Shikhar Dhawan: ಧವನ್ ಅನುಪಸ್ಥಿತಿ ಟೀಂ ಇಂಡಿಯಾ ಮೇಲೆ ಹೇಗೆ ಪರಿಣಾಮ ಬೀಳಲಿದೆ?

Shikhar Dhawan: ವಿಶ್ವಕಪ್​ನಲ್ಲಿ ಶಿಖರ್​ ಧವನ್​ರ ಪ್ರಾಮುಖ್ಯತೆ ಟೀಂ ಇಂಡಿಯಾದಲ್ಲಿ ತುಂಬಾನೆ ಇದೆ. ಹೀಗಾಗಿ ಧವನ್​ ಬೇಗ ಚೇತರಿಸಿಕೊಂಡು ತಂಡಕ್ಕೆ ಮರಳಲಿ ಎಂಬುದೆ ಅಭಿಮಾನಿಗಳ ಹಾರೈಕೆಯಾಗಿದೆ.

Vinay Bhat | news18
Updated:June 20, 2019, 10:40 AM IST
Shikhar Dhawan: ಧವನ್ ಅನುಪಸ್ಥಿತಿ ಟೀಂ ಇಂಡಿಯಾ ಮೇಲೆ ಹೇಗೆ ಪರಿಣಾಮ ಬೀಳಲಿದೆ?
ಶಿಖರ್ ಧವನ್
  • News18
  • Last Updated: June 20, 2019, 10:40 AM IST
  • Share this:
ಬೆಂಗಳೂರು (ಜೂ. 19): ಕಳೆದ ಒಂದೂವರೆ ವರ್ಷದಲ್ಲಿ ಅಮೋಘ ಫಾರ್ಮ್​ನಲ್ಲಿರುವ ಶಿಖರ್ ಧವನ್​ ರನ್​​ಗಳನ್ನ ಬೇಟೆಯಾಡುತ್ತಿದ್ದಾರೆ. ಕನ್ಸಿಸ್ಟೆಂಟ್​ ಪರ್ಫಾಮೆನ್ಸ್ ಮೂಲಕವೇ ತಂಡದಲ್ಲಿ ತನ್ನ ಸ್ಥಾನವನ್ನ ಗಿಟ್ಟಿಸಿರುವ ಶಿಖರ್, ಮೂರು ಫಾರ್ಮೆಟ್​​ನಲ್ಲಿ ಮಿಂಚು ಹರಿಸುತ್ತಾದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದ ಧವನ್ ವಿಶ್ವಕಪ್​ನಿಂದಲೇ ಹೊರಗುಳಿಯ ಬೇಕಾಗಿ ಬಂದಿದೆ. ಈ ಮೂಲಕ ಧವನ್​ಗೆ ವಿಶ್ವಕಪ್ ಹಾದಿ ಕೊನೆಗೊಂಡಿದೆ. ಹೀಗಾಗಿ ಟೀಂ ಇಂಡಿಯಾಕ್ಕೆ ಧವನ್ ಅನುಪಸ್ಥಿತಿ ದೊಡ್ಡ ಮಟ್ಟದಲ್ಲಿ ಕಾಡಲಿದೆ.

ಧವನ್ ಫಾರ್ಮ್ ಕಳೆ ಫಾರ್ಮ್​ನಲ್ಲಿದ್ದರೂ ವಿಶ್ವಕಪ್​​, ಚಾಂಪಿಯನ್ ಟ್ರೋಫಿ ಬಂತು ಎಂದರೆ ಅದ್ಭುತ ಪ್ರದರ್ಶನ ನೀಡುತ್ತಾರೆ. ಇದಕ್ಕೆ ಇತಿಹಾಸವೇ ಸಾಕ್ಷಿ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಧವನ್​ ಮಿಂಚಿನ ಸೆಂಚುರಿ ಸಿಡಿಸಿದರು. ಅಲ್ಲಿಯವರೆಗೂ ಧವನ್​​ ಫಾರ್ಮ್​​ನದ್ದೇ ಟೀಂ​​ ಇಂಡಿಯಾಕ್ಕೆ ತಲೆನೋವಾಗಿತ್ತು. ಆದರೆ ಓವಲ್​​ನಲ್ಲಿ ತನ್ನ 3ನೇ ಸೆಂಚುರಿ ಸಿಡಿಸಿದ ಧವನ್​​ ವಿಶ್ವಕಪ್ ಹಾಗೂ ಚಾಂಪಿಯನ್​ ಟ್ರೋಫಿಯಲ್ಲಿ ಒಟ್ಟಾರೆ 6ನೇ ಶತಕಕ್ಕೆ ಮುತ್ತಿಟ್ಟರು.

ಆಂಗ್ಲರ ನಾಡಿಗೆ ಕಾಲಿಟ್ಟ ಕೂಡಲೇ ಧವನ್ ಇಂಗ್ಲೆಂಡ್​ನಲ್ಲಿ 1 ಸಾವಿರ ರನ್​ ಪೂರೈಸಿದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್​​, ಹಾಗೆಯೇ ಸೌರವ್​ ಗಂಗೂಲಿಯಂತಹ ದಿಗ್ಗಜ ಆಟಗಾರರ ಬಳಿಕ ಈ ಸಾಧನೆ ಮಾಡಿದ 4ನೇ ಭಾರತದ ಬ್ಯಾಟ್ಸ್​ಮನ್ ಎಂಬ ದಾಖಲೆ​ ಗಬ್ಬರ್​ ಹೆಗಲಿಗೇರಿದೆ. ಈ ಅಂಕಿ-ಅಂಶಗಳೇ ಸಾಕು ಇಂಗ್ಲೆಂಡ್​​ನಲ್ಲಿ  ಧವನ್​ ಎಷ್ಟರ ಮಟ್ಟಿಗೆ ಎದುರಾಳಿಯನ್ನ ಕಾಡಬಲ್ಲರು ಎಂದು.

ಮತ್ತೆ ಕ್ರಿಕೆಟ್ ಆಡಲು ಬಿಸಿಸಿಐ ಅನುಮತಿ ಕೋರಿದ ಯುವರಾಜ್ ಸಿಂಗ್

Shikhar-Dhawan-Reuters
ಇಂಜುರಿಗೆ ತುತ್ತಾದ ಶಿಖರ್ ಧವನ್


ಇನ್ನು ಭಾರತದ ಕ್ರಿಕೆಟ್​​ನ ಧೃವ ನಕ್ಷತ್ರಗಳು ಸಚಿನ್ ಹಾಗೂ ಗಂಗೂಲಿ. ಇವರಿಬ್ಬರ ಜೊತೆಯಾಟ ಏಕದಿನ ಕ್ರಿಕೆಟ್​ನಲ್ಲಿ ಅನೇಕ ದಾಖಲೆಯನ್ನ ಸೃಷ್ಟಿಸಿವೆ. ಆದರೆ ಆ ಬಳಿಕ ಭಾರತದ ಯಶಸ್ವಿ ಜೋಡಿ ಎನಿಸಿರುವ ರೋಹಿತ್​ ಶರ್ಮಾ- ಶಿಖರ್ ಧವನ್ ಟೀಂ ಇಂಡಿಯಾಕ್ಕೆ ಭದ್ರ ಬುನಾದಿ ಹಾಕಿಕೊಡಬಲ್ಲರು. ಇವರಿಬ್ಬರ ನಡುವಿನ ಹೊಂದಾಣಿಕೆ ತಂಡಕ್ಕೆ ಉತ್ತಮ ಆರಂಭ ತಂದುಕೊಡಬಲ್ಲದು.

ಆದರೆ ಇದೀಗ ಶಿಖರ್ ಧವನ್​ ಅನುಪಸ್ಥಿತಿ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ಹೀಗೆ ಸದ್ಯ ವಿಶ್ವಕಪ್​ನಲ್ಲಿ ಶಿಖರ್​ ಧವನ್​ರ ಪ್ರಾಮುಖ್ಯತೆ ಟೀಂ ಇಂಡಿಯಾದಲ್ಲಿ ತುಂಬಾನೆ ಇದೆ. ಹೀಗಾಗಿ ಧವನ್​ ಬೇಗ ಚೇತರಿಸಿಕೊಂಡು ತಂಡಕ್ಕೆ ಮರಳಲಿ ಎಂಬುದೆ ಅಭಿಮಾನಿಗಳ ಹಾರೈಕೆಯಾಗಿದೆ.
First published: June 19, 2019, 10:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading