ವಿಶ್ವಕಪ್​ನಲ್ಲಿ ಶಕೀಬ್ ಅಬ್ಬರ; ಯುವರಾಜ್ ದಾಖಲೆ ಸರಿಗಟ್ಟಿದ ಬಾಂಗ್ಲಾ ಆಲ್ರೌಂಡರ್

ಐಸಿಸಿ ವಿಶ್ವಕಪ್ 2019ರಲ್ಲಿ ಈಗಾಗಲೇ 2 ಶತಕಗಳನ್ನು ಬಾರಿಸಿರುವ ಶಕೀಬ್, ವಿಶ್ವಕಪ್‌ನಲ್ಲಿ 1000 ರನ್ ಬಾರಿಸಿದ 19ನೇ ಬ್ಯಾಟ್ಸ್​​ಮನ್​​ ಆಗಿ ಗುರುತಿಸಿಕೊಂಡಿದ್ದಾರೆ.

Vinay Bhat | news18
Updated:June 25, 2019, 5:11 PM IST
ವಿಶ್ವಕಪ್​ನಲ್ಲಿ ಶಕೀಬ್ ಅಬ್ಬರ; ಯುವರಾಜ್ ದಾಖಲೆ ಸರಿಗಟ್ಟಿದ ಬಾಂಗ್ಲಾ ಆಲ್ರೌಂಡರ್
ಯುವರಾಜ್ ಸಿಂಗ್ ಹಾಗೂ ಶಕೀಬ್ ಅಲ್ ಹಸನ್
  • News18
  • Last Updated: June 25, 2019, 5:11 PM IST
  • Share this:
ಬಾಂಗ್ಲಾದೇಶ ಈ ಬಾರಿ ವಿಶ್ವಕಪ್​ನಲ್ಲಿ ಸೆಮಿಫೈನಲ್ ತಲುಪುವುದು ಬಹಳ ಕಷ್ಟದ ವಿಚಾರ. ಆಡಿರುವ 7 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನ ಗೆದ್ದಿರುವ ಬಾಂಗ್ಲಾ, ಉತ್ತಮ ಮಟ್ಟಿನ ಪ್ರದರ್ಶನ ತೋರುತ್ತಿದೆ. ಈ ಬಾರಿ ವಿಶ್ವಕಪ್​ನಲ್ಲಿ ಬಾಂಗ್ಲಾದ ಈ ಪ್ರದರ್ಶನಕ್ಕೆ ಮುಖ್ಯ ಕಾರಣ ಆಲ್​ರೌಂಡರ್ ಶಕೀಬ್ ಅಲ್​​ ಹಸನ್​.

ಬ್ಯಾಟಿಂಗ್​- ಬೌಲಿಂಗ್​​​ ಎರಡರಲ್ಲೂ ಅದ್ಭುತ ಪ್ರದರ್ಶನ ತೋರುತ್ತಿರುವ ಶಕಿಬ್ ವಿಶ್ವಕಪ್​​ ಅಂಗಳದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ನಿನ್ನೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಶಕೀಬ್ ತಮ್ಮ ಆಲ್​ರೌಂಡ್​​ ಆಟದಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಬಾಂಗ್ಲಾ ಪರ ಅಪರೂಪದ ದಾಖಲೆಯನ್ನ ಕೂಡ ಬರೆದಿದ್ದಾರೆ.

Cricket World Cup 2019: Shakib Al Hasan achieves a rare feat, emulates Yuvraj Singh
ಶಕೀಬ್ ಅಲ್​​ ಹಸನ್


ನಿಟ್ಟುಸಿರು ಬಿಟ್ಟಿದ್ದ ಟೀಂ ಇಂಡಿಯಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಠ!

ಸೌತಾಂಪ್ಟನ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 7 ವಿಕೆಟ್​ ನಷ್ಟಕ್ಕೆ 262 ರನ್ ಕಲೆಹಾಕಿತು. ಬಾಂಗ್ಲಾ ಪರ ಉತ್ತಮ ಆಟವಾಡಿದ್ದ ಶಕೀಬ್ 69 ಎಸೆತಗಳಲ್ಲಿ 51 ರನ್ ದಾಖಲಿಸಿದರು. ಇದರ ಜೊತೆಗೆ ವಿಶ್ವಕಪ್​​ನಲ್ಲಿ ಬಾಂಗ್ಲಾ ಪರ 1 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ಸಾಧನೆ ಮಾಡಿದ್ದಾರೆ.

ಐಸಿಸಿ ವಿಶ್ವಕಪ್ 2019ರಲ್ಲಿ ಈಗಾಗಲೇ 2 ಶತಕಗಳನ್ನು ಬಾರಿಸಿರುವ ಶಕೀಬ್, ವಿಶ್ವಕಪ್‌ನಲ್ಲಿ 1000 ರನ್ ಬಾರಿಸಿದ 19ನೇ ಬ್ಯಾಟ್ಸ್​​ಮನ್​​ ಆಗಿ ಗುರುತಿಸಿಕೊಂಡಿದ್ದಾರೆ. ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ 35 ರನ್ ಬಾರಿಸಿದಾಗಲೇ ಹಸನ್ ಈ ಮೈಲಿಗಲ್ಲು ಸ್ಥಾಪಿಸಿದರು. ಇಷ್ಟೇ ಅಲ್ಲದೆ ಬೌಲಿಂಗ್​​ನಲ್ಲೂ ಮಿಂಚಿದ ಶಕಿಬ್ ಕೇವಲ 29 ರನ್​ ನೀಡಿ 5 ವಿಕೆಟ್ ಕಬಳಿಸಿದರು.ಯುವರಾಜ್​​​​​ ಬಳಿಕ ಶಕೀಬ್ ದಾಖಲೆ

2011ರ ವಿಶ್ವಕಪ್​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್​ ಅದ್ಭುತ ಆಟವಾಡಿದ್ದರು. ಅದರಲ್ಲೂ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದಿದರು. ಬ್ಯಾಟಿಂಗ್​ನಲ್ಲಿ​ ಮಿಂಚಿದ್ದ ಯುವಿ ಅರ್ಧಶತಕ ಬಾರಿಸಿದ್ದಲ್ಲದೆ 5 ವಿಕೆಟ್​​​​ಗಳನ್ನ ಪಡೆದಿದ್ದರು. ವಿಶ್ವಕಪ್​​ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ​​ ಎಂಬ ದಾಖಲೆ ಬರೆದಿದ್ದರು.

Cricket World Cup, ENG vs AUS: ಫಿಂಚ್-ವಾರ್ನರ್ ಶತಕದ ಜೊತೆಯಾಟಕ್ಕೆ ಬ್ರೇಕ್ ಹಾಕಿದ ಅಲಿ

ಯುವರಾಜ್ ಬಳಿಕ ವಿಶ್ವಕಪ್​​ನಲ್ಲಿ ಈ ಸಾಧನೆ ಮಾಡಿದ 2ನೇ ಆಟಗಾರ ಎಂಬ ಕೀರ್ತಿ ಇದೀಗ ಬಾಂಗ್ಲಾ ಆಲ್​ರೌಂಡರ್​​ಗೆ ಸಿಕ್ಕಿದೆ. ಅಫ್ಘಾನಿಸ್ತಾನ ವಿರುದ್ಧ ಅರ್ಧಶತಕದ ಜೊತೆಗೆ 5 ವಿಕೆಟ್ ಮುಡಿಗೇರಿಸಿಕೊಂಡ ಶಕೀಬ್​ ಅಲ್​ ಹಸನ್​ ಪಂದ್ಯ ಶ್ರೇಷ್ಠ ಪ್ರಶಸ್ತಿಯೊಂದಿಗೆ ದಾಖಲೆ ಬರೆದಿದ್ದಾರೆ.

ಒಟ್ಟಾರೆ ಟೂರ್ನಿಯಲ್ಲಿ ಬಾಂಗ್ಲಾ ಪರ 6 ಇನ್ನಿಂಗ್ಸ್‌ಗಳಲ್ಲಿ ಒಟ್ಟು 476 ರನ್ ಕೊಡುಗೆ ನೀಡಿರುವ ಶಕೀಬ್, ತಂಡದ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 32ರ ಹರೆಯದ ಹಸನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 121 ರನ್, ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 124 ರನ್ ಬಾರಿಸಿ ಬಾಂಗ್ಲಾ ಪರ ಹೋರಾಟ ನಡೆಸಿದರು. ಈ ಬಾರಿ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ 476 ರನ್‌ಗಳೊಂದಿಗೆ ಶಕೀಬ್ ಮೊದಲ ಸ್ಥಾನ ಅಲಂಕರಿಸಿದ್ದಾರೆ.

First published:June 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ