CPL 2021: ಸಿಪಿಎಲ್ ವೇಳಾಪಟ್ಟಿ ಪ್ರಕಟ: ಐಪಿಎಲ್​ಗೆ ಅನುಕೂಲ..!

ಈ ಹಿಂದೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡುವೆ ಐಪಿಎಲ್ ಆರಂಭವಾಗಲಿದೆ ಎನ್ನಲಾಗಿತ್ತು. ಇದರಿಂದ ಸಿಪಿಎಲ್​ನಲ್ಲಿ ಭಾಗವಹಿಸಲಿರುವ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು.

CPL vs IPL

CPL vs IPL

  • Share this:
    ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್​ಗಾಗಿ ವೇದಿಕೆ ಸಿದ್ದವಾಗಿದ್ದರೆ, ಮತ್ತೊಂದೆಡೆ ಅದಕ್ಕೂ ಮುನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್​ ಆಯೋಜಿಸಲು ಸಿದ್ಧತೆಗಳು ಶುರುವಾಗಿವೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ಸಿಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

    ಈ ಹಿಂದೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡುವೆ ಐಪಿಎಲ್ ಆರಂಭವಾಗಲಿದೆ ಎನ್ನಲಾಗಿತ್ತು. ಇದರಿಂದ ಸಿಪಿಎಲ್​ನಲ್ಲಿ ಭಾಗವಹಿಸಲಿರುವ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿಯೇ ಬಿಸಿಸಿಐ ವೇಳಾಪಟ್ಟಿಯನ್ನು ಬದಲಿಸುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಲ್ಲಿ ಮನವಿ ಮಾಡಿತ್ತು. ಇದೀಗ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಐಪಿಎಲ್ ಆರಂಭಕ್ಕೂ 3 ದಿನಗಳ ಮುಂಚಿತವಾಗಿ ಸಿಪಿಎಲ್ ಮುಕ್ತಾಯಗೊಳ್ಳಲಿದೆ.

    ಹೊಸ ವೇಳಾಪಟ್ಟಿಯಂತೆ ಆಗಸ್ಟ್ 26 ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಹಾಗೆಯೇ ಎರಡು ಸೆಮಿಫೈನಲ್‌ಗಳನ್ನು ಸೆಪ್ಟೆಂಬರ್ 14 ರಂದು ಆಯೋಜಿಸಲು ನಿರ್ಧರಿಸಲಾಗಿದ್ದು, ಮರುದಿನವೇ ಫೈನಲ್ ಪಂದ್ಯ ಜರುಗಲಿದೆ. ಅಂದರೆ ಸಿಪಿಎಲ್ ಆಗಸ್ಟ್ 26 ರಿಂದ ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಇತ್ತ ಐಪಿಎಲ್ ಸೆಪ್ಟೆಂಬರ್ 19 ರಿಂದ ಶುರುವಾಗಲಿದ್ದು, ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸಿದ ಐಪಿಎಲ್ ಆಟಗಾರರು ಮೂರು ದಿನಗಳೊಳಗೆ ದುಬೈನತ್ತ ಪ್ರಯಾಣ ಬೆಳೆಸಲಿದ್ದಾರೆ.

    ಇನ್ನು ಸಿಪಿಎಲ್​ನಲ್ಲಿ ಕೊರೋನಾ ಪ್ರೊಟೊಕಾಲ್​ ನಿಯಮವಿದ್ದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸಿದ ಆಟಗಾರರಿಗೆ ಕ್ವಾರಂಟೈನ್​ ನಿಯಮ ಸಡಿಲಿಕೆ ಮಾಡುವಂತೆ ಬಿಸಿಸಿಐ ಯುಎಇ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ. ಅಂದರೆ ಸಿಪಿಎಲ್​ನಲ್ಲಿ ಭಾಗವಹಿಸಿದ ಆಟಗಾರರು ಬಯೋ ಬಬಲ್ ಟು ಬಯೋ ಬಬಲ್ ಪ್ರವೇಶ ಪಡೆಯಲಿದ್ದಾರೆ.

    ಇದರಿಂದ ವೆಸ್ಟ್ ಇಂಡೀಸ್ ಆಟಗಾರರು ಸೇರಿದಂತೆ ಸಿಪಿಎಲ್​ನಲ್ಲಿ ಪಾಲ್ಗೊಂಡ ಐಪಿಎಲ್ ಆಟಗಾರರು ಕ್ವಾರಂಟೈನ್​ಗೆ ಒಳಗಾಗಬೇಕಿರುವುದಿಲ್ಲ. ಇದೀಗ ಬಿಸಿಸಿಐ ಪ್ಲ್ಯಾನ್​ನಂತೆ ಎಲ್ಲವೂ ನಡೆಯುತ್ತಿದ್ದು, ಹೀಗಾಗಿ ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ ಉಳಿದ 31 ಪಂದ್ಯಗಳಿಗೆ ಎಲ್ಲಾ ಸ್ಟಾರ್ ಆಟಗಾರರು ಪಾಲ್ಗೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
    Published by:zahir
    First published: