ಜಾಧವ್ ಇಂಜುರಿ; ವಿಶ್ವಕಪ್​ನಲ್ಲಿ ಸುರೇಶ್ ರೈನಾಗೆ ಅವಕಾಶ?

ಸುರೇಶ್ ರೈನಾ

ಸುರೇಶ್ ರೈನಾ

Suresh Raina: ಭುಜದ ನೋವಿನಿಂದ ಐಪಿಎಲ್ ನಿಂದ ಹೊರಗುಳಿದಿರುವ ಜಾಧವ್ ಬದಲಿಗೆ ವಿಶ್ವಕಪ್ ನಲ್ಲಿ ಸುರೇಶ್ ರೈನಾ ಅವರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.

  • News18
  • 4-MIN READ
  • Last Updated :
  • Share this:

ಬೆಂಗಳೂರು (ಮೇ. 10): ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯ ನಂಬಿಕಸ್ಥ ಆಟಗಾರ ಸುರೇಶ್​ ರೈನಾ ತಮ್ಮ ಕಮಾಲ್​​ನಂತಹ ಕ್ಷೇತ್ರರಕ್ಷಣೆ ಹಾಗೂ ಆಲ್​​ರೌಂಡರ್​ ಆಟದ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಅವಿಭಾಜ್ಯ ಅಂಗವಾಗಿದ್ದರು. ಆದರೆ, ಕಳೆದ ವರ್ಷ ರೈನಾ ರನ್​ ಬರವನ್ನು ಅನುಭವಿಸಿದರು. ಅಂದು ಯಾವ ಎಸೆತವನ್ನು ಸಿಕ್ಸರ್​​ಗೆ ಅಟ್ಟುತ್ತಿದ್ದರು, ಅಂತಹದ್ದೇ ಎಸೆತದಲ್ಲಿ ಔಟಾಗುತ್ತಿದ್ದರು. ಅಲ್ಲದೆ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು.

ಇದರಿಂದ ಹತಾಶರಾದ ರೈನಾ ದೇಶಿಯ ಟೂರ್ನಿಗಳಲ್ಲಿ ತಮ್ಮ ತಾಕತ್ತು ಪ್ರದರ್ಶಿಸಲು ಮುಂದಾದರು. ಆದರೆ ಬ್ಯಾಡ್​ ಲಕ್ ಅಂದರೆ ರನ್​ ಕಲೆ ಹಾಕುವಲ್ಲಿ ಅಲ್ಲೂ ಹಿಂದೆ ಬಿದ್ದರು. ಅಲ್ಲದೆ ಫಿಟ್​ ನೆಸ್​ ಸಮಸ್ಯೆಯನ್ನು ಎದುರಿಸುತ್ತಿದ್ದರು.

ಆದರೆ ರೈನಾ ಸದ್ಯ ಐಪಿಎಲ್​​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಸಿಎಸ್ ಕೆ ತಂಡದ ಪ್ರಮುಖ ಬ್ಯಾಟ್ಸ್​ಮನ್​​ ಕೇದರ್ ಜಾಧವ್ ಭುಜದ ನೋವಿನಿಂದ ಬಳಲುತ್ತಿದ್ದು, ಐಪಿಎಲ್ ನಿಂದ ಈಗಾಗಲೇ ಹೊರಬಿದ್ದಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿದ ಪರಿಣಾಮ ಎಡಭುಜದ ನೋವಿಗೆ ಒಳಗಾಗಿ ಕೇದಾರ್ ಜಾಧವ್ ಮೈದಾನ ತೊರೆದಿದ್ದರು. ಹೀಗಾಗಿ ಐಪಿಎಲ್​ನಲ್ಲಿಂದ ಜಾಧವ್ ಹೊರಬಿದ್ದಿದ್ದು, ಇದೀಗ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಭುಜದ ನೋವಿನಿಂದ ಐಪಿಎಲ್ ನಿಂದ ಹೊರಗುಳಿದಿರುವ ಜಾಧವ್ ಬದಲಿಗೆ ವಿಶ್ವಕಪ್ ನಲ್ಲಿ ಸುರೇಶ್ ರೈನಾ ಅವರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ವಿಶ್ವಕಪ್ ವೇಳೆಗೆ ಜಾಧವ್ ಫಿಟ್ ಆಗದಿದ್ದರೆ, ರೈನಾ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ.

ಎಡಗೈ ಬ್ಯಾಟ್ಸ್​ಮನ್​ ಸುರೇಶ್ ರೈನಾ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಜೊತೆಗೆ ಸ್ಪಿನ್ ಬೌಲಿಂಗ್ ಮೂಲಕ ಐದನೇ ಬೌಲರ್ ಕೊರತೆಯನ್ನು ನೀಗಿಸಲಿದ್ದಾರೆ. ಅಲ್ಲದೇ ಅದ್ಭುತ ಫೀಲ್ಡಿಂಗ್ ಮೂಲಕ ರನ್ ನಿಯಂತ್ರಿಸಲು ಬಲ್ಲರು. ಹೀಗಾಗಿ ರೈನಾಗೆ ವಿಶ್ವಕಪ್​ನಲ್ಲಿ ಅವಕಾಶ ಕೊಡಬೇಕು ಎಂದು ಅಭಿಮಾನಿಗಳು ಬಿಸಿಸಿಐಗೆ ಒತ್ತಾಯಿಸುತ್ತಿದ್ದಾರೆ. ಹಾಗೇನಾದರು ರೈನಾಗೆ ಅವಕಾಶ​ ಸಿಕ್ಕಿದ್ದೇ ಆದಲ್ಲಿ ಅಭಿಮಾನಿಗಳಲ್ಲಿ ಸಂತಸ ದುಪ್ಪಟ್ಟಾಗಲಿದೆ.

 
First published: