ಏಕದಿನ ಕ್ರಿಕೆಟ್​​ನಲ್ಲಿ 500ನೇ ಪಂದ್ಯ ಗೆದ್ದ ಭಾರತ; ಈ ವಿಜಯಕ್ಕೆ ಕಾರಣ ಶಂಕರ

ಟೀಂ ಇಂಡಿಯಾ 500ನೇ ಪಂದ್ಯದ ಗೆಲುವಿನ ರೂವಾರಿ ವಿಜಯ್ ಶಂಕರ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಶಂಕರ್ ತಾನೊಬ್ಬ ಶ್ರೇಷ್ಠ ಆಲ್ರೌಂಡರ್ ಎಂಬುದನ್ನು ಸಾಭೀತು ಪಡಿಸಿದರು.

Vinay Bhat | news18
Updated:March 13, 2019, 5:14 PM IST
ಏಕದಿನ ಕ್ರಿಕೆಟ್​​ನಲ್ಲಿ 500ನೇ ಪಂದ್ಯ ಗೆದ್ದ ಭಾರತ; ಈ ವಿಜಯಕ್ಕೆ ಕಾರಣ ಶಂಕರ
ವಿಜಯ್ ಶಂಕರ್ (ಟೀಂ ಇಂಡಿಯಾ ಆಟಗಾರ)
Vinay Bhat | news18
Updated: March 13, 2019, 5:14 PM IST
ಭಾರತ ಕ್ರಿಕೆಟ್ ತಂಡ ಏಕದಿನ ಕ್ರಿಕೆಟ್​​ ಇತಿಹಾಸದಲ್ಲೇ 500ನೇ ಗೆಲುವು ದಾಖಲಿಸಿ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ದ ನಿನ್ನೆ ನಾಗ್ಪುದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಅದ್ಭುತ ಆಟ ಪ್ರದರ್ಶಿಸಿ 8 ರನ್​ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ ಬಳಿಕ ಏಕದಿನ ಕ್ರಿಕೆಟ್​​ನಲ್ಲಿ 500 ಪಂದ್ಯ ಗೆದ್ದ ವಿಶ್ವದ ಎರಡನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಏಕದಿನ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳ ಪೈಕಿ ಆಸ್ಟ್ರೇಲಿಯಾ 923 ಪಂದ್ಯಗಳಲ್ಲಿ 558 ಗೆಲುವು ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಭಾರತ 963 ಪಂದ್ಯಗಳಲ್ಲಿ 500 ಜಯಕಂಡು ಎರಡನೇ ಸ್ಥಾನದಲ್ಲಿದೆ. ಅಂತೆಯೆ ಮೂರನೇ ಸ್ಥಾನದಲ್ಲಿ ಪಾಕಿಸ್ತಾನ 907 ಪಂದ್ಯಗಳಲ್ಲಿ 479, ವೆಸ್ಟ್​ ಇಂಡೀಸ್ 793 ಪಂದ್ಯಗಳಲ್ಲಿ 390 ಜಯ ಸಾಧಿಸಿದೆ.

ಟೀಂ ಇಂಡಿಯಾ 500ನೇ ಪಂದ್ಯದ ಗೆಲುವಿನ ರೂವಾರಿ ವಿಜಯ್ ಶಂಕರ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಶಂಕರ್ ತಾನೊಬ್ಬ ಶ್ರೇಷ್ಠ ಆಲ್ರೌಂಡರ್ ಎಂಬುದನ್ನು ಸಾಭೀತು ಪಡಿಸಿದರು. ಬ್ಯಾಟಿಂಗ್​ನಲ್ಲಿ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸ್​ ಸಿಡಿಸಿ 46 ರನ್​ ಗಳಿಸಿ ರನೌಟ್ ಬಲೆಗೆ ಸಿಲುಕಿದರು.

ಇದನ್ನೂ ಓದಿ: ಅಭಿಮಾನಿಯೊಂದಿಗೆ ಧೋನಿಯ ಜೂಟಾಟ: ವಿಡಿಯೋ ಭಾರೀ ವೈರಲ್

ನಂತರ ಕೊನೆಯ ಓವರ್​ನಲ್ಲಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಸ್ಟಾರ್ ಬೌಲರ್​​ಗಳಾದ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಅದಾಗಲೆ 10 ಓವರ್ ಮುಗಿಸಿದ್ದರು. ಹೀಗಾಗಿ ಶಂಕರ್​​ಗೆ ಬೌಲಿಂಗ್ ಕೊಡಲು ನಿರ್ಧರಿಸಲಾಯಿತು. ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶಂಕರ್ ಮೊದಲ ಎಸೆತದಲ್ಲೇ ಅರ್ಧತಕ ಸಿಡಿಸಿ ಅಬ್ಬರಿಸುತ್ತಿದ್ದ ಮಾರ್ಕಸ್ ಸ್ಟಾಯಿನಿಸ್ ವಿಕೆಟ್ ಕಿತ್ತರು. ಅಂತೆಯೆ ಮೂರನೇ ಎಸೆತದಲ್ಲಿ ಆ್ಯಡಂ ಜಂಪಾರನ್ನು ಬೌಲ್ಡ್​ ಮಾಡಿ ಆಸೀಸ್​​ಗರನ್ನು ಆಲೌಟ್ ಮಾಡಿದರು. ಹೀಗೆ ತನ್ನ ಮೊದಲ ಮೂರು ಎಸೆತದಲ್ಲೇ ಪ್ರಮುಖ 2 ವಿಕೆಟ್ ಕಿತ್ತು ಭಾರತಕ್ಕೆ ಗೆಲುವು ತಂದಿಟ್ಟರು.

First published:March 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...