Euro 2020 ಚಾಂಪಿಯನ್ಶಿಪ್ ನಡೆಯುತ್ತಿದ್ದು, ಮಂಗಳವಾರ ನಡೆದ ಪಂದ್ಯದಲ್ಲಿ ಪೊರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಎರಡು ಬಾರಿ ಗೋಲು ಹೊಡೆಯುವ ಮೂಲಕ ಅತ್ಯಧಿಕ ಗೋಲು ಹೊಡೆಯುವ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ರೊನಾಲ್ಡೊ ಈವರೆಗೆ ಯುರೊ ಕಪ್ನಲ್ಲಿ 11 ಗೋಲು ಬಾರಿಸಿದ್ದು, ಅವರ ಸಾಧನೆ ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸವನ್ನು ನೀಡಿದೆ.
ಮಂಗಳವಾರ ಹಾಲಿ ಚಾಂಪಿಯನ್ ಪೋರ್ಚುಗಲ್ ಮತ್ತು ಹಂಗರಿ ವಿರುದ್ಧ ಪಂದ್ಯಾಟ ಏರ್ಪಡಿಸಲಾಗಿತ್ತು. ಅದರಲ್ಲಿ ರೊನಾಲ್ಡೊ ತಂಡ 3-0 ಅಂತರದಲ್ಲಿ ಜಯ ಗಳಿಸಿದೆ.
ಪೋರ್ಚುಗಲ್ ಮತ್ತು ಹಂಗರಿ ತಂಡದ ನಡುವಿನ ಪಂದ್ಯಾಟದ ವೇಳೆ ರಫೆಲ್ ಗುರೇರೊ 84 ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. 87ನೇ ನಿಮಿಷದಲ್ಲಿ ನಡೆದ ಪೆನಾಲ್ಟಿ ಸಮಯದಲ್ಲಿ ರೊನಾಲ್ಡೊ ಚೆಂಡನ್ನು ಗೋಲಿಗೆ ಗುರಿಯಾಗಿಸಿದರು.
ಯುರೊ ಕಪ್ನಲ್ಲಿ ಹೆಚ್ಚು ಗೋಲು ಬಾರಿಸಿದ ಆಟಗಾರರು
1) ಕ್ರಿಸ್ಟಿಯಾನೊ ರೊನಾಲ್ಡೊ - 11 ಗೋಲುಗಳು
2) ಮೈಕೆಲ್ ಪ್ಲಾಟಿನಿ - 9 ಗೋಲುಗಳು
3) ಅಲನ್ ಶಿಯರೆರ್ - 7 ಗೋಲುಗಳು
4) ಆಂಟೊಯಿನ್ ಗ್ರಿಜ್ಮನ್ - 6 ಗೋಲುಗಳು
5) ರೂಡ್ ವ್ಯಾನ್ ನಿಸ್ಟೆಲ್ರೂಯ್ - 6 ಗೋಲುಗಳು
ಜೂನ್ 12 ರಿಂದ ಪಂದ್ಯ ಪ್ರಾರಂಭವಾಗಿದೆ. ಶನಿವಾರದಂದು ನಡೆದ ಇಟಲಿ ತಂಡದ ಎದುರು ಟರ್ಕಿ 3 ಗೋಲು ಬಾರಿಸಿ ಜಯ ಸಾಧಿಸಿತು. ವೇಲ್ಸ್ ಮತ್ತು ಸ್ವಿಝರ್ಲ್ಯಾಂಡ್ ನಡುವೆ ಪಂದ್ಯಾಟ ಟೈ ಆಗಿದೆ. ಇನ್ನು ಫಿನ್ಲ್ಯಾಂಡ್ ಮೊದಲ ಪಂದ್ಯದಲ್ಲಿ 1 ಗೋಲು ಬಾರಿಸಿ ಜಯ ಸಾಧಿಸಿದೆ.
ಆದಿತ್ಯವಾರ ನಡೆದ ಪಂದ್ಯದಲ್ಲಿ ವಿರುದ್ಧ ತಂಡಗಳ ಎದುರು ಬೆಲ್ಜಿಯಂ-3, ಇಂಗ್ಲೆಂಡ್-1, ಆಸ್ಟ್ರೀಯಾ-3 ಗೋಲು ಬಾರಿಸಿ ಜಯ ಸಾಧಿಸಿದೆ.
ಸೋಮವಾರದ ನಡೆದ ಪಂದ್ಯಾಟದಲ್ಲಿ ವಿರುದ್ಧ ತಂಡಗಳ ಎದುರು ನೆದರ್ಲ್ಯಾಂಡ್-3, ರಿಪಬ್ಲಿಕ್- 2, ಸ್ಲೋವಾಕಿಯಾ -2 ಗೋಲು ಬಾರಿಸಿ ಜಯ ತನ್ನದಾಗಿಸಿಲಕೊಂಡಿದೆ.
ಅಂತೆಯೇ ನಿನ್ನೆ ನಡೆದ ಪಂದ್ಯದಲ್ಲಿ ಹಂಗೇರಿ ವಿರುದ್ದ ಪೋರ್ಚುಗಲ್ 3 ಗೋಲು ಬಾರಿಸಿದೆ.
ಇಂದು ನಡೆದ ಫ್ರಾನ್ಸ್ ಮತ್ತು ಜಮರ್ನಿ ವಿರುದ್ಧ ಪಂದ್ಯಗದಲ್ಲಿ ಫ್ರಾನ್ಸ್ 1 ಗೋಲು ಬಾರಿಸಿ ಮೊದಲ ಪಂದ್ಯವನ್ನು ತನ್ನದಾಗಿಸಿಕೊಂಡಿದೆ
ಫುಟ್ಬಾಲ್ ಪ್ರಿಯರಿಗಾಗಿ 1960ರಿಂದ ಈ ಟೂರ್ನಮೆಂಟ್ ಆರಂಭವಾಯಿತು. ಈ ವರ್ಷ ಇತಿಹಾಸದಲ್ಲೇ ಮೊದಲ ಬಾರಿಗೆ 51 ಪಂದ್ಯಗಳು ಯುರೋಪಿನಾದ್ಯಂತ ಅತಿಥೇಯ ನಗರದಲ್ಲಿ ನಡೆಯಲಿದೆ.
UEFA EURO 2020 ಪಂದ್ಯ 11 ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ ಗಳ ಜತೆಗೆ 11 ನಗರಗಳಲ್ಲಿ ಜುಲೈ 12ರವರೆಗೆ ಪಂದ್ಯ ನಡೆಯಲಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ