2020ನೇ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಈ ರಂಗುರಂಗಿನ ಟೂರ್ನಿಗೆ ಚಾಲನೆ ಸಿಗಲಿದ್ದು, ಅಭಿಮಾನಿಗಳು ರೋಚಕ ಪಂದ್ಯ ವೀಕ್ಷಿಸಲು ಕಾದುಕುಳಿತಿದ್ದಾರೆ. ಕೊರೋನಾ ಭೀತಿಯ ಮಧ್ಯೆ ಆರಂಭವಾಗಲಿರುವ ಮೊದಲ ಪ್ರಮುಖ ಲೀಗ್ ಟೂರ್ನಮೆಂಟ್ ಇದಾಗಿದ್ದು, ಸಾಕಷ್ಟು ವಿದೇಶಿ ಸ್ಟಾರ್ ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈ ಬಾರಿ ಸಾಕಷ್ಟು ಮುನ್ನಚ್ಚರಿಕೆಯೊಂದಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಪ್ರತಿ ತಂಡಕ್ಕೂ ಬಯೋ ಸೆಕ್ಯೂರ್ ಬಬಲ್ ನಿರ್ಮಿಸಿ ಆ ಮೂಲಕ ಸಾಕಷ್ಟು ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಒಟ್ಟು 33 ಪಂದ್ಯಗಳು ಟ್ರಿನಿಡಾಡ್ ಅಂಡ್ ಟೊಬೇಗೊದಲ್ಲಿ ಇರುವ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿವೆ.
IPL 2020: ಐಪಿಎಲ್ ಸ್ಪಾನ್ಸರ್ಶಿಪ್ಗೆ ಬಾಬಾ ರಾಮ್ದೇವ್ ರೆಡಿ: ಆದ್ರೆ ಅವರ ಷರತ್ತು ಏನೆಂದು ನೀವೇ ನೋಡಿ!
FOUR!!! Did you know that Johnson Charles has hit the most fours in CPL history. #CPL20 #BTInFocus #CricketPlayedLouder #JohnsonCharles pic.twitter.com/bDdINnlEFK
— CPL T20 (@CPL) August 17, 2020
ಇನ್ನೂ ನಾಳೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ಅಪ್ ತಂಡ ಗಯಾನ ವಾರಿಯರ್ಸ್ ಮತ್ತು ಟ್ರಿನ್ಬಾಗೊ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ. ನಾಳೆಯೇ ಮತ್ತೊಂದು ಪಂದ್ಯ ಕೂಡ ನಡೆಯಲಿದ್ದು, ಕಳೆದ ವರ್ಷದ ಚಾಂಪಿಯನ್ಸ್ ಬಾರ್ಬೇಡೊಸ್ ಟ್ರೈಡೆಂಟ್ಸ್ ಮತ್ತು ಸೇಂಟ್ ಕಿಟ್ಸ್ ಅಂಡ್ ನೆವೀಸ್ ಪೇಟ್ರಿಯಟ್ಸ್ ತಂಡಗಳು ಸೆಣಸಲಿವೆ.
ಟೂರ್ನಿಯ ಎಲ್ಲಾ ಪಂದ್ಯಗಳನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ಆಡಿಸಲಾಗುತ್ತದೆ. ಕಟ್ಟುನಿಟ್ಟಿನ ಕ್ರಮದೊಂದಿಗೆ ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
IPL 2020: ಐಪಿಎಲ್ ಆರಂಭಕ್ಕೆ ಒಂದು ತಿಂಗಳಿರುವಾಗ ಆರ್ಸಿಬಿ ತಂಡಕ್ಕೆ ಡಬಲ್ ಶಾಕ್: ಏನದು ಗೊತ್ತೇ?
ಟೂರ್ನಿ ನಡೆಯುವ ದಿನಾಂಕ: ಆಗಸ್ಟ್ 18ರಿಂದ ಸೆಪ್ಟೆಂಬರ್ 10ರವರೆಗೆ.
ಯಾವುದರಲ್ಲಿ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ನಲ್ಲಿ ಸಿಪಿಎಲ್ ನೇರ ಪ್ರಸಾರವಾಗಲಿದೆ.
ಸಮಯ: ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30 ಹಾಗೂ ನಸುಕಿನ ಜಾವ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.
ತಂಡಗಳು: ಬಾರ್ಬಡೋಸ್ ಟ್ರಿಡೆಂಟ್ಸ್, ಗಯಾನ ಅಮೇಜಾನ್ ವಾರಿಯರ್ಸ್, ಜಮೈಕಾ ತಲೈವಾಸ್, ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೇಟ್ರಿಯಟ್ಸ್, ಸೇಂಟ್ ಲುಸಿಯಾ ಝೌಕ್ಸ್, ಟ್ರಿಬಾಗೋ ನೈಟ್ ರೈಡರ್ಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ