ಜನಪ್ರಿಯ ಪಾನೀಯ ಕಂಪನಿಯೊಂದು ಸ್ಟಾರ್ ಆಟಗಾರನ ಮಾತಿನಿಂದಾಗಿ 30 ಕೋಟಿ ನಷ್ಟ ಅನುಭವಿಸಿದೆ ಎಂದರೆ ನಂಬುತ್ತೀರಾ?. ಹೌದು, ನಂಬಲೇಬೇಕು!. ಕ್ರಿಸ್ಚಿಯಾನೊ ರೊನಾಲ್ಡೊ ಅವರು ಯುರೋ ಕಪ್ 2020 ವೇಳೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಟೇಬಲ್ ಮೇಲಿದ್ದ ಕೋಕಾಕೋಲಾ ಬಾಟಲಿ ಬದಿಗೆ ಸರಿಸಿ ಅಲ್ಲಿದ್ದ ನೀರು ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಇದನ್ನು ಕುಡಿಯಿರಿ ಎಂದಿದ್ದಾರೆ. ಇದರಿಂದಾಗಿ ಕೋಕಾಕೋಲಾ ಕಂಪನಿ 30 ಕೋಟಿ ನಷ್ಟವನ್ನು ಅನುಭವಿಸಿದೆ.
ಮಂಗಳವಾರದಂದು ಪೋರ್ಚುಗಲ್ ಮತ್ತು ಹಂಗರಿ ತಂಡದ ನಡುವೆ ಪಂದ್ಯಾಟ ಏರ್ಪಡಿಸಲಾಗಿತ್ತು. ಪಂದ್ಯಕ್ಕೂ ಮುನ್ನ ಕ್ರಿಸ್ಟಿಯಾನೊ ರೊನಾಲ್ಡೊ ಅವರು ನೀರಿನ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬಾಯಾರಿಕೆಯಾದರೆ ನೀರು ಕುಡಿಯರಿ. ಕಾರ್ಬೋನೇಟೆಡ್ ಮಿಶ್ರಣದ ಡ್ರಿಂಗ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ರೊನಾಲ್ಡೊ ಹೇಳಿದ ಒಂದು ಮಾತಿಗೆ ಕೋಕಾಕೋಲಾ ಕಂಪನಿ ಶೇರ್ ಮಾರುಕಟ್ಟೆ ದಿಢೀರ್ ಕುಸಿದಿದೆ. ಬರೋಬ್ಬರಿ 2 ಬಿಲಿಯನ್ ನಷ್ಟ ಅನುಭವಿಸಿದೆ.
Do NOT put Coca Cola in front of Cristiano Ronaldo 😠
This is absolutely brilliant 🤣 pic.twitter.com/bw9FYlTOI4
— Goal (@goal) June 15, 2021
ಫ್ರಾನ್ಸ್ ಮೂಲಕ ಸ್ಟಾರ್ ಆಟಗಾರ ಪೌಲ್ ಪೊಗ್ಬಾ ಕೂಡ ಪತ್ರಿಕಾಗೋಷ್ಠಿ ವೇಲೆ ಟೇಬಲ್ ಮೇಲಿದ್ದಾ Heineken ಹೆಸರಿನ ಬೀರ್ ಬಾಟಲಿಯನ್ನು ಬದಿಗೆ ಸರಿಸಿದ್ದಾರೆ. ಇದರಿಂದಾಗಿಗೂ ಈ ಬೀರ್ ಕಂಪನಿಗೆ ನಷ್ಟ ಉಂಟಾಗಿದೆ.
ಸಾಕಷ್ಟು ಜನರು ಸೆಲೆಬ್ರಿಟಿಗಳು ಮತ್ತು ಅವರು ಅನುಸರಿಸುವ, ಪ್ರಚಾರ ಮಾಡುವ ಬ್ರಾಂಡ್ಗಳ ಮೊರೆ ಹೋಗಿರುತ್ತಾರೆ. ಸೆಲೆಬ್ರಿಟಿ ಬಳಸಿದ ಬ್ರಾಂಡ್ ಬಳಸಲು ಮುಂದಾಗುತ್ತಾರೆ. ಕೋಕಾಕೋಲಾ ಕಂಪನಿ ಕೂಡ ಅಷ್ಟೇ ತನ್ನ ಪ್ರಚಾರಕ್ಕಾಗಿ, ಮಾರುಕಟ್ಟೆಯಲ್ಲಿ ಸ್ಥಾನ ಗಿಟ್ಟಿಸಲು ನಾನಾ ಸ್ಟಾರ್ ಆಟಗಾರರನ್ನು, ಸೆಲೆಬ್ರಿಟಿಗಳನ್ನು ಬಳಸಿಕೊಂಡಿದೆ. ಇದೀಗ ಸ್ಟಾರ್ ಆಟಗಾರನ ಒಂದೇ ಒಂದು ಮಾತಿನಿಂದಾಗಿ ಈ ಪಾನೀಯ ಕಂಪನಿಯ ಮಾರುಕಟ್ಟೆ ದಿಢೀರ್ ಕುಸಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ