ದಾಖಲೆಗಳ ಸರಮಾಲೆಯೊಂದಿಗೆ ಅಂತ್ಯವಾಯಿತು 12ನೇ ಆವೃತ್ತಿಯ ಐಪಿಎಲ್!

ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 1 ರನ್​ಗಳ ರೋಚಕ ಗೆಲುವು ಸಾಧಿಸಿದ್ದು, 4ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Harshith AS | news18
Updated:May 13, 2019, 10:48 AM IST
ದಾಖಲೆಗಳ ಸರಮಾಲೆಯೊಂದಿಗೆ ಅಂತ್ಯವಾಯಿತು 12ನೇ ಆವೃತ್ತಿಯ ಐಪಿಎಲ್!
ಐಪಿಎಲ್ 2019
  • News18
  • Last Updated: May 13, 2019, 10:48 AM IST
  • Share this:
ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 1 ರನ್​ಗಳ ರೋಚಕ ಗೆಲುವು ಸಾಧಿಸಿದ್ದು, 4ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶೇನ್ ವಾಟ್ಸನ್​​ರ ಹೋರಾಟದ ಹೊರತಾಗಿಯು ಮುಂಬೈ ಬೌಲರ್​ಗಳ ಅಮೋಘ ಪ್ರದರ್ಶನದ ಫಲವಾಗಿ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​​ 4ನೇ ಬಾರಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ.

ಈ ಬಾರಿಯ ಐಪಿಎಲ್ ತುಂಬಾನೇ ರೋಚಕತೆಯಿಂದ ಕೂಡಿತ್ತು. 12ನೇ ಆವೃತ್ತಿಯಲ್ಲಿನ ಪ್ರಮುಖ ದಾಖಲೆಗಳನ್ನು ನೋಡುವುದಾದರೆ..

ಮೊದಲಿಗೆ ಆರೆಂಜ್ ಕ್ಯಾಪ್ (ಗರಿಷ್ಠ ರನ್) ಪಟ್ಟಿಯಲ್ಲಿ ಸನ್​ ರೈಸರ್ಸ್​ ತಂಡದ ಸ್ಫೋಟಕ ಬ್ಯಾಟ್ಸ್​ಮನ್​​ ಡೇವಿಡ್​ ವಾರ್ನರ್​ ಅಧಿಕ ರನ್​ ಕಲೆಹಾಕುವ ಮೂಲಕ ಮುಂಚೂಣಿಯಲ್ಲಿದ್ದಾರೆ. ವಾರ್ನರ್​ ಆಡಿದ 12 ಪಂದ್ಯಗಳಲ್ಲಿ 692 ರನ್​ಗಳನ್ನು ಕಲೆಹಾಕಿಕೊಂಡು ಮೊದಲ ಸ್ಥಾನದಲ್ಲಿದ್ದು, 12ನೇ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಜೊತೆಗೆ 10 ಲಕ್ಷ ರೂ. ಬಹುಮಾನ ತಮ್ಮದಾಗಿಸಿದ್ದಾರೆ.

ಇನ್ನು ಕಿಂಗ್ಸ್​ ಇಲೆವನ್​​ ಪಂಜಾಬ್​ ತಂಡದ ಬ್ಯಾಟ್ಸ್​ಮನ್​ ಕೆಎಲ್​ ರಾಹುಲ್​ 2ನೇ ಸ್ಥಾನ ಅಲಂಕರಿಸಿದ್ದಾರೆ. ಇವರು 14 ಪಂದ್ಯದಲ್ಲಿ 593 ರನ್​ಗಳನ್ನು ಸಿಡಿಸಿದ್ದಾರೆ. ಡೆಲ್ಲಿ ತಂಡದ ಬ್ಯಾಟ್ಸ್​ಮನ್​ ಶಿಖರ್​ ಧವನ್​ 3ನೇ ಸ್ಥಾನದಲ್ಲಿದ್ದು, 16 ಪಂದ್ಯಗಳಲ್ಲಿ 521 ರನ್​ಗಳನ್ನು ಕಲೆಹಾಕುವುದರ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ, ಕೋಲ್ಕತ್ತಾ​ ತಂಡದ ಮತ್ತೊರ್ವ ಆಟಗಾರ ರಸೆಲ್​​ ಆಡಿದ 14 ಪಂದ್ಯಗಳಲ್ಲಿ 510 ರನ್​ಗಳನ್ನು, ಮುಂಬೈ ತಂಡದ ಬ್ಯಾಟ್ಸ್​ಮನ್​ ಕ್ವಿಂಟಾನ್​ ಡಿಕಾಕ್​​ 15 ಪಂದ್ಯಗಳಲ್ಲಿ 500 ರನ್​​​ಗಳ ಮೂಲಕ ಕ್ರಮವಾಗಿ 4 ಮತ್ತು 5ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.


ಕ್ರಮಸಂಖ್ಯೆ ಆಟಗಾರರು  ಪಂದ್ಯ  ರನ್​
1 ಡೇವಿಡ್​ ವಾರ್ನರ್ 12 692
2 ಲೋಕೆಶ್​ ರಾಹುಲ್ 14 593
3 ಶಿಖರ್​ ಧವನ್​ 16 521
4 ರಸೆಲ್​ 14 510
5 ಕ್ವಿಂಟನ್​ ಡಿಕಾಕ್ 15 500

ಇನ್ನು 2019ರ ಐಪಿಎಲ್​ ಪಂದ್ಯದದಲ್ಲಿ ಪರ್ಪಲ್ ಕ್ಯಾಪ್ (ಗರಿಷ್ಠ ವಿಕೆಟ್) ವಿಕೆಟ್​ ಕಬಳಿಸಿದ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಇಮ್ರಾನ್ ತಾಹೀರ್​ ಇದ್ದು 17 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಜೊತೆಗೆ 10 ಲಕ್ಷ ರೂ. ತಮ್ಮದಾಗಿಸಿದ್ದಾರೆ.

ಇದನ್ನೂ ಓದಿ: ಅಮ್ಮಂದಿರ ದಿನ: ಮನಮುಟ್ಟುವಂತಿದೆ ಗಾಯಕ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡು

ಡೆಲ್ಲಿ ತಂಡದ ವೇಗಿ ಕಗಿಸೋ ರಬಾಡ ಎರಡನೇ ಸ್ಥಾನ ಪಡೆದಿದ್ದಾರೆ. ರಬಾಡ ಆಡಿದ 12 ಪಂದ್ಯಗಳಲ್ಲಿ 25 ವಿಕೆಟ್​ಗಳನ್ನು ಕಬಳಿಸುವ ಮೂಲಕ ತಂಡದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.  2ನೇ ಸ್ಥಾನದಲ್ಲಿ  ಚೆನ್ನೈ ತಂಡದ ವೇಗಿ ಇಮ್ರಾನ್​ ತಾಹಿರ್​ ಅವರಿದ್ದು, 15 ಪಂದ್ಯಗಳ್ಲಿ 23 ವಿಕೆಟ್​ಗಳಿಸಿಕೊಂಡಿದ್ದಾರೆ. ಅಂತೆಯೇ, ರಾಜಸ್ಥಾನ್​ ರಾಯಲ್ಸ್​ ತಂಡದ ಶ್ರೇಯಸ್​ ಗೋಪಾಲ್​ 14 ಪಂದ್ಯಗಳ ಮೂಲಕ 20 ವಿಕೆಟ್​ ಉರುಳಿಸಿ 3ನೇ ಸ್ಥಾನದಲ್ಲಿದ್ದಾರೆ. ಸನ್​​ರೈಸರ್ಸ್​ ತಂಡದ ವೇಗಿ ಖಲೀಲ್​ ಅಹಮ್ಮದ್​ 9 ಪಂದ್ಯಗಳಲ್ಲಿ 19 ವಿಕೆಟ್​, ಚೆನ್ನೈ ತಂಡದ ಬೌಲರ್​ ದೀಪಕ್​ ಚಾಹರ್​​ 16 ಪಂದ್ಯಗಳಲ್ಲಿ 19 ವಿಕೆಟ್​ಗಳನ್ನು ಪಡೆದಿದ್ದಾರೆ.ಕ್ರಮಸಂಖ್ಯೆ ಬೌಲರ್​​ ಪಂದ್ಯ ವಿಕೆಟ್​
1 ಇಮ್ರಾನ್​ ತಾಹೀರ್ 17 26
2 ಕಗಿಸೋ ರಬಾಡ 12 25
3 ಶ್ರೇಯಸ್​ ಗೋಪಾಲ್ 14 20
4 ಖಲೀಲ್​ ಅಹಮ್ಮದ್​ 9 19
5 ದೀಪಕ್​ ಚಾಹರ್​ 16 19

ಈ ಬಾರಿಯ ಐಪಿಎಲ್​​ನಲ್ಲಿ ಸಿಕ್ಸರ್​ಗಳ ಸುರಿಮಳೆಯೆ ಸುರಿದಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಕೋಲ್ಕತ್ತಾ ತಂಡದ ಸ್ಪೋಟಕ ಬ್ಯಾಟ್ಸ್​ಮನ್​ ಆ್ಯಂಡ್ರೋ ರಸೆಲ್​ ಇದ್ದಾರೆ. ರಸೆಲ್​ ಆಡಿದ 14 ಪಂದ್ಯದಲ್ಲಿ 52 ಸಿಕ್ಸ್​ ಬಾರಿಸಿದ ಸಾಧನೆ ಮಾಡಿದ್ದಾರೆ. 2ನೇ ಸ್ಥಾನದಲ್ಲಿ ಪಂಜಾಬ್​ ತಂಡದ ಬ್ಯಾಟ್ಸ್​ಮನ್​ ಕ್ರಿಸ್​ಗೇಲ್​ 13 ಪಂದ್ಯದಲ್ಲಿ 34 ಸಿಕ್ಸ್​ ಬಾರಿಸಿದ್ದಾರೆ. ಅಂತೆಯೇ, ಮುಂಬೈ ಇಂಡಿಯನ್ಸ್​ ತಂಡದ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ 15 ಪಂದ್ಯಗಳಲ್ಲಿ 29 ಸಿಕ್ಸ್​​ಗಳಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ತಂಡದ ರಿಷಭ್​ ಪಂತ್​ ಆಡಿದ 16 ಪಂದ್ಯಗಳಲ್ಲಿ 27 ಸಿಕ್ಸ್​ ಬಾರಿಸಿದ್ದಾರೆ. ಆರ್​ಸಿಬಿ ತಂಡದ ಎಬಿ ಡಿ ವಿಲಿಯರ್ಸ್​ ಆಡಿದ 13 ಪಂದ್ಯಗಳಲ್ಲಿ 26 ಸಿಕ್ಸ್​ ಬಾರಿಸಿದ್ದಾರೆ.ಕ್ರಮಸಂಖ್ಯೆ ಆಟಗಾರರು ಪಂದ್ಯ ಸಿಕ್ಸ್​
1 ಆ್ಯಂಡ್ರೋ ರಸೆಲ್​ 14 52
2 ಕ್ರಿಸ್​ಗೇಲ್​ 13 34
3 ಹಾರ್ದಿಕ್​ ಪಾಂಡ್ಯ 15 28
4 ರಿಷಭ್​ ಪಂತ್​ 16 27
5 ಎಬಿ ಡಿ ವಿಲಿಯರ್ಸ್​ 13 26

ಹೊಸ ದಾಖಲೆ ಬರೆದ ಜೋಸೆಫ್​: ಐಪಿಎಲ್ 12ನೇ ಆವೃತ್ತಿಯಲ್ಲಿ ಈ ಬೌಲಿಂಗ್ ಪ್ರದರ್ಶನ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಯಾಕಂದರೆ ಮುಂಬೈ ನ ಬೌಲರ್ ಅಲ್ಜಾರಿ ಜೋಸೆಫ್ ಹೊಸ ಇತಿಹಾಸವನ್ನೇ ಸೃಷ್ಟಿಸಿಬಿಟ್ಟರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್ ನೀಡಿ 6 ವಿಕೆಟ್ ಪಡೆದ ಈ ವಿಂಡೀಸ್ ಬೌಲರ್​ ಐಪಿಎಲ್  ಇತಿಹಾಸದಲ್ಲಿ ಈ ಹಿಂದಿದ್ದ ಎಲ್ಲಾ ದಾಖಲೆ ಬ್ರೇಕ್​ ಮಾಡಿ ಸಾಧನೆ ಮಾಡಿದರು.

ಅಂತೆಯೆ ಗೇಮ್ ಚೇಂಜರ್ ಆಫ್​ ದಿ ಸೀಸನ್​​ ಪಟ್ಟವನ್ನು ರಾಹುಲ್ ಚಹಾರ್ ತೊಟ್ಟರೆ, ಸ್ಟೈಲೀಶ್ ಪ್ಲೇಯರ್ ಆಫ್​​ ದಿ ಸೀಸನ್​ ಅನ್ನು ಕೆ ಎಲ್ ರಾಹುಲ್ ತಮ್ಮ ಖಾತೆಗೆ ಸೇರಿಸಿಕೊಂಡರು. ಸೂಪರ್ ಸ್ಟ್ರೈಕರ್​​-ಆ್ಯಂಡ್ರೋ ರಸೆಲ್, ಪರ್ಫೆಕ್ಟ್​​ ಕ್ಯಾಚ್- ಕೀರೊನ್ ಪೊಲ್ಲಾರ್ಡ್​, ವೇಗದ ಅರ್ಧಶತಕ- ಹಾರ್ದಿಕ್ ಪಾಂಡ್ಯ, ಎಮರ್ಜಿಂಗ್ ಪ್ಲೇಯರ್- ಶುಭ್ಮನ್ ಗಿಲ್.

12ನೇ ಆವೃತ್ತಿಯಲ್ಲಿ ಒಟ್ಟು 60 ಪಂದ್ಯಗಳು ನಡೆದಿದ್ದು,  19400 ರನ್​ಗಳ ಹರಿದುಬಂದಿವೆ. ಇದರಲ್ಲಿ 784 ಸಿಕ್ಸ್​, 1,653 ಬೌಂಡರಿಗಳು ದಾಖಲಾಗಿದೆ. 11,316 ರನ್​ಗಳು ಬೌಂಡರಿಯಿಂದಲೇ ಬಂದಿವೆ.

ಇನ್ನು ಪವರ್​ ಪ್ಲೇನಲ್ಲಿ ಒಟ್ಟು 5,775 ರನ್​ ದಾಖಲಾಗಿದೆ. 57 ಫ್ರೀ ಹಿಟ್​ಗಳು ದಾಖಲೆಯ ಪುಟ ಸೇರಿದೆ. ಅಂತೆಯೇ 6 ಶತಕಗಳ ದಾಖಲೆ, 99 ಅರ್ಧಶತಕ, 487 ಕ್ಯಾಚ್​ಗಳು ಈ ಸೀಸನ್​ರ ಐಪಿಎಲ್​​ನಲ್ಲಿ ಸೇರ್ಪಡೆಯಾಗಿದೆ. ಅದಲ್ಲದೆ 20 ಮೇಡನ್​ ಓವರ್​ ಹಾಗೂ 681 ವಿಕೆಟ್​ಗಳು ಈ ಬಾರಿಯ ಐಪಿಲ್​ನಲ್ಲಿ ಉರುಳಿವೆ.

First published:May 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading