IND vs PAK: ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ-ಪಾಕ್​ ಪಂದ್ಯ ನಡೆಯೋದೆ ಡೌಟ್!; ಯಾಕೆ ಗೊತ್ತಾ?

ಭಾರತ-ಪಾಕಿಸ್ತಾನ ಪಂದ್ಯ ಜೂ.16ರಂದು ನಡೆಯಲಿದೆ. ಈ ಪಂದ್ಯ ರದ್ದಾಗುವ ಸಾರ್ಧಯತೆ ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ತಿಳಿದಿಕೊಳ್ಳಲು ಈ ಸುದ್ದಿ ಓದಿ

Rajesh Duggumane | news18
Updated:June 12, 2019, 9:41 AM IST
IND vs PAK: ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ-ಪಾಕ್​ ಪಂದ್ಯ ನಡೆಯೋದೆ ಡೌಟ್!; ಯಾಕೆ ಗೊತ್ತಾ?
ಫೈಲ್​ ಫೋಟೋ: ಇಂಡೋ- ಪಾಕ್ ವಿಶ್ವಕಪ್​ ಟೂರ್ನಿ
Rajesh Duggumane | news18
Updated: June 12, 2019, 9:41 AM IST
ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಜೂ.16ಕ್ಕೆ ನಿಗದಿಯಾಗಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕೋಟ್ಯಾಂತರ ಜನ ಕಾದು ಕೂತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈಗಾಲೇ ಈ ಪಂದ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಈ ನಡುವೆ ಪಂದ್ಯ ನಡೆಯೋದೇ ಡೌಟು ಎನ್ನುವ ಮಾತು ಕೇಳಿ ಬರುತ್ತಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಈ ಮೊದಲು ಪುಲ್ವಾಮಾದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಪಾಕ್​ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಬಾಲ್​ಕೋಟ್​ ಉಗ್ರರ ತಾಣಗಳ ಮೇಲೆ ದಾಳಿ ಮಾಡುವ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಈ ವೇಳೆ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ವಿಶ್ವಕಪ್​ ನಡೆಯುವ ವೇಲೆ ಭಾರತ ಕ್ರಿಕೆಟ್​ ತಂಡ ಪಾಕಿಸ್ತಾನದ ವಿರುದ್ಧ ಆಟವಾಡಬಾರದು ಎಂದು ಅನೇಕರು ಆಗ್ರಹಿಸಿದ್ದರು. ಆದರೆ, ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ಸ್ಪಷ್ಟನೆ ಸಿಕ್ಕ ನಂತರದಲ್ಲಿ ಈ ವಿಚಾರ ತಣ್ಣಗಾಗಿತ್ತು.

ಹಾಗಂತ ಈಗ ಭಾರತ-ಪಾಕ್​ ಪಂದ್ಯ ನಡೆಯದೇ ಇರಲು ಈ ವಿಚಾರ ಕಾರಣವಲ್ಲ. ಬದಲಿಗೆ ಮಳೆ! ಹೌದು, ಈ ಬಾರಿಯ ವಿಶ್ವಕಪ್​ನಲ್ಲಿ ಮಳೆರಾಯನದ್ದೇ ಆಟ ಎಂಬಂತಾಗಿದೆ. ಈಗಾಗಲೇ ಮೂರು ಪಂದ್ಯಗಳು ವರುಣನ ಆರ್ಭಟದಿಂದ ಮೊಟಕುಗೊಳಿಸಲಾಗಿದೆ. ಇಂಗ್ಲೆಂಡ್​​ನಲ್ಲಿ ಈಗಷ್ಟೆ ಮಳೆಗಾಲ ಆರಂಭವಾಗಿದ್ದು, ಹೀಗಾಗಿ ವಿಶ್ವಕಪ್ ಅಂತ್ಯವಾಗುವ ವರೆಗೂ ಮಳೆರಾಯನ ಕಾಟ ಮುಂದುವರೆಯುವ ಸಾಧ್ಯತೆ ಇದೆ. ಭಾರತ-ಪಾಕ್ ಪಂದ್ಯಕ್ಕೂ ಮಳೆ ಅಡ್ಡಿ ಆಗುವ ಸಾಧ್ಯತೆ ಇದೆಯಂತೆ.

ಇದನ್ನೂ ಓದಿ: ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯದ್ದೇ ಆಟ; ಭಾರತ-ಪಾಕ್ ಪಂದ್ಯಕ್ಕೂ ವರುಣನ ಅಡ್ಡಿ ಸಾಧ್ಯತೆ!

ಈ ಹಿಂದೆ ಪಾಕಿಸ್ತಾನ-ಶ್ರೀಲಂಕಾ ಮತ್ತು ಬಾಂಗ್ಲಾದೇಶ-ಶ್ರೀಲಂಕಾ ನಡುವಣ ಪಂದ್ಯ ಟಾಸ್ ಪ್ರಕ್ರಿಯೆಯೂ ಕಾಣದೆ ಮಳೆಗೆ ಆಹುತಿಯಾಗಿತ್ತು. ನಿನ್ನೆ ವೆಸ್ಟ್​ ಇಂಡೀಸ್ ಹಾಗೂ ದ. ಆಫ್ರಿಕಾ ಪಂದ್ಯ ಕೂಡ ಆರಂಭವಾಗಿ ಕೆಲ ಹೊತ್ತಿನಲ್ಲಿ ಮಳೆ ಆರಂಭವಾಗಿ, ಬಿಡದ ಕಾರಣ ಫಲಿತಾಂಶ ಇಲ್ಲದೆ ರದ್ದು ಮಾಡಲಾಯಿತು. ಅಲ್ಲದೆ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಬಳಿಕ ಡಕ್ವರ್ತ್​ ನಿಮಯದ ಪ್ರಕಾರ ಪಂದ್ಯವನ್ನು ಅಂತ್ಯಗೊಳಿಸಲಾಯಿತು.

ಹೀಗೆ ಸದ್ಯ ನಡೆದಿರುವ 16 ಪಂದ್ಯಗಳ ಪೈಕಿ ನಾಲ್ಕು ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿದ್ದಾನೆ. ಲಂಡನ್​ನಲ್ಲಿ ಇನ್ನೂಕೂಡ ಹೆಚ್ಚು ಮಳೆ ಬರುವ ಸಂಭವವಿದೆಯಂತೆ. ಇಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪಂದ್ಯ ಟೌನ್ಟನ್​ನಲ್ಲಿ ನಡೆಯಲಿದ್ದು ಅಲ್ಲಿಯೂ ಜೋರಾಗಿ ಮಳೆ ಸುರಿಯಿತ್ತದೆ.

ಇನ್ನು ಜೂನ್ 16 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೂ ಮಳೆರಾಯನ ಆಗಮನವಾಗಲಿದೆಯಂತೆ. ಈ ಪಂದ್ಯ ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿದ್ದು, ವರುಣ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಇಂಗ್ಲೆಂಡ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Shikhar Dhawan Injury: ಬದಲಿ ಆಟಗಾರನ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ!

ಇದರ ಜೊತೆಗೆ ಜೂ. 13 ರಂದು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ನ್ಯಾಟಿಂಗ್​​ಹ್ಯಾಮ್​​ನಲ್ಲಿ ಕಾದಾಟ ನಡೆಸಲಿದೆ. ಆದರೆ ಇಲ್ಲಿ ಈಗಾಗಲೇ ಮಳೆ ಸುರಿಯುತ್ತಿರುವ ಕಾರಣ, ಟೀಂ ಇಂಡಿಯಾ ಅಭ್ಯಾಸವನ್ನು ಕೂಡ ಮೊಟಕುಗೊಳಿಸಿದೆ. ಮೇ-ಜೂನ್ ಇಂಗ್ಲೆಂಡ್​​ನಲ್ಲಿ ತಿಂಗಳು ಮಳೆಗಾಲ ಎಂದು ತಿಳಿದಿದ್ದರು ವಿಶ್ವಕಪ್ ಆಯೋಜಿಸಿರುವುದು ಸದ್ಯ ಅನೇಕ ಕೆಂಗಣ್ಣಿಗೆ ಕಾರಣವಾಗಿದೆ.

First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...