Irrfan Khan: ಆಧುನಿಕ ಬಾಲಿವುಡ್​ ಕಿಂಗ್ ಇನ್ನಿಲ್ಲ; ಇರ್ಫಾನ್ ನಿಧನಕ್ಕೆ ಕ್ರಿಕೆಟಿಗರ ಸಂತಾಪ!

ಇರ್ಫಾನ್ ಅವರಿಗೆ ಕ್ರಿಕೆಟ್ ಮೇಲೂ ಹೆಚ್ಚು ಒಲವಿತ್ತು. ಉತ್ತಮ‌ ಕ್ರಿಕೆಟರ್ ಆಗಬೇಕು ಎನ್ನುವ ಆಸೆ ಹೊಂದಿದ್ದ ಇರ್ಫಾನ್ ನಂತರ ಆಗಿದ್ದು ಪ್ರಸಿದ್ಧ ಸಿನಿಮಾ‌ ನಟ.

news18-kannada
Updated:April 29, 2020, 2:27 PM IST
Irrfan Khan: ಆಧುನಿಕ ಬಾಲಿವುಡ್​ ಕಿಂಗ್ ಇನ್ನಿಲ್ಲ; ಇರ್ಫಾನ್ ನಿಧನಕ್ಕೆ ಕ್ರಿಕೆಟಿಗರ ಸಂತಾಪ!
ಇರ್ಫಾನ್​ ಖಾನ್​
  • Share this:
ಬಾಲಿವುಡ್ ಖ್ಯಾತನಟ ಇರ್ಫಾನ್‍ಖಾನ್ 54ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ಧಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬಾಲಿವುಡ್, ಬ್ರಿಟಿಷ್ ಮತ್ತು ಅಮೆರಿಕನ್ ಸಿನಿಮಾಗಳಲ್ಲಿ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದ ಇರ್ಫಾನ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಇರ್ಫಾನ್ ಅವರ ನಿಧನಕ್ಕೆ ಬಾಲಿವುಡ್, ರಾಜಕೀಯ ಕ್ಷೇತ್ರ ಮಾತ್ರವಲ್ಲದೆ ಕ್ರೀಡಾ ಜಗತ್ತು ಕೂಡ ಆಘಾತ ವ್ಯಕ್ತಪಡಿಸಿದೆ. ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, ಇರ್ಫಾನ್ ಖಾನ್ ನನ್ನ ಮೆಚ್ಚಿನ ನಟ. ನಾನು ಅವರ ಬಹತೇಕ ಎಲ್ಲ ಸಿನಿಮಾಗಳನ್ನು ವೀಕ್ಷಿಸಿದ್ದೇನೆ. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

Irrfan Khan Passes Away: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್​ ಖ್ಯಾತ ನಟ ಇರ್ಫಾನ್​ ಖಾನ್​ ನಿಧನ

 ಸಚಿನ್ ಜೊತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ ಸೇರಿದಂತೆ ಅನೇಕರು ಇರ್ಫಾನ್ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

  Irrfan Khan Passes Away: ನೈಜ ಅಭಿನಯದಿಂದಲೇ ಮನ ಗೆದ್ದ ನಟ ಇರ್ಫಾನ್ ಖಾನ್ ಇನ್ನಿಲ್ಲ

ಇರ್ಫಾನ್ ಅವರಿಗೆ ಕ್ರಿಕೆಟ್ ಮೇಲೂ ಹೆಚ್ಚು ಒಲವಿತ್ತು. ಉತ್ತಮ‌ ಕ್ರಿಕೆಟರ್ ಆಗಬೇಕು ಎನ್ನುವ ಆಸೆ ಹೊಂದಿದ್ದ ಇರ್ಫಾನ್ ನಂತರ ಆಗಿದ್ದು ಪ್ರಸಿದ್ಧ ಸಿನಿಮಾ‌ ನಟ.

ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್​ನಲ್ಲೂ ಇರ್ಫಾನ್​ ಖಾನ್​ ಹೆಸರು ಮಾಡಿದ್ದರು. ತಮ್ಮ ನೈಜ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. 2 ವರ್ಷಗಳಿಂದ ಕ್ಯಾನ್ಸರ್​ ರೋಗದಿಂದ ಬಳಲುತ್ತಿದ್ದ ಇರ್ಫಾನ್​ ಖಾನ್​ ಮುಂಬೈನ ಕೋಕಿಲಾಬೆನ್​ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವಿಪರ್ಯಾಸವೆಂದರೆ ಇರ್ಫಾನ್​ ಖಾನ್​ ಅವರ ತಾಯಿ 95 ವರ್ಷದ ಸಯೀದಾ ಬೇಗಂ ಕೇವಲ 3 ದಿನಗಳ ಹಿಂದೆ ಸಾವನ್ನಪ್ಪಿದ್ದರು. ಅಮ್ಮ ಕೊನೆಯುಸಿರೆಳೆದ ಮೂರೇ ದಿನಕ್ಕೆ ಇರ್ಫಾನ್​ ಕೂಡ ಇಹಲೋಕ ತ್ಯಜಿಸಿದ್ದಾರೆ. ಲಾಕ್​ಡೌನ್​ನಿಂದಾಗಿ ತಾಯಿಯ ಅಂತ್ಯಸಂಸ್ಕಾರಕ್ಕೂ ಹೋಗಲಾಗದ ಇರ್ಫಾನ್​ ಖಾನ್​ ವಿಡಿಯೋ ಕಾಲ್​ ಮೂಲಕ ತಾಯಿಯ ಅಂತಿಮ ದರ್ಶನ ಪಡೆದಿದ್ದರು.
First published: April 29, 2020, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading