ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಲ್ರೌಂಡರ್ ಸಹೋದರರು ಎಂದೇ ಖ್ಯಾತರಾಗಿರುವ ಕ್ರುನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಇಂದು ಅನಾರೋಗ್ಯದ ಕಾರಣದಿಂದಾಗಿ ಮೃತಪಟ್ಟಿದ್ದಾರೆ. ಹೀಗಾಗಿ ಸೈಯದ್ ಮುಸ್ತಾಕ್ ಅಲಿ ದೇಶೀಯ ಟಿ20 ಟೂರ್ನಿಯಲ್ಲಿ ಬರೋಡ ತಂಡದ ನಾಯಕತ್ವ ವಹಿಸಿಕೊಂಡಿರುವ ಕ್ರುಣಾಲ್ ಪಾಂಡ್ಯ ಟೂರ್ನಿಯನ್ನು ಅರ್ಧಕ್ಕೆ ಮೊಟಕಗೊಳಿಸಿ ತಂದೆ ಅಂತಿಮ ವಿಧಿ ವಿಧಾನ ನೆರವೇರಿಸಲು ತೆರಳಿದ್ದಾರೆ. ಇನ್ನೂ ಪಾಂಡ್ಯ ಸಹೋದರರ ತಂದೆಯ ಸಾವಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇತಿದಂತೆ ಎಲ್ಲಾ ಪ್ರಮುಖರು ಕಂಬನಿ ಮಿಡಿದಿದ್ದಾರೆ. ಅಲ್ಲದೆ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
"ಆಲ್ಡೌಂಡರ್ ಹಾಗೂ ಬರೋಡ ತಂಡದ ನಾಯಕ ಕ್ರುನಾಲ್ ಪಾಂಡ್ಯ ಅವರು ತಮ್ಮ ತಂದೆಯ ಮರಣದಿಂದಾಗಿ ಸೈಯದ್ ಮುಸ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಜೈವಿಕ ಬಬಲ್ ಅನ್ನು ತೊರೆದಿತ್ತು ತಮ್ಮ ಕುಟುಂಬದ ಜೊತೆ ಕೂಡಿಕೊಳ್ಳಲು ಹೊರಟಿದ್ದಾರೆ. ತಂದೆಯ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಆ ದೇವರು ಪಾಂಡ್ಯ ಸಹೋದರರಿಗೆ ನೀಡಲಿ. ಈ ಘಟನೆಯಿಂದ ಬರೋಡ ಕ್ರಿಕೆಟ್ ಅಸೋಸಿಯೇಷನ್ ಸಹ ದುಖಃತಪ್ತವಾಗಿದೆ" ಎಂದು ಬರೋಡಾ ಕ್ರಿಕೆಟ್ ಅಸೋಸಿಯೇಶನ್ ಸಿಇಒ ಶಿಶಿರ್ ಹಟ್ಟಂಗಡಿ ಎಎನ್‌ಐಗೆ ತಿಳಿಸಿದ್ದಾರೆ.
ನಡೆಯುತ್ತಿರುವ ಸೈಯದ್ ಮುಷ್ತಾಕ್ ಪಂದ್ಯಾವಳಿಯಲ್ಲಿ ಕ್ರುನಾಲ್ ಪಾಂಡ್ಯ ಇದುವರೆಗೆ ಬರೋಡ ಪರ ಮೂರು ಪಂದ್ಯಗಳನ್ನು ಆಡಿದ್ದು, ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ, ಉತ್ತರಾಖಂಡ ವಿರುದ್ಧದ ಮೊದಲ ಪಂದ್ಯದಲ್ಲಿ 76 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.
Heartbroken to hear about the demise of Hardik and Krunal's dad. Spoke to him a couple of times, looked a joyful and full of life person. May his soul rest in peace. Stay strong you two. @hardikpandya7@krunalpandya24
ಟ್ವಿಟರ್ ಸಂದೇಶದ ಮೂಲಕ ಹಾರ್ದಿಕ್ ಮತ್ತು ಕ್ರುನಾಲ್ ಅವರಿಗೆ ಸಂತಾಪ ಸೂಚಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, "ಹಾರ್ದಿಕ್ ಮತ್ತು ಕ್ರುನಾಲ್ ಅವರ ತಂದೆಯ ನಿಧನದ ವಿಚಾರ ತಿಳಿದು ದುಖಃವಾಗಿದೆ. ನಾನು ಅವರ ಬಳಿ ಒಂದೆರಡು ಬಾರಿ ಮಾತನಾಡಿದ್ದೆ. ಅವರು ಅತ್ಯಂತ ಸಂತೋಷದಾಯಕ ಮತ್ತು ಪೂರ್ಣ ಜೀವನ ಅನುಭವಿಸಿದ ವ್ಯಕ್ತಿಯಂತೆ ಕಂಡರು. ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ತಿಳಿಸಿದ್ದಾರೆ.
Remember meeting uncle for the first time at motibagh. He was so keen for his sons to play good cricket. My condolences to You and family. May god give you strength to pass through this difficult time @krunalpandya24@hardikpandya7
ಮಾಜಿ ಆಲ್ರೌಂಡರ್ ಇರ್ಫಾನ್ ಪಠಾನ್ ಸಹ ಟ್ವೀಟ್ ಮೂಲಕ ವಿಷಾಧಿಸಿದ್ದು, "ಮೋತಿಬಾಗ್‌ನಲ್ಲಿ ಮೊದಲ ಅವರನ್ನು ನಾನು ಭೇಟಿಯಾದದ್ದು ನೆನಪಿದೆ. ಅವರು ತಮ್ಮ ಮಕ್ಕಳನ್ನು ಕ್ರಿಕೆಟ್ ಕ್ಷೇತ್ರದಲ್ಲಿ ತೊಡಗಿಸಲು ತುಂಬಾ ಉತ್ಸುಕರಾಗಿದ್ದರು. ನಿಮಗೆ ಮತ್ತು ಕುಟುಂಬಕ್ಕೆ ನನ್ನ ಸಂತಾಪಗಳು. ಈ ಕಷ್ಟದ ಸಮಯವನ್ನು ಹಾದುಹೋಗಲು ದೇವರು ನಿಮಗೆ ಶಕ್ತಿಯನ್ನು ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ದದ ಏಕದಿನ ಮತ್ತು ಟಿ-20 ಸರಣಿಯನ್ನು ಮುಗಿಸಿ ಭಾರತಕ್ಕೆ ಮರಳಿದ್ದರು. ಮುಂದಿನ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಅವರು ಅಭ್ಯಾಸ ನಡೆಸುತ್ತಿದ್ದಾರೆ. ಹೀಗಾಗಿ ಪ್ರಸ್ತುತ ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಅವರು ಭಾಗವಹಿಸುತ್ತಿಲ್ಲ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ