News18 India World Cup 2019

India vs Pakistan: ಭಾರತ vs ಪಾಕಿಸ್ತಾನ ಪಂದ್ಯದ ಮಧ್ಯೆ ಅದೆಷ್ಟೋ ಬಾರಿ ನಡೆದಿತ್ತು ಮಾರಾಮಾರಿ!

India vs Pakistan: ಶಾಹಿದ್ ಅಫ್ರಿದಿ ಹಾಗೂ ಗೌತಮ್ ಗಂಭೀರ್ ನಡುವಣ ಗಲಾಟೆ ಎಂದೂ ಮರೆಯಲಾಗದ ಘಟನೆ. 2007ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಏಷ್ಯಾಕಪ್ ಪಂದ್ಯದಲ್ಲಿ ಅಫ್ರಿದಿ ಮತ್ತು ಗಂಭೀರ್ ಕ್ರೀಸ್​ನಲ್ಲಿ ಕಾದಾಟಕ್ಕೆ ನಿಂತಿದ್ದರು.

news18
Updated:June 14, 2019, 6:01 PM IST
India vs Pakistan: ಭಾರತ vs ಪಾಕಿಸ್ತಾನ ಪಂದ್ಯದ ಮಧ್ಯೆ ಅದೆಷ್ಟೋ ಬಾರಿ ನಡೆದಿತ್ತು ಮಾರಾಮಾರಿ!
ಸಾಂದರ್ಭಿಕ ಚಿತ್ರ
news18
Updated: June 14, 2019, 6:01 PM IST
ಬೆಂಗಳೂರು (ಜೂ. 14): ಭಾರತ-ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ಎಂದರೆ ಅದು ಕೇವಲ ಕ್ರೀಡೆಯಲ್ಲ. ಎರಡೂ ದೇಶಗಳ ಮಧ್ಯೆ ಕ್ರಿಕೆಟ್ ಮ್ಯಾಚ್ ಆಡುವಾಗ ಅಲ್ಲೊಂದು ಯುದ್ಧದ ವಾತಾವರಣ ಇರುತ್ತದೆ. ಗೆಲ್ಲಲೇಬೇಕೆಂದು ಎರಡೂ ತಂಡಗಳ ಆಟಗಾರರು ಜಿದ್ದಿಗೆ ಬಿದ್ದು ಆಡುತ್ತಾರೆ. ಇಲ್ಲಿ ಎದುರಾಳಿಗಳನ್ನು ಕೆಣಕುವ ಮೂಲಕವೇ ಗೇಮ್ ಅನ್ನು​ ಚೇಂಜ್ ಮಾಡಲು ನೋಡುತ್ತಾರೆ. ಭಾರತದ ವಿರುದ್ಧ ಪಂದ್ಯಗಳಲ್ಲಿ ಪಾಕ್ ಆಟಗಾರರು ಬೇಕುಬೇಕಂತಲೇ ಜಗಳಕ್ಕೆ ಬರುತ್ತಾರೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ಓದಿ..

ಅದು 1992ರ ವಿಶ್ವಕಪ್ ಪಂದ್ಯ. ಪಾಕ್​​ನ ಬಲಾಢ್ಯ ಆಟಗಾರ ಜಾವೇದ್ ಮಿಯಾಂದಾದ್ ಟೀಂ ಇಂಡಿಯಾವನ್ನ ಕೆಣಕಿದ್ದರು. ಸುಖಾಸುಮ್ಮನೆ ಭಾರತದ ವಿಕೆಟ್ ಕೀಪರ್ ಕಿರಣ್ ಮೋರೆ ಜೊತೆ ವಾಗ್ವಾದಕ್ಕಿಳಿದಿದ್ದರು. ಮೋರೆ ಜೊತೆ ವಾಗ್ವಾದ ನಡೆಸಿದ ಮುಂದಿನ ಎಸೆತದಲ್ಲೇ ರನೌಟ್​​ನಿಂದ ಬಚಾವಾದ ಮಿಯಾಂದಾದ್ ಕ್ರೀಸ್​​ನಲ್ಲಿ ಜಂಪ್ ಹೊಡೆದಿದ್ದು ಭಾರೀ ಸುದ್ದಿಯಾಗಿತ್ತು.

ಈ ವೇಳೆ ಮಿಯಂದಾದ್​ಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ಕೊಟ್ಟಿದ್ದು ಕನ್ನಡಿಗ ಜಾವಗಲ್ ಎಕ್ಸ್​ಪ್ರೆಸ್. ಮಿಯಾಂದಾದ್​​ನನ್ನು ಕ್ಲೀನ್ ಬೌಲ್ಡ್ ಮಾಡಿ  ಪೆವಿಲಿಯನ್​ಗೆ ಅಟ್ಟಿದ ಶ್ರೀನಾಥ್, ಪಾಕ್ ಆಟಗಾರರ ಮೈಚಳಿ ಬಿಡಿಸಿದ್ದರು.ಭಾರತ ಪಾಕ್ ಫೈಟ್​ನಲ್ಲಿ ನೆನಪಿಗೆ ಬರುವ ಮತ್ತೊಂದು ಘಟನೆ ಆಮೀರ್ ಸೊಹೈಲ್ ಹಾಗೂ ವೆಂಕಟೇಶ್ ಪ್ರಸಾದ್ ಜಗಳ. ವೆಂಕಟೇಶ್ ಪ್ರಸಾದ್ ಕ್ರಿಕೆಟ್ ಅಂಗಳದಲ್ಲಿ ಯಾರನ್ನೂ ಕೆಣಕಿದವರಲ್ಲ. ಅಂತಹ ಪ್ರಸಾದ್ ಅವರನ್ನು 1996ರ ವಿಶ್ವಕಪ್ ಪಂದ್ಯದಲ್ಲಿ ಪಾಕ್ ದಾಂಡಿಗ ಆಮೀರ್ ಸೋಹೈಲ್ ಕೆಣಕಿ ಬಿಟ್ಟಿದ್ದರು. ಪ್ರಸಾದ್ ಅವರ ಬಾಲ್​ಗೆ ಬೌಂಡರಿ ಬಾರಿಸಿ, ನೋಡು ನಿನ್ ಬಾಲ್​ಗೆ ಫೋರ್ ಹೊಡೆದೆ ಎಂಬರೀತಿ ಸಿಗ್ನಲ್ ಮಾಡಿ ತೋರಿಸಿದ್ದರು.

ಆಮೀರ್ ಸೊಹೈಲ್ ಕೆಣಕಿದ್ದರೂ ಸುಮ್ಮನಿದ್ದ ವೆಂಕಟೇಶ್ ಪ್ರಸಾದ್, ಮುಂದಿನ​ ಬಾಲ್​ನಲ್ಲೇ ಸೋಹೈಲ್​​ರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್​ಗೆ ನಡಿ ಎಂದು ಸಿಗ್ನಲ್ ಮಾಡಿ ತಿರುಗೇಟು ಕೊಟ್ಟಿದ್ದರು.
Loading...ಶಾಹಿದ್ ಅಫ್ರಿದಿ ಹಾಗೂ ಗೌತಮ್ ಗಂಭೀರ್ ನಡುವಣ ಗಲಾಟೆ ಎಂದೂ ಮರೆಯಲಾಗದ ಘಟನೆ. 2007ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಏಷ್ಯಾಕಪ್ ಪಂದ್ಯದಲ್ಲಿ ಅಫ್ರಿದಿ ಮತ್ತು ಗಂಭೀರ್ ಕ್ರೀಸ್​ನಲ್ಲಿ ಕಾದಾಟಕ್ಕೆ ನಿಂತಿದ್ದರು. ರನ್ ಓಡಬೇಕಾದರೆ ಕ್ರೀಸ್​ನಲ್ಲಿ ನಿಂತಿದ್ದ ಅಫ್ರಿದಿಗೆ ಗಂಭೀರ್ ಸ್ವಲ್ಪ ಜೋರಾಗೇ ಡಿಕ್ಕಿ ಹೊಡೆದಿದ್ದರು. ಇದರಿಂದ ಕೆರಳಿದ ಅಫ್ರಿದಿ, ಗಂಭೀರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಇವರ ಜಗಳ ಎಷ್ಟು ತಾರಕಕ್ಕೇರಿತ್ತು ಅಂದರೆ ಇಬ್ಬರೂ ಕೂಡ ಮನೆಯ ಹೆಣ್ಣುಮಕ್ಕಳ ಹೆಸರೆತ್ತಿ ಹೀಯಾಳಿಸಿದ್ದರಂತೆ.

ಆ ಜಗಳ ನಡೆದು 12 ವರ್ಷ ಕಳೆದರೂ ಇವರಿಬ್ಬರ ಮುನಿಸು ಇನ್ನೂ ಕೊನೆಯಾಗಿಲ್ಲ. ಇತ್ತೀಚೆಗೆ ಬಿಡುಗಡೆಯಾದ ತನ್ನ ಆತ್ಮಕತೆ ಗೇಮ್​ ಚೇಂಜರ್​ನಲ್ಲೂ ಅಂದಿನ ಘಟನೆಯನ್ನ ಅಫ್ರಿದಿ ನೆನಪಿಸಿದ್ದಾರೆ. ಗಂಭೀರ್ ಜಗಳಗಂಟ, ವ್ಯಕ್ತಿತ್ವನೇ ಇಲ್ಲದವ ಅಂತ ಖಾರವಾಗಿ ಬರೆದಿದ್ದಾರೆ. ಅಫ್ರಿದಿ ಆರೋಪಕ್ಕೆ ಗಂಭೀರ್ ಕೂಡ ತಿರುಗೇಟು ನೀಡಿದ್ದು, ನೀನೊಬ್ಬ ಹಾಸ್ಯಾಸ್ಪದ ವ್ಯಕ್ತಿ, ನಾನೇ ನಿನ್ನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗುವೆ ಎಂದು ಹೇಳಿದ್ದರು.ಇನ್ನು ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದಿದ್ದು ಪಾಕ್​​ನ ಮಾಜಿ ವೇಗಿ ಶೋಯೆಬ್ ಅಕ್ತರ್. ಹಿಂದೊಮ್ಮೆ ನಡೆದ ಇಂಡೋ ಪಾಕ್ ಪಂದ್ಯದಲ್ಲಿ ಸೌಮ್ಯ ಸ್ವಭಾವದ ಆಟಗಾರ ರಾಹುಲ್ ದ್ರಾವಿಡ್ ಅವರನ್ನೇ ಕೆಣಕಿದ್ದರು ಅಖ್ತರ್. ರನ್ ಓಡುವ ವೇಳೆ ಕ್ರೀಸ್​ಗೆ ಅಡ್ಡಬಂದಿದ್ದ ಅಖ್ತರ್​ಗೆ ದ್ರಾವಿಡ್ ಭುಜ ಸ್ವಲ್ಪ ತಾಗಿದ್ದಷ್ಟೇ, ಅಖ್ತರ್ ಕ್ರೀಸ್​ನಲ್ಲೇ ಜಗಳಕ್ಕೆ ನಿಂತಿದ್ದರು.

ಮತ್ತೊಂದು ಪಂದ್ಯದಲ್ಲಿ ಹರ್ಭಜನ್ ಸಿಂಗ್ ಅವ್ರನ್ನ ಕೆಣಕಿದ್ದ ಶೋಯೆಬ್ ಅಖ್ತರ್ ಸರಿಯಾಗೇ ಚಚ್ಚಿಸಿಕೊಂಡಿದ್ದರು. 2010ರಲ್ಲಿ ನಡೆದ ಭಾರತ ಪಾಕ್​​ ಏಷ್ಯಾಕಪ್ ಮ್ಯಾಚ್​ ತೀವ್ರ ಪೈಪೋಟಿಯಿಂದ ಕೂಡಿತ್ತು. 49ನೇ ಓವರ್​ನ ಕೊನೆಯ ಎಸೆತ, ಕ್ರೀಸ್​ನಲ್ಲಿದ್ದ ಹರ್ಭಜನ್​​ ಸಿಂಗ್ ಮೇಲೆ ಬೌನ್ಸರ್ ಪ್ರಯೋಗಿಸಿದ್ದ ಅಖ್ತರ್, ಭಜ್ಜಿಯನ್ನ ಮಾತಿನಲ್ಲೇ ಕೆಣಕಿದ್ದರು.

ಅಖ್ತರ್ ಕುಚೇಷ್ಟೆಗೆ ಕೆರಳಿಹೋದ ಭಜ್ಜಿ ಸಿಕ್ಸ್ ಹೊಡೆದು ತೋರಿಸ್ತೀನಿ ಎಂದು ಅಖ್ತರ್​ಗೆ ಪಂಥಾಹ್ವನ ಕೊಟ್ಟಿದ್ದರು. ಅದರಂತೆ ಕೊನೆಯ ಓವರ್​ನಲ್ಲಿ ಆಮೀರ್ ಬಾಲ್​ಗೆ ಸಿಕ್ಸರ್ ಚಚ್ಚಿದ ಹರ್ಭಜನ್ ಸಿಂಗ್ ಟೀಂ ಇಂಡಿಯಾವನ್ನ ಗೆಲುವಿನ ದಡ ಸೇರಿದರು. ಈ ಮ್ಯಾಚ್​​ನ್ನ ಸೋತ ಪಾಕಿಸ್ತಾನ ಪಂದ್ಯಾಕೂಟದಿಂದ ಹೊರಬಿದ್ದಿತ್ತು.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...