News18 India World Cup 2019

India vs Pakistan: ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲ್ವಂತೆ!; ಇಲ್ಲಿದೆ ಕಾರಣ

ಭಾರತ-ಪಾಕಿಸ್ತಾನ ಪಂದ್ಯ ಜೂ.16ರಂದು ನಡೆಯಲಿದೆ. ಈ ಪಂದ್ಯ ರದ್ದಾಗುವ ಸಾರ್ಧಯತೆ ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ತಿಳಿದಿಕೊಳ್ಳಲು ಈ ಸುದ್ದಿ ಓದಿ

Rajesh Duggumane | news18
Updated:June 14, 2019, 12:43 PM IST
India vs Pakistan: ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲ್ವಂತೆ!; ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರ
Rajesh Duggumane | news18
Updated: June 14, 2019, 12:43 PM IST
ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಜೂ.16ಕ್ಕೆ ನಿಗದಿಯಾಗಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕೋಟ್ಯಾಂತರ ಜನ ಕಾದು ಕೂತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈಗಾಲೇ ಈ ಪಂದ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಈ ನಡುವೆ ಪಂದ್ಯ ನಡೆಯೋದೇ ಡೌಟು ಎನ್ನುವ ಮಾತು ಕೇಳಿ ಬರುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಈ ಮೊದಲು ಪುಲ್ವಾಮಾದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಪಾಕ್​ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಬಾಲ್​ಕೋಟ್​ ಉಗ್ರರ ತಾಣಗಳ ಮೇಲೆ ದಾಳಿ ಮಾಡುವ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಈ ವೇಳೆ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ವಿಶ್ವಕಪ್​ ನಡೆಯುವ ವೇಲೆ ಭಾರತ ಕ್ರಿಕೆಟ್​ ತಂಡ ಪಾಕಿಸ್ತಾನದ ವಿರುದ್ಧ ಆಟವಾಡಬಾರದು ಎಂದು ಅನೇಕರು ಆಗ್ರಹಿಸಿದ್ದರು. ಆದರೆ, ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ಸ್ಪಷ್ಟನೆ ಸಿಕ್ಕ ನಂತರದಲ್ಲಿ ಈ ವಿಚಾರ ತಣ್ಣಗಾಗಿತ್ತು.

ಹಾಗಂತ ಈಗ ಭಾರತ-ಪಾಕ್​ ಪಂದ್ಯ ನಡೆಯದೇ ಇರಲು ಈ ವಿಚಾರ ಕಾರಣವಲ್ಲ. ಬದಲಿಗೆ ಮಳೆ! ಹೌದು, ಈ ಬಾರಿಯ ವಿಶ್ವಕಪ್​ನಲ್ಲಿ ಮಳೆರಾಯನದ್ದೇ ಆಟ ಎಂಬಂತಾಗಿದೆ. ಗುರುವಾರ ನಡೆಯಬೇಕಿದ್ದ ಭಾರತ-ನ್ಯೂಜಿಲೆಂಡ್​ ನಡುವಣ ಪಂದ್ಯ ಮಳೆಗೆ ಆಹುತಿಯಾಗಿತ್ತು.  ಇಂಗ್ಲೆಂಡ್​​ನಲ್ಲಿ ಈಗಷ್ಟೆ ಮಳೆಗಾಲ ಆರಂಭವಾಗಿದ್ದು, ಹೀಗಾಗಿ ವಿಶ್ವಕಪ್ ಅಂತ್ಯವಾಗುವ ವರೆಗೂ ಮಳೆರಾಯನ ಕಾಟ ಮುಂದುವರೆಯುವ ಸಾಧ್ಯತೆ ಇದೆ. ಭಾರತ-ಪಾಕ್ ಪಂದ್ಯಕ್ಕೂ ಮಳೆ ಅಡ್ಡಿ ಆಗುವ ಸಾಧ್ಯತೆ ಇದೆಯಂತೆ. ಈ ಪಂದ್ಯ ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿದ್ದು, ವರುಣ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಇಂಗ್ಲೆಂಡ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯದ್ದೇ ಆಟ; ಭಾರತ-ಪಾಕ್ ಪಂದ್ಯಕ್ಕೂ ವರುಣನ ಅಡ್ಡಿ ಸಾಧ್ಯತೆ!

ಈ ಹಿಂದೆ ಪಾಕಿಸ್ತಾನ-ಶ್ರೀಲಂಕಾ ಮತ್ತು ಬಾಂಗ್ಲಾದೇಶ-ಶ್ರೀಲಂಕಾ ನಡುವಣ ಪಂದ್ಯ ಟಾಸ್ ಪ್ರಕ್ರಿಯೆಯೂ ಕಾಣದೆ ಮಳೆಗೆ ಆಹುತಿಯಾಗಿತ್ತು.  ವೆಸ್ಟ್​ ಇಂಡೀಸ್ ಹಾಗೂ ದ. ಆಫ್ರಿಕಾ ಪಂದ್ಯ ಕೂಡ ಆರಂಭವಾಗಿ ಕೆಲ ಹೊತ್ತಿನಲ್ಲಿ ಮಳೆ ಆರಂಭವಾಗಿದ್ದರಿಂದ ರದ್ದು ಮಾಡಲಾಯಿತು. ಅಲ್ಲದೆ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಬಳಿಕ ಡಕ್ವರ್ತ್​ ನಿಮಯದ ಪ್ರಕಾರ ಪಂದ್ಯವನ್ನು ಇತ್ಯರ್ಥ ಮಾಡಲಾಯಿತು.  ಹೀಗೆ ಸದ್ಯ ನಡೆದಿರುವ 16 ಪಂದ್ಯಗಳ ಪೈಕಿ 5 ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದಾನೆ. ಲಂಡನ್​ನಲ್ಲಿ ಇನ್ನೂಕೂಡ ಹೆಚ್ಚು ಮಳೆ ಬರುವ ಸಂಭವವಿದೆಯಂತೆ.  ಮೇ-ಜೂನ್ ಇಂಗ್ಲೆಂಡ್​​ನಲ್ಲಿ ತಿಂಗಳು ಮಳೆಗಾಲ ಎಂದು ತಿಳಿದಿದ್ದರು ವಿಶ್ವಕಪ್ ಆಯೋಜಿಸಿರುವುದು ಸದ್ಯ ಅನೇಕ ಕೆಂಗಣ್ಣಿಗೆ ಕಾರಣವಾಗಿದೆ.

ಇದನ್ನೂ ಓದಿ: Shikhar Dhawan Injury: ಬದಲಿ ಆಟಗಾರನ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ!
Loading...

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...