ಮೊದಲ ಪಂದ್ಯಕ್ಕೂ ಮುನ್ನ ತಂಡದ ನಾಯಕನೇ ಇಂಜುರಿಗೆ ತುತ್ತಾದರೆ ಟೀಂ ಇಂಡಿಯಾ ಸ್ಥಿತಿ ಏನು?

IND vs SA: ಭಾರತ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮುನ್ನ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ಫಿಟ್ ಆಗಲಿ ಎಂಬುದೆ ಅಭಿಮಾನಿಗಳ ಆಶಯವಾಗಿದೆ.

Vinay Bhat | news18
Updated:June 2, 2019, 3:39 PM IST
ಮೊದಲ ಪಂದ್ಯಕ್ಕೂ ಮುನ್ನ ತಂಡದ ನಾಯಕನೇ ಇಂಜುರಿಗೆ ತುತ್ತಾದರೆ ಟೀಂ ಇಂಡಿಯಾ ಸ್ಥಿತಿ ಏನು?
ಇಂಜುರಿಗೆ ತುತ್ತಾದ ಕೊಹ್ಲಿ
  • News18
  • Last Updated: June 2, 2019, 3:39 PM IST
  • Share this:
ಬೆಂಗಳೂರು (ಜೂ. 02): ವಿಶ್ವಕಪ್ ಅಭಿಯಾನ ಆರಂಭಿಸುವ ಮುನ್ನವೇ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಆಧಾರಸ್ತಂಭವಾಗಿರುವ ನಾಯಕ ವಿರಾಟ್ ಕೊಹ್ಲಿ ಇಂಜುರಿಗೆ ತುತ್ತಾಗಿದ್ದಾರೆ.

ಟೀಂ ಇಂಡಿಯಾ ಮೈದಾನದಲ್ಲಿ ಅಭ್ಯಾಸ ಮಾಡುವ ವೇಳೆ ಕೊಹ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ತಕ್ಷಣ ಭಾರತದ ಫಿಸಿಯೋಥೆಪಿಸ್ಟ್​​ ಮಧ್ಯ ಪ್ರವೇಶಿಸಿ ಚಿಕಿತ್ಸೆ ನೀಡಿದ್ದು ಗಾಯಕ್ಕೆ ಬ್ಯಾಂಡೈಜ್ ಹಾಕಲಾಗಿದೆ.

ಆದರೆ ಕೊಹ್ಲಿ ಗುಣಮುಖರಾಗಿದ್ದಾರೆಯೇ?, ಮೊದಲ ಪಂದ್ಯಕ್ಕೆ ಲಭ್ಯರಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇನ್ನೂ ತಿಳಿಸಿಲ್ಲ. ಕೊಹ್ಲಿ ಇಂಜುರಿಗೆ ತುತ್ತಾಗಿರುವುದು ಕೇವಲ ತಂಡದಲ್ಲಿ ಮಾತ್ರವಲ್ಲದೆ ಅಭಿಮಾನಿಗಳಲ್ಲೂ ಆತಂಕ ಮೂಡಿಸಿದೆ. ಅಲ್ಲದೆ ಮೊದಲ ಪಂದ್ಯಕ್ಕೂ ಮುನ್ನ ತಂಡದ ನಾಯಕನೇ ಇಂಜುರಿಗೆ ತುತ್ತಾಗಿರುವುದು ಬಿಸಿಸಿಐಗೂ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: Cricket World Cup 2019, BAN vs SA: ಟಾಸ್ ಗೆದ್ದ ಆಫ್ರಿಕಾ; ಇಂದಿನ ಪಂದ್ಯಕ್ಕೂ ಸ್ಟೇನ್ ಅಲಭ್ಯ

 ವಿಶ್ವಕಪ್​ಗಾಗಿ ಇಂಗ್ಲೆಂಡ್​ಗೆ ಕಾಲಿಡುವ ಮುನ್ನವೇ ಭಾರತಕ್ಕೆ ಇಂಜುರಿ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆ. ಐಪಿಎಲ್ ವೇಳೆ ಕೇದರ್ ಜಾಧವ್ ಕೂಡ ಗಾಯಗೊಂಡಿದ್ದರು. ವಿಶ್ವಕಪ್​ನಲ್ಲಿ ಆಡುವುದು ಅನುಮಾನ ಎಲ್ಲಲಾಗಿತ್ತು. ಆದರೆ ವಿಶ್ವಕಪ್​ಗೆ ಜಾಧವ್ ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ ಆದರು ಇನ್ನಷ್ಟೆ ಚೇತರಿಸಿಕೊಳ್ಳುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲೂ ಜಾಧವ್ ಕಣಕ್ಕಿಳಿಯಲಿಲ್ಲ. ಇನ್ನು ಮೊದಲ ಅಭ್ಯಾಸ ಪಂದ್ಯಕ್ಕೆ ಇಂಜುರಿಯಿಂದಾಗಿ ವಿಜಯ್ ಶಂಕರ್ ಕೂಡ ಹೊರಗುಳಿದಿದ್ದರು.

 ಭಾರತ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮುನ್ನ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ಫಿಟ್ ಆಗಲಿ ಎಂಬುದೆ ಅಭಿಮಾನಿಗಳ ಆಶಯವಾಗಿದೆ.

First published:June 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ