HOME » NEWS » Sports » CRICKET CRICKETER DIED 21 YEAR OLD FORMER BANGLADESH U19 BATSMAN MOHAMMAD SOZIB DIES BY SUICIDE VB

Cricketer Suicide: ಟಿ-20 ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾದ ಕ್ರಿಕೆಟಿಗ

Cricket Player Suicide: ಟಿ -20 ಪಂದ್ಯಾವಳಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ನಂತರ ಅವರು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದೆ.

news18-kannada
Updated:November 17, 2020, 10:34 AM IST
Cricketer Suicide: ಟಿ-20 ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾದ ಕ್ರಿಕೆಟಿಗ
ಆತ್ಮಹತ್ಯೆಗೆ ಶರಣಾದ ಕ್ರಿಕೆಟಿಗ
  • Share this:
ಬಾಂಗ್ಲಾದೇಶದ 19 ವರ್ಷದೊಳಗಿನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಸೋಹಿಬ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನ. 14 ರಂದು ಈ ಘಟನೆ ನಡೆದಿದ್ದು ದುರ್ಗಾಪುರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎಂದ ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ.

21 ವರ್ಷದ ಸೋಹಿಬ್ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಕೊನೆಯ ಬಾರಿಗೆ 2017-18ರಲ್ಲಿ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಶೈನ್‌ಪುಕೂರ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದರು. ಅಲ್ಲದೆ 2017ರಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಮೂರು ಯುವ ಏಕದಿನ ಪಂದ್ಯಗಳನ್ನು ಆಡಿದ್ದಾರೆ.

India vs Australia: ಭಾರತ-ಆಸ್ಟ್ರೇಲಿಯಾ ಸರಣಿ ಯಾವಾಗ ಆರಂಭ?, ಎಲ್ಲಿ?, ಎಷ್ಟು ಗಂಟೆಗೆ?: ಇಲ್ಲಿದೆ ಸಂಪೂರ್ಣ ಮಾಹಿತಿ

ಇನ್ನೂ 2017ರ ಅಂಡರ್ 19 ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ ತಂಡವನ್ನು ಅವರು ಪ್ರತಿನಿಧಿಸಿದ್ದರು. 2018ರ ಅಂಡರ್ 19 ವಿಶ್ವಕಪ್​ನಲ್ಲಿ ಸ್ಟ್ಯಾಂಡ್ ಬೈ ಆಟಗಾರರಾಗಿದ್ದರು. ಆದರೆ, ಸೋಹಿಬ್ ಮಾರ್ಚ್ 2018 ರಿಂದ ಯಾವುದೇ ಪಂದ್ಯವನ್ನು ಆಡಿರಲಿಲ್ಲ.

ಟಿ -20 ಪಂದ್ಯಾವಳಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ನಂತರ ಅವರು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್​ ನಿರ್ದೇಶಕ ಖಲೀದ್ ಮೊಹಮ್ಮದ್ ಮಾತನಾಡಿ, ಈ ಸುದ್ದಿಯನ್ನು ನಂಬಲು ನನ್ನಿಂದ ಸಾಧ್ಯವಾಗಿತ್ತಿಲ್ಲ. ತುಂಬಾ ಬೇಸರವಾಗುತ್ತಿದೆ. ಸೋಹಿಬ್ ಆರಂಭಿಕ ಆಟಗಾರನಾಗಿದ್ದ, ಜೊತೆಗೆ ಮಧ್ಯಮ ವೇಗಿ. ಅತ್ಯುತ್ತಮ ಕ್ರಿಕೆಟಿಗ, ಅವನಲ್ಲಿ ಸಾಕಷ್ಟು ಪ್ರತಿಭೆ ಇತ್ತು ಎಂದು ಹೇಳಿದ್ದಾರೆ.
Published by: Vinay Bhat
First published: November 17, 2020, 8:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading