HOME » NEWS » Sports » CRICKET CRICKET AUSTRALIA TO DONATE AUD 50000 TO SUPPORT INDIA AMID COVID 19 MAYHEM ZP

Covid-19 Crisis: ಭಾರತ ಕೊರೋನಾ ಹೋರಾಟಕ್ಕೆ ದೇಣಿಗೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ಆಟಗಾರರನ್ನು ಹೊರತುಪಡಿಸಿ, ಅನೇಕ ಭಾರತೀಯ ಆಟಗಾರರು ಸಹ ಸಹಾಯ ಮಾಡಿದ್ದಾರೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ಜಯದೇವ್ ಉನಾದ್ಕತ್ ಸೇರಿದ್ದಾರೆ.

news18-kannada
Updated:May 3, 2021, 7:38 PM IST
Covid-19 Crisis: ಭಾರತ ಕೊರೋನಾ ಹೋರಾಟಕ್ಕೆ ದೇಣಿಗೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ
cricket australia
  • Share this:
ಆಸ್ಟ್ರೇಲಿಯಾ ಕ್ರಿಕೆಟರುಗಳಾದ ಪ್ಯಾಟ್ ಕಮ್ಮಿನ್ಸ್ ಮತ್ತು ಬ್ರೆಟ್ ಲೀ ನಂತರ, ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಕೊರೋನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ಅದರಂತೆ ಕ್ರಿಕೆಟ್ ಆಸ್ಟ್ರೇಲಿಯಾ ಯುನಿಸೆಫ್ ಕೋವಿಡ್ -19 ರಿಲೀಫ್ ಫಂಡ್​ಗೆ 50 ಸಾವಿರ ಆಸ್ಟ್ರೇಲಿಯನ್ ಡಾಲರ್ (28 ಲಕ್ಷ 64 ಸಾವಿರ ರೂಪಾಯಿ) ದೇಣಿಗೆ ನೀಡಿದೆ. ರೋಗಿಗಳಿಗೆ ಆಮ್ಲಜನಕ, ಕೋವಿಡ್ -19 ಪರೀಕ್ಷಾ ಕಿಟ್ ಒದಗಿಸಲು ಈ ಮೊತ್ತವನ್ನು ಬಳಸಲಾಗುತ್ತದೆ. ಕೆಲವು ದಿನಗಳ ಹಿಂದೆ, ಆಸ್ಟ್ರೇಲಿಯಾದ ವೇಗದ ಬೌಲರ್ ಕಮ್ಮಿನ್ಸ್ ಸಹ 37 ಲಕ್ಷ ರೂಪಾಯಿಗಳನ್ನು ಆಮ್ಲಜನಕ ಪೂರೈಕೆಗಾಗಿ ದೇಣಿಗೆ ನೀಡಿದ್ದರು. ಇದರ ಬೆನ್ನಲ್ಲೇ ಬ್ರೇಟ್ ಲೀ ಸಹ ಸುಮಾರು 41 ಲಕ್ಷ ರೂ. ಭಾರತದ ಕೊರೋನಾ ಹೋರಾಟಕ್ಕೆ ನೀಡುವುದಾಗಿ ಘೋಷಿಸಿದ್ದರು.

ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಯುನಿಸೆಫ್ ಮೂಲಕ ಕೋವಿಡ್ ಹೋರಾಟಕ್ಕೆ ಕೈಜೋಡಿಸಿದ್ದು, ಈ ಮೂಲಕ ಎಲ್ಲರೂ ದೇಣಿಗೆ ನೀಡುವಂತೆ ಸಿಎ (ಕ್ರಿಕೆಟ್ ಆಸ್ಟ್ರೇಲಿಯಾ) ಆಸ್ಟ್ರೇಲಿಯಾದ ಜನರಿಗೆ ಮನವಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ, ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ವಿಶೇಷ ಸಂಬಂಧವಿದೆ. ಕ್ರಿಕೆಟ್‌ ಎಂಬುದು ನಮ್ಮ ಪ್ರೀತಿ ನಮ್ಮ ಸ್ನೇಹದ ಕೇಂದ್ರ ಬಿಂದುವಾಗಿದೆ. ಕಳೆದ ವಾರದಲ್ಲಿ ಭಾರತಕ್ಕೆ ಸಹಾಯ ಮಾಡುವಲ್ಲಿ ಬ್ರೆಟ್ ಲೀ ಮತ್ತು ಪ್ಯಾಟ್ ಕಮ್ಮಿನ್ಸ್ ತೋರಿಸಿದ ಮನೋಭಾವವು ನಮ್ಮ ಹೃದಯಸ್ಪರ್ಶಿಯಾಗಿತ್ತು. ಇದೀಗ ನಾವು ಕೂಡ ಯುನಿಸೆಫ್ ಸಹಯೋಗದೊಂದಿಗೆ ಕೊರೋನಾ ರೋಗಿಗಳಿಗೆ ಹಣವನ್ನು ಸಂಗ್ರಹಿಸಲು ಹೆಮ್ಮೆಪಡುತ್ತೇವೆ ಎಂದಿದ್ದಾರೆ.


ಆಸ್ಟ್ರೇಲಿಯಾದ ಆಟಗಾರರನ್ನು ಹೊರತುಪಡಿಸಿ, ಅನೇಕ ಭಾರತೀಯ ಆಟಗಾರರು ಸಹ ಸಹಾಯ ಮಾಡಿದ್ದಾರೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ಜಯದೇವ್ ಉನಾದ್ಕತ್ ಸೇರಿದ್ದಾರೆ. ಕೋವಿಡ್ -19 ಸೋಂಕಿತ ರೋಗಿಗಳಿಗೆ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಲು ಸಚಿನ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಭಾರತದ ಓಪನರ್ ಶಿಖರ್ ಧವನ್ 20 ಲಕ್ಷ ಜೊತೆಗೆ ಐಪಿಎಲ್ ಪಂದ್ಯದಿಂದ ಲಭಿಸುವ ಬಹುಮಾನ ಮೊತ್ತವನ್ನು ನೀಡುವುದಾಗಿ ಘೋಷಿಸಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ ವೇಗದ ಬೌಲರ್ ಜಯದೇವ್ ಉನಾದ್ಕತ್ ಐಪಿಎಲ್ ಪಂದ್ಯದ ವೇತನದ 10 ಪ್ರತಿಶತವನ್ನು ದೇಣಿಗೆ ನೀಡಿದ್ದಾರೆ.
Published by: zahir
First published: May 3, 2021, 7:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories