ಪಾಕ್ ಸೆಮೀಸ್ ತಲುಪದಂತೆ ಮಾಡಲು ಭಾರತ ಮುಂದಿನ ಪಂದ್ಯ ಸೋಲಲೂ ತಯಾರಿದೆ: ಬಸಿತ್ ಅಲಿ

ಸೆಮೀಸ್​ ಹಂತಕ್ಕೇರಲು ಪಾಕ್​ಗೆ​ ಮುಂದಿನ 2ಪಂದ್ಯ ಗೆಲ್ಲಬೇಕಿದೆ. ಇದರ ಜೊತೆಗೆ ಭಾರತ ಕೂಡ ತನಗುಳಿದಿರುವ ಮೂರೂ ಪಂದ್ಯ ಗೆದ್ದು ಪಾಕಿಸ್ತಾನಕ್ಕೆ ನೆರವಾಗಬೇಕು. ಆಗ ಮಾತ್ರ ಪಾಕ್ ನಾಲ್ಕರ ಘಟ್ಟಕ್ಕೇರಲು ಸಾಧ್ಯ.

Vinay Bhat | news18
Updated:June 29, 2019, 2:53 PM IST
ಪಾಕ್ ಸೆಮೀಸ್ ತಲುಪದಂತೆ ಮಾಡಲು ಭಾರತ ಮುಂದಿನ ಪಂದ್ಯ ಸೋಲಲೂ ತಯಾರಿದೆ: ಬಸಿತ್ ಅಲಿ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
  • News18
  • Last Updated: June 29, 2019, 2:53 PM IST
  • Share this:
ಬೆಂಗಳೂರು (ಜೂ. 28): ಈ ಬಾರಿಯ ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಟೀಂ ಇಂಡಿಯಾ ಅದಾಗಲೇ ಸೆಮಿ ಫೈನಲ್ ಹಾದಿ ಸುಗಮಗೊಳಿಸಿದೆ. ಇನ್ನು ಒಂದು ಪಂದ್ಯ ಗೆದ್ದರೆ ಸಾಕು ಕೊಹ್ಲಿ ಸೈನ್ಯ ಸೆಮೀಸ್​ಗೆ ಪ್ರವೇಶ ಪಡೆಯಲಿದೆ. ಇತ್ತ ಭಾರತದ ಬದ್ಧವೈರಿ ಪಾಕಿಸ್ತಾನ ಸೆಮಿ ಫೈನಲ್ ಹಂತಕ್ಕೇರುವ ಆಸೆಯನ್ನು ಇನ್ನೂ ಜೀವಂತವಾಗಿರಿಸಿದ್ದು, ಭಾರತದ ಗೆಲುವಿನ ಮೇಲೆ ಇವರ ಭವಿಷ್ಯ ನಿಂತಿದೆ.

ಈಗಾಗಲೇ ಭಾರತ ತಾನಾಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯ ರದ್ದಾಗಿದೆ. ಈ ಮೂಲಕ 11 ಅಂಕ ತನ್ನ ಭಾರತದ ಖಾತೆಯಲ್ಲಿದೆ. ಜೊತೆಗೆ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಇಂಗ್ಲೆಂಡ್​ ವಿರುದ್ಧ ಉಳಿದ ಮೂರು ಪಂದ್ಯಗಳನ್ನಾಡಲು ಬಾಕಿ ಇದೆ.

ಪಾಕಿಸ್ತಾನ ತಂಡ 7ಪಂದ್ಯಗಳನ್ನಾಡಿದ್ದು, ಮೂರು ಗೆಲುವು, ಮೂರು ಸೋಲು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿ 7ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಸೆಮೀಸ್​ ಹಂತಕ್ಕೇರಲು ಪಾಕ್​ಗೆ​ ಮುಂದಿನ 2ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಬೇಕಾಗಿದೆ. ಇದರ ಜೊತೆಗೆ ಭಾರತ ಕೂಡ ತನಗುಳಿದಿರುವ ಮೂರೂ ಪಂದ್ಯ ಗೆದ್ದು ಪಾಕಿಸ್ತಾನಕ್ಕೆ ನೆರವಾಗಬೇಕು. ಆಗ ಮಾತ್ರ ಪಾಕ್ ನಾಲ್ಕರ ಘಟ್ಟಕ್ಕೇರಲು ಸಾಧ್ಯ.

Cricket World Cup 2019: India may deliberately lose to Bangladesh and Sri Lanka to oust Pakistan, says Basit Ali
ಪಾಕಿಸ್ತಾನ ಕ್ರಿಕೆಟ್ ತಂಡ


ಧೋನಿ ಕ್ಯಾಚ್​ಗೆ ಫಿದಾ ಆದ ಅಭಿಮಾನಿಗಳು; ಟ್ರೋಲ್​ ಆದ ಪಾಕ್​ ನಾಯಕ​ ಸರ್ಫರಾಜ್​

ಹೀಗಿರುವಾಗ ಪಾಕ್ ತಂಡದ ಮಾಜಿ ಕ್ರಿಕೆಟರ್ ಬಸಿತ್ ಅಲಿ, ಟೀಂ ಇಂಡಿಯಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 'ಭಾರತ ತಂಡಕ್ಕೆ ಇನ್ನು ಮೂರು ಪಂದ್ಯಗಳು ಬಾಕಿಯಿದೆ. ಈ ಮೂರರಲ್ಲಿ ಒಂದು ಪಂದ್ಯ ಗೆದ್ದರೆ ಸುಲಭವಾಗಿ ಸೆಮಿಸ್​ಗೆ ಹೋಗುತ್ತದೆ. ಆದರೆ, ಭಾರತಕ್ಕೆ ಪಾಕಿಸ್ತಾನ ಸೆಮಿಫೈನಲ್​ಗೆ ಬರುವುದು ಇಷ್ಟವಿಲ್ಲ. ಹೀಗಾಗಿ ಭಾರತ ಇಂಗ್ಲೆಂಡ್ ನಂತರದ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಸೋಲುತ್ತದೆ. ಸೋತು ಪಾಕಿಸ್ತಾನವನ್ನು ಸೆಮಿ ಫೈನಲ್​ಗೆ ಬರದಂತೆ ಮಾಡುವ ಸಾಧ್ಯೆತಗಳು ಹೆಚ್ಚಿವೆ. ಭಾರತಕ್ಕೆ ಪಾಕಿಸ್ತಾನ ಸೆಮಿ ಫೈನಲ್​ಗೆ ಬರುವುದು ಇಷ್ಟವಿಲ್ಲ' ಎಂದು ಬಸಿತ್ ಅಲಿ ಹೇಳಿದ್ದಾರೆ.

ಇನ್ನು ಭಾರತೀಯ ಆಟಗಾರರು ಅಫ್ಘಾನಿಸ್ತಾನ ವಿರುದ್ಧ ಯಾವರೀತಿ ಪ್ರದರ್ಶನ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇದೇರೀತಿ ಪ್ರದರ್ಶನವನ್ನು ಭಾರತ ಮುಂದಿನ ಬಾಂಗ್ಲಾ ಹಾಗೂ ಲಂಕಾ ವಿರುದ್ಧ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Loading...

First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...