೆಂಡೂಲ್ಕರ್ ಮಗನ ಜೊತೆ ಇಂಗ್ಲೆಂಡ್​​ ಕ್ರಿಕೆಟ್ ಆಟಗಾರ್ತಿ!; ಇವರಿಬ್ಬರ ಸ್ನೇಹ ಶುರುವಾಗಿದ್ದು ಹೇಗೆ?

ನಾನು ಪರಿಚಯ ಮಾಡಿಕೊಂಡಿರುವ ಸಮಯದಲ್ಲಿ ಅರ್ಜುನ್​ಗೆ 10 ವರ್ಷವಿರಬಹುದು. ಆತ ತುಂಬಾ ಚಿಕ್ಕವನಿದ್ದ. ನಮ್ಮ ಮೊದಲ ಭೇಟಿಯ ಚಿತ್ರ ಗೂಗಲ್​ನಲ್ಲಿ ಇದೆ. ನಾನು ಅಂದು ಅರ್ಜುನ್​ಗೆ ಬೌಲಿಂಗ್​​ ಮಾಡಿದ್ದೆ.

news18-kannada
Updated:June 17, 2020, 3:44 PM IST
ತೆಂಡೂಲ್ಕರ್ ಮಗನ ಜೊತೆ ಇಂಗ್ಲೆಂಡ್​​ ಕ್ರಿಕೆಟ್ ಆಟಗಾರ್ತಿ!; ಇವರಿಬ್ಬರ ಸ್ನೇಹ ಶುರುವಾಗಿದ್ದು ಹೇಗೆ?
ಅರ್ಜುನ್​ ತೆಂಡೂಲ್ಕರ್-ಡೇನಿಯಲ್​ ವ್ಯಾಟ್
  • Share this:
ಇಂಗ್ಲೆಂಡ್​​ ಮಹಿಳಾ ಕ್ರಿಕೆಟ್​ ಆಟಗಾರ್ತಿ ಡೇನಿಯಲ್​ ವ್ಯಾಟ್  ಹಿಂದೊಮ್ಮೆ​​  ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಕೊಹ್ಲಿ ಒಪ್ಪಿರಿಲಿಲ್ಲ. ಇದೀಗ 29 ವರ್ಷದ ವ್ಯಾಟ್​​ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ಮಗ ಅರ್ಜುನ್​​ ತೆಂಡೂಲ್ಕರ್​ ಜೊತೆ ಸ್ನೇಹ ಹೊಂದಿದ್ದಾರೆ.

ಇತ್ತೀಚೆಗೆ ಡೇನಿಯಲ್​ ವ್ಯಾಟ್​​  ಅವರು ಅರ್ಜುನ್​​ ತೆಂಡೂಲ್ಕರ್ ​ಜೊತೆಗಿನ ಸ್ನೇಹ ಬೆಳೆದುಬಂದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.  ಸಚಿನ್​ ಮತ್ತು ಅರ್ಜುನ್​ ತೆಂಡೂಲ್ಕರ್​ರನ್ನು ನಾನು ಲಾರ್ಡ್ಸ್​​​​​​ ಕ್ರಿಕೆಟ್​ ಮೈದಾನದಲ್ಲಿ ಮೊದಲು ಬಾರಿ ಭೇಟಿ ಮಾಡಿದೆ. 2009 ಅಥವಾ 2010ರಲ್ಲಿ ಇರಬಹುದು. ಲಾರ್ಡ್ಸ್​​​​ನಲ್ಲಿ ತರಬೇತಿ ಪಡೆಯುತ್ತಿದ್ದ ಎಂಸಿಸಿ ಯುವ ಕ್ರಿಕೆಟಿಗರ ಜತೆಗೆ ನಾನಿದ್ದೆ. ಆಗ ಅಲ್ಲಿಗೆ ಅಚಿನ್​ ಬಂದಿದ್ದರು. ಅವರನ್ನು ನೋಡಿ ಅವರ ಬಳಿ ತೆರಳಿ ನನ್ನ ಪರಿಚಯ ಮಾಡಿಕೊಂಡೆ.

ನಾನು ಪರಿಚಯ ಮಾಡಿಕೊಂಡಿರುವ ಸಮಯದಲ್ಲಿ ಅರ್ಜುನ್​ಗೆ 10 ವರ್ಷವಿರಬಹುದು. ಆತ ತುಂಬಾ ಚಿಕ್ಕವನಿದ್ದ. ನಮ್ಮ ಮೊದಲ ಭೇಟಿಯ ಚಿತ್ರ ಗೂಗಲ್​ನಲ್ಲಿ ಇದೆ. ನಾನು ಅಂದು ಅರ್ಜುನ್​ಗೆ ಬೌಲಿಂಗ್​​ ಮಾಡಿದ್ದೆ. ಆತ ಉತ್ತಮವಾಗಿ ಬ್ಯಾಟಿಂಗ್​ ಮಾಡಿದ್ದ ಎಂದು ಡೇನಿಯಲ್​​ ವ್ಯಾಟ್​  ಹೇಳಿದ್ದಾರೆ.

ಅರ್ಜುನ್​ ತೆಂಡೂಲ್ಕರ್


ಅರ್ಜುನ್​ ತೆಂಡೂಲ್ಕರ್-ಡೇನಿಯಲ್​ ವ್ಯಾಟ್


ಆದಾದ ಬಳಿಕ ಸಚಿನ್​ ಮತ್ತು ಅರ್ಜುನ್​​ ಲಾರ್ಡ್ಸ್​​ಗೆ ತರಬೇತಿಗೆ ಬಂದಾಗಲೆಲ್ಲ ಅವರನ್ನು ಹೋಗಿ ಭೇಟಿ ಮಾಡುತ್ತಿದ್ದೆ. ನನಗೆ ಬೌಲಿಂಗ್​ ಮಾಡುವಂತೆ ಅರ್ಜುನ್​​ ಬಳಿ ಕೇಳಿಕೊಳ್ಳುತ್ತಿದ್ದೆ. ಇತ್ತೀಚಿನ ದಿನಗಳಲ್ಲಿ ಆತನ ಬೌಲಿಂಗ್​ ಸಾಕಷ್ಟು ಸುಧಾರಿಸಿದೆ. ನಾನು ಬೌನ್ಸರ್​​ ಎಸೆದು ನಿನ್ನ ತಲೆಗೆ ಏಟು ಮಾಡುತ್ತಾನೆಂದು ಹೇಳುತ್ತಿರುತ್ತಾನೆ. ಮುಂದಿನ ದಿನಗಳಲ್ಲಿ ಆತನ ಬೌಲಿಂಗ್​ ಎದುರಿಸುವುದು ಕಷ್ಟವಾಗಬಹುದು. ಅಪಾಯಕಾರಿ ವೇಗಿಯಾಗಬಹುದು ಎಂದು ವ್ಯಾಟ್​​ ಹೇಳಿಕೊಂಡಿದ್ದಾರೆ.
First published: June 17, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories