Cricket World Cup History: 1987ರ ವಿಶ್ವಕಪ್ ಗೆಲುವಿನ ಸಂಭ್ರಮ, ಸೋಲಿನ ಕಹಿಯ ರೋಚಕ ಕ್ಷಣಗಳು ಹೇಗಿತ್ತು?

ICC World Cup 2019: ಮೊದಲ 3 ವಿಶ್ವಕಪ್ ಬಳಿಕ ಐಸಿಸಿ ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿತ್ತು. ಹಿಂದಿದ್ದ 60 ಓವರ್​ಗಳ ಪಂದ್ಯವನ್ನು 50 ಓವರ್​​ಗಳಿಗೆ ಇಳಿಸಲಾಯಿತು.

Vinay Bhat | news18
Updated:May 23, 2019, 4:22 PM IST
Cricket World Cup History: 1987ರ ವಿಶ್ವಕಪ್ ಗೆಲುವಿನ ಸಂಭ್ರಮ, ಸೋಲಿನ ಕಹಿಯ ರೋಚಕ ಕ್ಷಣಗಳು ಹೇಗಿತ್ತು?
1987ರ ವಿಶ್ವಕಪ್​ ವಿಜೇತ ತಂಡ ಆಸ್ಟ್ರೇಲಿಯಾ
  • News18
  • Last Updated: May 23, 2019, 4:22 PM IST
  • Share this:
ಇನ್ನೇನು ಕೇವಲ ಆರು ದಿನಗಳಲ್ಲಿ ಐಸಿಸಿ ವಿಶ್ವಕಪ್​ಗೆ ವಿದ್ಯುಕ್ತ ಚಾಲನೆ ಸಿಗಲಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಹಿಂದಿನ ಘತವೈಭವದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 1987ರ ವಿಶ್ವಕಪ್​​ನ ಒಟ್ಟು 8 ತಂಡಗಳ ನಡುವಿನ ಹೋರಾಟ, ಗೆಲುವಿನ ಸಂಭ್ರಮ, ಸೋಲಿನ ಕಹಿಯ ರೋಚಕ ಕ್ಷಣಗಳು ಹೇಗಿತ್ತು? ಈ ಸ್ಟೋರಿ ಓದಿ..

ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ವಿಶ್ವಕಪ್ ಆತಿಥ್ಯ

ಮೊದಲ ಮೂರು ವಿಶ್ವಕಪ್​ಗಳಿಗೆ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ ಹೊರತಾಗಿ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿದ್ದು ಭಾರತ ಹಾಗೂ ಪಾಕಿಸ್ತಾನ. 1987ರ ವಿಶ್ವಕಪ್​ನಲ್ಲಿ ಹಾಲಿ ಚಾಂಪಿಯನ್ ಭಾರತ ವಿಶ್ವಕಪ್​ನ ಫೇವರಿಟ್ ಆಗಿ ಕಣಕ್ಕಿಳಿದಿತ್ತು. ರಿಲಯನ್ಸ್ ಪ್ರಾಯೋಜಕತ್ವವಾಗಿದ್ದರಿಂದ ರಿಲಯನ್ಸ್ ಕಪ್ ಎಂದೇ ವಿಶ್ವಕಪ್​ಗೆ ಹೆಸರಿಡಲಾಗಿತ್ತು.

60 ಓವರ್ ಬದಲು 50 ಓವರ್ ಗೇಮ್

ಮೊದಲ 3 ವಿಶ್ವಕಪ್ ಬಳಿಕ ಐಸಿಸಿ ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿತ್ತು. ಹಿಂದಿದ್ದ 60 ಓವರ್​ಗಳ ಪಂದ್ಯವನ್ನು 50 ಓವರ್​​ಗಳಿಗೆ ಇಳಿಸಲಾಯಿತು. 1983ರ ವಿಶ್ವಕಪ್​ನಲ್ಲಿ ಆಡಿದ್ದ ಜಿಂಬಾಬ್ವೆ 1987ರಲ್ಲೂ ಅರ್ಹತೆ ಪಡೆದಿತ್ತು. ಭಾರತ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ತೋರಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿತು.

ವಿಶ್ವಕಪ್ ಮಹಾಸಮರದಲ್ಲಿ ಎಷ್ಟು ತಂಡಗಳು?, ಯಾವ ಆಟಗಾರರು?, ಸಂಪೂರ್ಣ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ

ಅಂದು ಹಾಲಿ ಚಾಂಪಿಯಾಗಿದ್ದ ಭಾರತ ತಂಡ ಎ ಗುಂಪಿನಲ್ಲಿ ಆಡಿದ್ದ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು 20 ಅಂಕ ಕಲೆಹಾಕಿ ಗ್ರೂಪ್ ಸ್ಟೇಜ್​​ನಲ್ಲಿ ಅಗ್ರಸ್ಥಾನಿಯಾಗಿ ಉಪಾಂತ್ಯ ತಲುಪಿತ್ತು. ಭಾರತದಷ್ಟೇ ಅಂಕ ಕಲೆಹಾಕಿದ್ದ ಆಸ್ಟ್ರೇಲಿಯಾ ಕೂಡ ಗುಂಪಿನ 2ನೇ ತಂಡವಾಗಿ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಿತು. ಬಿ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು.ಲಾಹೋರ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಜಯ

ಲಾಹೋರ್​ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದ ಆಸೀಸ್ ಟೀಂ ಪಾಕಿಸ್ತಾನ ವಿರುದ್ಧ 18 ರನ್​ಗಳಿಂದ ಗೆದ್ದು ಬೀಗಿತು.

ವಾಂಖೆಡೆ ಅಂಗಳದಲ್ಲಿ ಭಾರತಕ್ಕೆ ಮುಖಭಂಗ

ಇನ್ನು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಂ ಹಾಲಿ ಚಾಂಪಿಯನ್ ಆಗಿದ್ದ ಭಾರತಕ್ಕೆ ಆಘಾತ ನೀಡಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಕಪಿಲ್ ದೇವ್ ಪಡೆ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿತು. ಓಪನರ್ ಗ್ರಹಾಮ್ ಗೂಚ್ರ ಅವರ ಶತಕ ಹಾಗೂ ಇಂಗ್ಲೆಂಡ್ ನಾಯಕ ಮೈಕ್ ಗ್ಯಾಟಿಂಗ್​ರ ಅರ್ಧಶತಕ ನೆರವಿನಿಂದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು.

ಇದನ್ನೂ ಓದಿ: ICC World Cup 2019: ಆಂಗ್ಲರ ನಾಡಿಗೆ ಕಾಲಿಟ್ಟ ವಿರಾಟ್ ಸೈನ್ಯ; ಕಿವೀಸ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ

255ರನ್ ಟಾರ್ಗೆಟ್ ಬೆನ್ನತ್ತಿದ ಕಪಿಲ್ ಪಡೆ ಹೆಮಿಂಗ್ಸ್ ಹಾಗೂ ಫೋಸ್ಟರ್ ದಾಳಿಗೆ ತತ್ತರಿಸಿತು. ಕೃಷ್ಣಮಾಚಾರಿ ಶ್ರೀಕಾಂತ್ 31ರನ್ ಹಾಗೂ ಮೊಹಮ್ಮದ್ ಅಜುರುದ್ಧೀನ್ ಅರ್ಧಶತಕಗಳಿಸಿದ್ದೇ ತಂಡದ ಪರ ಹೆಚ್ಚು. ಕೊನೆಯಲ್ಲಿ ಕಪಿಲ್​ ವೇಗವಾಗಿ 30 ರನ್​ಗಳಿಸಿದರು ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಪರಿಣಾಮ 219 ರನ್​ಗಳಿಗೆ ಭಾರತ ಆಲೌಟ್ ಆಯಿತು. 35 ರನ್​ಗಳಿಂದ ಗೆದ್ದ ಇಂಗ್ಲೆಂಡ್ ಪೈನಲ್​ಗೆ ಅವಕಾಶ ಪಡೆಯಿತು.

ಫೈನಲ್​ನಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾ ಮುಖಾಮುಖಿ

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನವು 1987ರ ವಿಶ್ವಕಪ್​ನ ಫೈನಲ್ ಆತಿಥ್ಯ ವಹಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 253 ರನ್ ಕಲೆಹಾಕಿತು.

254 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಟೀಂ ಆಸೀಸ್ ಬಿಗು ಬೌಲಿಂಗ್ ದಾಳಿಗೆ ರನ್​ಗಳಿಸಲು ಪರದಾಟ ನಡೆಸಿತು. ಪರಿಣಾಮ ಇಂಗ್ಲೆಂಡ್ ತಂಡವನ್ನ 246 ರನ್​ಗಳಿಗೆ ಕಟ್ಟಿಹಾಕುವ ಮೂಲಕ ಆಸ್ಟ್ರೇಲಿಯಾ 7 ರನ್​ಗಳಿಂದ ಗೆದ್ದು ವಿಜಯೋತ್ಸವ ಆಚರಿಸಿತು. ಇದು ಆಸ್ಟ್ರೇಲಿಯಾ ಗೆದ್ದ ಮೊದಲ ವಿಶ್ವಕಪ್ ಆಗಿತ್ತು. ಆ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಲೋಕದಲ್ಲೇ , ಅದ್ರಲ್ಲೂ ವಿಶ್ವಕಪ್​​ನಲ್ಲಂತೂ ಪ್ರಬಲ ತಂಡವಾಗಿ ಹೊರಹೊಮ್ಮಿತು.

First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ