ಅಬ್ಬಾ.. ಈ ಬಾರಿಯ ವಿಶ್ವಕಪ್​ನಲ್ಲಿ ಪಾಕಿಸ್ತಾನ ಕೈಚೆಲ್ಲಿದ ಕ್ಯಾಚ್ ಎಷ್ಟು ಗೊತ್ತೇ?; ಫೀಲ್ಡಿಂಗ್​ನಲ್ಲಿ ಭಾರತವೇ ಬೆಸ್ಟ್​!

ಒಂದು ಪಂದ್ಯದಲ್ಲಿ ಒಂದು ಕ್ಯಾಚ್ ಫಲಿತಾಂಶವನ್ನೇ ನಿರ್ಧರಿಸುತ್ತದೆ ಎಂಬ ಮಾತಿದೆ. ಇದಕ್ಕೆ ಅನೇಕ ಉದಾಹರಣೆಗಳು ಇವೆ. ಆದರೆ, ಈ ಬಾರಿಯ ವಿಶ್ವಕಪ್​ನಲ್ಲಿ ಗರಿಷ್ಠ ಕ್ಯಾಚ್ ಕೈ ಚೆಲ್ಲಿದ ತಂಡ ಎಂಬ ಕುಖ್ಯಾತಿಗೆ ಪಾಕಿಸ್ತಾನ ಪಾತ್ರವಾಗಿದೆ.

Vinay Bhat | news18
Updated:June 25, 2019, 10:11 PM IST
ಅಬ್ಬಾ.. ಈ ಬಾರಿಯ ವಿಶ್ವಕಪ್​ನಲ್ಲಿ ಪಾಕಿಸ್ತಾನ ಕೈಚೆಲ್ಲಿದ ಕ್ಯಾಚ್ ಎಷ್ಟು ಗೊತ್ತೇ?; ಫೀಲ್ಡಿಂಗ್​ನಲ್ಲಿ ಭಾರತವೇ ಬೆಸ್ಟ್​!
ಸಾಂದರ್ಭಿಕ ಚಿತ್ರ
  • News18
  • Last Updated: June 25, 2019, 10:11 PM IST
  • Share this:
ಬೆಂಗಳೂರು (ಜೂ. 25): 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿ ಅದಾಗಲೆ ಅಂತಿಮ ಘಟ್ಟದತ್ತ ಸಾಗುತ್ತಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದೂ ಆಗಿದೆ. ಕೊಹ್ಲಿ ಪಡೆ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದರೆ, ಇತ್ತ ವಿಶ್ವಕಪ್ ಗೆಲ್ಲುವ ಫೇವರಿಟ್ ಆಗಿರುವ ಆತಿಥೇಯ ಇಂಗ್ಲೆಂಡ್ ತಂಡದ ಸ್ಥಿತಿ ಅಯೋಮಯವಾಗಿದೆ.

ಇದರ ಮಧ್ಯೆ ಈ ಬಾರಿಯ ವಿಶ್ವಕಪ್​ನಲ್ಲಿ ಯಾವ ತಂಡಗಳ ಫೀಲ್ಡಿಂಗ್ ಹೇಗಿದೆ?, ಯಾವ ತಂಡ ಎಷ್ಟು ಕ್ಯಾಚ್ ಕೈ ಚೆಲ್ಲಿದೆ ಎಂಬ ಬಗ್ಗೆ ಮಾಹಿತಿ ಹೊರ ಬಿದ್ದಿದೆ.

ಒಂದು ಪಂದ್ಯದಲ್ಲಿ ಒಂದು ಕ್ಯಾಚ್ ಫಲಿತಾಂಶವನ್ನೇ ನಿರ್ಧರಿಸುತ್ತದೆ ಎಂಬ ಮಾತಿದೆ. ಇದಕ್ಕೆ ಅನೇಕ ಉದಾಹರಣೆಗಳು ಇವೆ. ಆದರೆ, ಈ ಬಾರಿಯ ವಿಶ್ವಕಪ್​ನಲ್ಲಿ ಗರಿಷ್ಠ ಕ್ಯಾಚ್ ಕೈ ಚೆಲ್ಲಿದ ತಂಡ ಎಂಬ ಕುಖ್ಯಾತಿಗೆ ಪಾಕಿಸ್ತಾನ ಪಾತ್ರವಾಗಿದೆ.

Pakistan cricket team catch drop
ಕ್ಯಾಚ್ ಕೈಚೆಲ್ಲಿತ್ತಿರುವ ಪಾಕ್ ತಂಡದ ಆಟಗಾರ


ICC Cricket World Cup 2019: ಸೆಮಿ ಫೈನಲ್​ಗೆ ಲಗ್ಗೆ ಇಡಲಿದೆ ಈ ನಾಲ್ಕು ತಂಡಗಳು!

ಒಂದು ಲೆಕ್ಕದಲ್ಲಿ ಪಾಕಿಸ್ತಾನ ಇಂದು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಇದೆ ಎಂದಾದರೆ ಅದಕ್ಕೆ ಕ್ಯಾಚ್ ಕೈಚೆಲ್ಲಿದಿರುವುದೆ ಪ್ರಮುಖ ಕಾರಣ. ಪಾಕಿಸ್ತಾನ ಈವರೆಗೆ ಒಟ್ಟು ಆರು ಪಂದ್ಯಗಳನ್ನು ಆಡಿದ್ದು, ಇದರಲ್ಲಿ 14 ಕ್ಯಾಚ್ ಡ್ರಾಪ್ ಮಾಡಿದೆ. ಅಲ್ಲದೆ ಈ ಬಾರಿಯ ವಿಶ್ವಕಪ್​ನಲ್ಲಿ ಗರಿಷ್ಠ ಕ್ಯಾಚ್ ಕೈಚೆಲ್ಲಿದ ತಂಡಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಇತ್ತ ಭಾರತ ಈವರೆಗೆ ಕೇವಲ ಒಂದು ಕ್ಯಾಚ್ ಡ್ರಾಪ್ ಮಾಡಿದೆಯಷ್ಟೆ. ಹೀಗಾಗಿ ಕಡಿಮೆ ಕ್ಯಾಚ್ ಕೈಚೆಲ್ಲಿದ ತಂಡವೆಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಇನ್ನು ಗರಿಷ್ಠ ಕ್ಯಾಚ್ ಡ್ರಾಪ್ ಮಾಡಿದ ತಂಡಗಳ ಪೈಕಿ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ (12 ಡ್ರಾಪ್) ಇದ್ದರೆ, 3ನೇ ಸ್ಥಾನದಲ್ಲಿ ನ್ಯೂಜಿಲೆಂಡ್ (9), 4ನೇ ಸ್ಥಾನ ದಕ್ಷಿಣ ಆಫ್ರಿಕಾ (8), 5ನೇ ಸ್ಥಾನ ವೆಸ್ಟ್​ ಇಂಡೀಸ್ (6), 6ನೇ ಸ್ಥಾನ ಆಸ್ಟ್ರೇಲಿಯಾ (4), 7ನೇ ಸ್ಥಾನ ಬಾಂಗ್ಲಾದೇಶ(4), 8ನೇ ಸ್ಥಾನ ಶ್ರೀಲಂಕಾ(3), 9ನೇ ಸ್ಥಾನ ಅಫ್ಘಾನಿಸ್ತಾನ(2) ಹಾಗೂ ಕಡಿಮೆ ಕ್ಯಾಚ್ ಡ್ರಾಪ್ ಮಾಡಿ ಭಾರತ(1) 10ನೇ ಸ್ಥಾನದಲ್ಲಿದೆ.

First published:June 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ