ಎದುರಾಳಿಗಳಿಗೆ ಶುರುವಾಯ್ತು ‘ರಾಹು‘ ಕಾಟ; ಟೀಂ ಇಂಡಿಯಾಕ್ಕೆ ಆಧಾರವಾದ ಕನ್ನಡಿಗ!

KL Rahul: ವಿಶ್ವಕಪ್​ನಲ್ಲಿ ರಾಹುಲ್ ಮೊದಲ ಬಾರಿಗೆ ಓಪನರ್​ ಆಗಿ ಕಣಕ್ಕಿಳಿದಿದರು. ಒಂದೆಡೆ ರೋಹಿತ್ ಅಬ್ಬರಿಸಿದರೆ, ಭರ್ಜರಿ ಸಾಥ್​ ಕೊಟ್ಟ ರಾಹುಲ್​ ಅರ್ಧಶತಕ ದಾಖಲಿಸಿ ಭದ್ರ ಬುನಾದಿ ಹಾಕಿಕೊಟ್ಟರು

Vinay Bhat | news18
Updated:June 18, 2019, 2:51 PM IST
ಎದುರಾಳಿಗಳಿಗೆ ಶುರುವಾಯ್ತು ‘ರಾಹು‘ ಕಾಟ; ಟೀಂ ಇಂಡಿಯಾಕ್ಕೆ ಆಧಾರವಾದ ಕನ್ನಡಿಗ!
ಕೆ ಎಲ್ ರಾಹುಲ್
  • News18
  • Last Updated: June 18, 2019, 2:51 PM IST
  • Share this:
ಬೆಂಗಳೂರು (ಜೂ. 18): ವಿಶ್ವಕಪ್​ನಲ್ಲಿ ಉತ್ತಮ ಆಟವಾಡುತ್ತಿರುವ ಟೀಂ ಇಂಡಿಯಾಕ್ಕೆ ಓಪನಿಂಗ್​​ ವಿಚಾರವೇ ದೊಡ್ಡ ತಲೆನೋವಾಗಿತ್ತು. ಯಾಕಂದರೆ ಟೀಂ ಇಂಡಿಯಾದ ಪ್ರಮುಖ ಓಪನರ್ ಶಿಖರ್ ಧವನ್​ ಇಂಜ್ಯುರಿಯಿಂದಾಗಿ ಹೊರನಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ್ದ ಧವನ್​ ಅದೇ ಪಂದ್ಯದಲ್ಲಿ ಕೌಲ್ಟರ್​ ನೈಲ್ ಬೌಲಿಂಗ್​ನಲ್ಲಿ ಹೆಬ್ಬೆರಳು ಮುರಿತಕ್ಕೊಳಗಾಗಿದ್ದರು.

ಹೀಗಾಗಿ, ಭಾರತ ಧವನ್ ಇಲ್ಲದೆ ಮುಂಬರುವ ಪಂದ್ಯಗಳನ್ನಾಡುವುದು ಹೇಗೆ ಎಂದು ಸಾಕಷ್ಟು ತಲೆಕೆಡಿಸಿಕೊಂಡಿತ್ತು. ಧವನ್ ಸ್ಥಾನ ತುಂಬಲು ಆರಂಭಿಕರಾಗಿ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಆದರೆ ಈ ತೋಂದರೆಯನ್ನು ಕನ್ನಡಿಗ ಕೆ.ಎಲ್​ ರಾಹುಲ್ ಬಗೆಹಸಿದ್ದಾರೆ​​. 4ನೇ ಕ್ರಮಾಂಕದಲ್ಲಿ ಆಡುತ್ತಿದ್ದ ರಾಹುಲ್​ಗೆ ಓಪನಿಂಗ್ ಪ್ರಮೋಷನ್ ನೀಡಿ ಪ್ರಯೋಗಕ್ಕೆ ಇಳಿದು, ಭಾರತ ಇದರಲ್ಲಿ ಯಶಸ್ಸು ಕಂಡಿದೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋದ್ದರಿಂದ ಪಾಕ್ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ, ಭಾರತ ಗೆಲ್ಲಬೇಕಾದರೆ ಉತ್ತಮ ಆರಂಭ ಪಡೆಯಲೇ ಬೇಕಿತ್ತು. ವಿಶ್ವಕಪ್​ನಲ್ಲಿ ರಾಹುಲ್ ಮೊದಲ ಬಾರಿಗೆ ಓಪನರ್​ ಆಗಿ ಕಣಕ್ಕಿಳಿದಿದರು. ಒಂದೆಡೆ ರೋಹಿತ್ ಅಬ್ಬರಿಸಿದರೆ, ಭರ್ಜರಿ ಸಾಥ್​ ಕೊಟ್ಟ ರಾಹುಲ್​ ಅರ್ಧಶತಕ ದಾಖಲಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಕಿಂಗ್ ಕೊಹ್ಲಿಗೂ ಬಂತು ಕಂಠಕ; ವಿರಾಟ್ ಸ್ಥಾನದ ಮೇಲೆ ಮತ್ತೊಬ್ಬ ಭಾರತೀಯನ ಕಣ್ಣು!

57 ರನ್​ಗಳಿಸಿ ಔಟಾದ ಕೆ.ಎಲ್ ರಾಹುಲ್​ ಆಟದಿಂದ ಭಾರತ ಉತ್ತಮ ಆರಂಭ ಪಡೆಯೋದರ ಜೊತೆಗೆ 300ರನ್​​​ಗಳ ಗಡಿ ದಾಟಲು ಸಾಧ್ಯವಾಯಿತು. ರಾಹುಲ್​ರ ಈ ಆಟ ಭಾರತಕ್ಕೆ ಭರವಸೆಯನ್ನ ಹೆಚ್ಚಿಸಿತು.

ರಾಹುಲ್​ ಮಿಂಚಲು ಕಾರಣ ಏನು?:

ಕೆ.ಎಲ್​ ರಾಹುಲ್​​ ಪಾಕ್​ ವಿರುದ್ಧದ ಪಂದ್ಯದಲ್ಲೇ ಆಡೇ ಆಡುತ್ತಾರೆಂದು ಊಹಿಸಲಾಗಿತ್ತು. ಇದಕ್ಕೆ ಕಾರಣ ಕೆ.ಎಲ್ ಹಾಗೂ ಮ್ಯಾಂಚೆಸ್ಟರ್​ನ ಸ್ಟೇಡಿಯಂ.ಕಳೆದ ವರ್ಷದ ಇದೇ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಹುಲ್ ಅಬ್ಬರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ ರೋಹಿತ್ ಔಟಾದ ಬಳಿಕ ತಂಡಕ್ಕೆ ನೆರವಾಗಿದ್ದ ರಾಹುಲ್ ಭರ್ಜರಿ ಸೆಂಚುರಿ ಸಿಡಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧವೇ ಗೆದ್ದು ಬೀಗಿತ್ತು.

'ವಿಶ್ವಕಪ್​ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡಬಾರದು' ಎಂದವರೆಲ್ಲಾ ನಿನ್ನೆಯ ಪಂದ್ಯದಲ್ಲಿ ಹಾಜರು

ಹೀಗೆ ಓಲ್ಡ್​ ಟ್ರಾಫರ್ಡ್​​ನಲ್ಲೇ ಭರ್ಜರಿ ಸೆಂಚುರಿ ಸಿಡಿಸಿದ್ದ ರಾಹುಲ್ ಪಾಕ್ ವಿರುದ್ಧ ಆಡೇ ಆಡುತ್ತಾರೆಂದು ನಂಬಲಾಗಿತ್ತು. ಯಾಕಂದರೆ ಈ ಪಿಚ್​​​ನ ಮರ್ಮ ಅರಿತ್ತಿದ್ದ ರಾಹುಲ್​ ಬಹಳ ತಾಳ್ಮೆಯುತವಾಗಿ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಭಾರತ ಪಾಕ್​ ವಿರುದ್ಧ ಗೆದ್ದು ಬೀಗಿತು. ರಾಹುಲ್​​ರ ಈ ಪ್ರದರ್ಶನ ಮುಂಬರುವ ಪಂದ್ಯಗಳಲ್ಲಿ ಭಾರತಕ್ಕಿದ್ದ ಸಮಸ್ಯೆಗೆ ಮುಕ್ತಿ ನೀಡಿದೆ.
First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading