HOME » NEWS » Sports » CRICKET CRICKET AUSTRALIA LIMITS USE OF ITS PLAYERS FOR ADVERTISING DURING IPL ZP

IPL 2021: ಐಪಿಎಲ್​ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ನಿರ್ಬಂಧ..!

ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ನಾಥನ್ ಕೌಲ್ಟರ್-ನೈಲ್, ಜೇ ರಿಚರ್ಡ್ಸನ್, ರಿಲೀ ಮೆರೆಡಿತ್, ಬೆನ್ ಕಟಿಂಗ್, ಮೊಯಿಸಸ್ ಹೆನ್ರಿಕ್ಸ್, ಡಾನ್ ಕ್ರಿಶ್ಚಿಯನ್, ಜೋಶ್ ಹಾಝಲ್ವುಡ್, ಮಾರ್ಕಸ್ ಸ್ಟೋಯಿನಿಸ್, ಪ್ಯಾಟ್ ಕಮ್ಮಿನ್ಸ್.

news18-kannada
Updated:February 23, 2021, 4:28 PM IST
IPL 2021: ಐಪಿಎಲ್​ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ನಿರ್ಬಂಧ..!
australia
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಆಡಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ನಿರ್ಬಂಧ ವಿಧಿಸಿದೆ. ಮುಂದಿನ ಸೀಸನ್​ನ ಐಪಿಎಲ್​ ವೇಳೆ ಆಸ್ಟ್ರೇಲಿಯಾ ಆಟಗಾರರು ಯಾವುದೇ ರೀತಿಯ ಬೆಟ್ಟಿಂಗ್, ಫಾಸ್ಟ್​ ಫುಡ್, ಮದ್ಯಪಾನ ಮತ್ತು ತಂಬಾಕಿನ ಉತ್ಪನ್ನಗಳ ಬ್ರ್ಯಾಂಡ್​ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಾರದು ಎಂದು ತಿಳಿಸಿದೆ.

ಬಿಸಿಸಿಐ ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೆ ಇತ್ತೀಚೆಗೆ ನೀಡಿದ ಸೂಚನೆಯಲ್ಲಿ, ಕ್ರಿಕೆಟ್ ಆಸ್ಟ್ರೇಲಿಯಾದ ಷರತ್ತುಗಳನ್ನು ಉಲ್ಲೇಖಿಸಿದೆ. ಅದರಂತೆ ಪೂರ್ಣ ತಂಡದ ಪೋಟೋವನ್ನು ಮುದ್ರಣ ಮಾಧ್ಯಮದಲ್ಲಿ ಐಪಿಎಲ್ ತಂಡದ ಪ್ರಾಯೋಜಕರು ಮಾತ್ರ ಬಳಸಲು ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಆಲ್ಕೋಹಾಲ್, ಫಾಸ್ಟ್ ಫುಡ್ / ಫಾಸ್ಟ್ ಫುಡ್ ರೆಸ್ಟೋರೆಂಟ್, ತಂಬಾಕು ಅಥವಾ ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿರುವ ಕಂಪನಿಯ ಹೆಸರು ಅಥವಾ ಬ್ರ್ಯಾಂಡಿಂಗ್ ಅನ್ನು ಒಳಗೊಂಡಿರಬಾರದು ಎಂದು ತಿಳಿಸಿದೆ.

ಇಷ್ಟೇ ಅಲ್ಲದೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಇನ್ನೂ ಕೆಲ ನಿರ್ಬಂಧಗಳನ್ನು ಹೇರಿದೆ. ಅದರಂತೆ ಐಪಿಎಲ್ ಫ್ರಾಂಚೈಸಿಗಳು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಒಬ್ಬ ಆಟಗಾರ ಅಥವಾ ಆಸ್ಟ್ರೇಲಿಯಾ ರಾಜ್ಯದ ಒಬ್ಬ ಆಟಗಾರ, ಅಥವಾ ಬಿಗ್‌ ಬ್ಯಾಷ್‌ ಲೀಗ್‌ ಪ್ರತಿನಿಧಿಸಿರುವ ಒಬ್ಬ ಆಟಗಾರನನ್ನಷ್ಟೇ ಜಾಹೀರಾತಿನಲ್ಲಿ ಬಳಸಿಕೊಳ್ಳಬಹುದು. ಇದರ ಹೊರತಾಗಿ ಆಸ್ಟ್ರೇಲಿಯಾದ ಒಬ್ಬನಿಗಿಂತ ಹೆಚ್ಚು ಮಂದಿ ಕ್ರಿಕೆಟಿಗರನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವಂತಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸೂಚಿಸಿದೆ.

ಪ್ರಸ್ತುತ ಐಪಿಎಲ್ ತಂಡಗಳಲ್ಲಿ 19 ಆಸ್ಟ್ರೇಲಿಯಾ ಕ್ರಿಕೆಟಿಗರಿದ್ದಾರೆ. ಅವರೆಂದರೆ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ನಾಥನ್ ಕೌಲ್ಟರ್-ನೈಲ್, ಜೇ ರಿಚರ್ಡ್ಸನ್, ರಿಲೀ ಮೆರೆಡಿತ್, ಬೆನ್ ಕಟಿಂಗ್, ಮೊಯಿಸಸ್ ಹೆನ್ರಿಕ್ಸ್, ಡಾನ್ ಕ್ರಿಶ್ಚಿಯನ್, ಜೋಶ್ ಹಾಝಲ್ವುಡ್, ಮಾರ್ಕಸ್ ಸ್ಟೋಯಿನಿಸ್, ಪ್ಯಾಟ್ ಕಮ್ಮಿನ್ಸ್, ಕ್ರಿಸ್ ಲಿನ್, ಆಡಮ್ ಝಾಂಪಾ, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್ಸನ್, ಜೋಶ್ ಫಿಲಿಪೆ, ಆಂಡ್ರ್ಯೂ ಟೈ, ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್. ಈ ಆಟಗಾರರನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವುದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ.
Published by: zahir
First published: February 23, 2021, 4:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories