ಆರ್​ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ; ಹರಾಜಿಗೂ ಮುನ್ನ ಮೂರು ಸ್ಟಾರ್ ಆಟಗಾರರು ಹೊರಕ್ಕೆ?

Royal Challengers Bengaluru: ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಫ್ರಾಂಚೈಸಿ ಹಿಂದಿನ ಆವೃತ್ತಿಯಲ್ಲಿ ಕಳಪೆ ಆಟವಾಡಿದ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರಮಾಡಿದೆ ಎಂದು ಹೇಳಲಾಗಿದೆ.

Vinay Bhat | news18-kannada
Updated:November 6, 2019, 9:43 AM IST
ಆರ್​ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ; ಹರಾಜಿಗೂ ಮುನ್ನ ಮೂರು ಸ್ಟಾರ್ ಆಟಗಾರರು ಹೊರಕ್ಕೆ?
ಅಂದಹಾಗೆ ಈ ಹರಾಜು bidorbuy.co.za ಈ ವೆಬ್ಸೈಟಿನಲ್ಲಿ ನಡೆಯಲಿದ್ದು, ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಈ ಇಬ್ಬರೂ ಆಟಗಾರರು ಮುಂದಿನ ದಿನಗಳಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಲಿದ್ದಾರೆ.
  • Share this:
ಬೆಂಗಳೂರು (ಅ. 17): ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಕೆಲ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಫ್ರಾಂಚೈಸಿ ಹಿಂದಿನ ಆವೃತ್ತಿಯಲ್ಲಿ ಕಳಪೆ ಆಟವಾಡಿದ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರಮಾಡಿದೆ ಎಂದು ಹೇಳಲಾಗಿದೆ. ಸದ್ಯ ಆರ್​ಸಿಬಿ ಈ ಮೂವರು ಪ್ಲೇಯರ್​ಗಳನ್ನು ರಿಲೀಸ್ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

IPL 2020: 3 players RCB might release before the IPL auction
ಟಿಮ್ ಸೌಧಿ


ನ್ಯೂಜಿಲೆಂಡ್ ತಂಡದ ಪ್ರಮುಖ ಬೌಲರ್ ಟಿಮ್ ಸೌಧಿ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡದಲ್ಲಿದ್ದರು. ಆದರೆ, ಇವರು ಆಡಿದ್ದು ಕೇವಲ 3 ಪಂದ್ಯಗಳನ್ನಷ್ಟೆ. ಪಡೆದಿದ್ದು 1 ವಿಕೆಟ್ ಜೊತೆಗೆ ಇಕಾನಮಿ ಬರೋಬ್ಬರಿ 13.11. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಕೆಕೆಆರ್ ವಿರುದ್ಧ ಗೆಲ್ಲುವ ಪಂದ್ಯವನ್ನು ಕೈಚೆಲ್ಲುವಂತೆ ಮಾಡಿದ್ದು ಸೌಧಿ. 4 ಓವರ್​ಗೆ 61 ನೀಡಿ ದುಬಾರಿ ಎನಿಸಿಕೊಂಡರು. ಹೀಗಾಗಿ ಇವರನ್ನು ಆರ್​ಸಿಬಿ ತಂಡದಿಂದ ಕೈಬಿಡಲಿದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 24ಕ್ಕೆ ನಿರ್ಧಾರವಾಗಲಿದೆ ಧೋನಿ ಭವಿಷ್ಯ; ಗಂಗೂಲಿಯಿಂದ ಅಚ್ಚರಿಯ ಹೇಳಿಕೆ!

ಆಲ್ರೌಂಡರ್ ಆಟಗಾರ ಪವನ್ ನೇಗಿ ಕೂಡ ಆರ್​ಸಿಬಿ ತಂಡದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಲು ವಿಫಲರಾಗಿದ್ದರು. 2018 ರಲ್ಲಿ ಆರ್​ಸಿಬಿ ಇವರನ್ನು ರಿಟೇನ್ ಮಾಡಿ ಅಚ್ಚರಿ ಮೂಡಿಸಿತ್ತು. ಆದರೆ, ಆಡಿದ 7 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದರಷ್ಟೆ. ಹೀಗಾಗಿ ಇನ್ನೊಬ್ಬ ಉತ್ತಮ ಆಲ್ರೌಂಡರ್ ಆಟಗಾರ ತಂಡಕ್ಕೆ ಅವಶ್ಯಕ ಇರುವ ಕಾರಣ ಪವನ್ ಹೊರಗುಳಿಯುವುದು ಖಚಿತ.

2019ರ ಹರಾಜಿನಲ್ಲಿ ದ. ಆಫ್ರಿಕಾದ ವಿಕೆಟ್ ಕೀಪರ್- ಬ್ಯಾಟ್ಸ್​ಮನ್​ ಹೆನ್ರಿಚ್ ಕ್ಲಾಸೆನ್ ಅವರನ್ನು ಆರ್​ಸಿಬಿ 50 ಲಕ್ಷ ಕೊಟ್ಟು ಖರೀದಿ ಮಾಡಿತ್ತು. ಆದರೆ, ಇವರು ಸಿಕ್ಕ ಅವಕಾಶ ಸರಿಯಾದ ರೀತಿ ಉಪಯೋಗಿಸಿಕೊಂಡಿಲ್ಲ. ಆಡಿದ 3 ಪಂದ್ಯಗಳಲ್ಲಿ ಕೇವಲ 9 ರನ್ ಗಳಿಸಿದರಷ್ಟೆ. ಪಾರ್ಥಿವ್ ಪಟೇಲ್ ಖಾಯಂ ಸದಸ್ಯನಾಗಿದ್ದ ಕಾರಣ ವಿಕೆಟ್ ಕೀಪಿಂಗ್​​ನಲ್ಲೂ ಕ್ಲಾಸೆನ್​ಗೆ ಮಿಂಚಲು ಅವಕಾಶ ಸಿಗಲಿಲ್ಲ. ಹೀಗಾಗಿ ಹೆನ್ರಿಚ್​ರನ್ನು ಈ ಬಾರಿ ಆರ್​ಸಿಬಿ ಫ್ರಾಂಚೈಸಿ ತಂಡದಿಂದ ಕೈಬಿಡುವುದು ಪಕ್ಕ ಎಂದು ಹೇಳಲಾಗುತ್ತಿದೆ.
First published: October 17, 2019, 9:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading