• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • CPL 2020: ಅಂತಿಮ ಹಂತದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್: ನಾಳೆ ನೈಟ್​ ರೈಡರ್ಸ್-ಲೂಸಿಯಾ ಜೌಕ್ಸ್ ನಡುವೆ ಫೈನಲ್

CPL 2020: ಅಂತಿಮ ಹಂತದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್: ನಾಳೆ ನೈಟ್​ ರೈಡರ್ಸ್-ಲೂಸಿಯಾ ಜೌಕ್ಸ್ ನಡುವೆ ಫೈನಲ್

CPL 2020

CPL 2020

ನಾಳೆ ಗುರುವಾರದಂದು ಟ್ರಿಂಬಾಗೋ ನೈಟ್​ ರೈಡರ್ಸ್ ಹಾಗೂ ಸೇಂಟ್ ಲೂಸಿಯಾ ಜೌಕ್ಸ್ ತಂಡ ಫೈನಲ್​ನಲ್ಲಿ ಮುಖಾಮುಖಿ ಆಗಲಿದ್ದು, ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

  • Share this:

ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ನಿನ್ನೆ ಜಮೈಕಾ ತಲೈವಾಸ್​​ ವಿರುದ್ಧ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಟ್ರಿಂಬಾಗೋ ನೈಟ್​ ರೈಡರ್ಸ್ ತಂಡ 9 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಫೈನಲ್​ ಪ್ರವೇಶಿಸಿದೆ. ಈ ಮೂಲಕ ಪೊಲಾರ್ಡ್​ ಪಡೆ ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಲೀಗ್ ಹಂತದಲ್ಲಿ ಎಲ್ಲಾ 10 ಪಂದ್ಯಗಳನ್ನು ಗೆದ್ದಿದ್ದ ಪೊಲಾರ್ಡ್​ ಪಡೆ ಮಂಗಳವಾರ ನಡೆದ ಸೆಮಿಫೈನಲ್​ನಲ್ಲಿ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿತು. ತಲೈವಾಸ್ ​ತಂಡವನ್ನು ಕೇವಲ 107 ರನ್​ಗಳಿಗೆ ಕಟ್ಟಿಹಾಕಿದ ಟಿಕೆಆರ್​ 15 ಓವರ್​ಗಳಲ್ಲಿ ಗುರಿತಲುಪಿತು.


ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನೈಟ್ ರೈಡರ್ಸ್​ ತಂಡ ಅಂದುಕೊಂಡಂತೆ ಎದುರಾಳಿಯನ್ನು ಸರಿಯಾಗೇ ಬಗ್ಗುಬಡಿಯಿತು. ಜಮೈಕಾ ತಲೈವಾಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಬ್ಲಾಕ್​ವುಡ್ ಹಾಗೂ ಮುಜೀದ್ ಶೂನ್ಯಕ್ಕೆ ನಿರ್ಗಮಿಸಿದರೆ, ಗ್ಲೆನ್ ಪಿಲಿಪ್ಸ್ 2 ರನ್​ಗೆ ಔಟ್ ಆದರು.


CPL 2020: ಸಿಪಿಎಲ್​ನಲ್ಲಿ ಪ್ರವೀಣ್ ತಾಂಬೆಯ ಪರಾಕ್ರಮ: 48ನೇ ವಯಸ್ಸಿನಲ್ಲೂ ಡೈವ್ ಕ್ಯಾಚ್..!



ಅಸಿಫ್ ಅಲಿ 4 ರನ್​ಗೆ ಸುಸ್ತಾದರೆ ರಸೆಲ್ ಆರ್ಭಟ ನಡೆಯಲೇ ಇಲ್ಲ. ಕೇವಲ 2 ರನ್​ಗೆ ರಸೆಲ್ ಪೆವಿಲಿಯನ್ ಸೇರಿಕೊಂಡರು. ಬೋನರ್ ಹಾಗೂ 41 ರನ್ ಹಾಗೂ ನಾಯಕ ರೊಮನ್ ಪಾವೆಲ್ 33 ರನ್ ಬಾರಿಸಿದ ಪರಿಣಾಮ ತಂಡದ ಮೊತ್ತ 100ರ ಗಡಿ ದಾಟಿತು. ಅಂತಿಮವಾಗಿ ಜಮೈಕಾ ತಂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತಷ್ಟೆ. ನೈಟ್​ರೈಡರ್ಸ್​ ಪರ ಅಖೆಲ್ ಹೊಸೈನ್ 3 ಹಾಗೂ ಖೇರಿ ಪಿರ್ರೆ 2 ವಿಕೆಟ್ ಕಿತ್ತರು.



ಇತ್ತ 108 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್​ ಆರಂಭದಲ್ಲಿ ಸುನಿಲ್ ನರೈನ್(4) ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ಸಿಮನ್ಸ್ ಹಾಗೂ ಟಿಯಾನ್ ವೆಬ್​​ಸ್ಟೆರ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ 15 ಓವರ್​ನಲ್ಲಿ 1 ವಿಕೆಟ್ ಕಳೆದುಕೊಂಡು 111 ರನ್ ಬಾರಿಸುವ ಮೂಲಕ ನೈಟ್ ರೈಡರ್ಸ್​ ತಂಡ ಫೈನಲ್​ಗೆ ಲಗ್ಗೆ ಇಟ್ಟಿತು. ಸಿಮನ್ಸ್ ಅಜೇಯ 54 ಹಾಗೂ ಟಿಯಾನ್ ವೆಬ್​​ಸ್ಟೆರ್ ಅಜೇಯ 44 ರನ್ ಬಾರಿಸಿದರು.


IPL ಆಡಿದ್ದ 11 ಪಾಕಿಸ್ತಾನಿ ಕ್ರಿಕೆಟರುಗಳು ಯಾರು ಗೊತ್ತಾ?



ಇನ್ನೂ ನಿನ್ನೆ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಗಯಾನಾ ಅಮೇಜಾನ್ ವಾರಿಯರ್ಸ್​ ವಿರುದ್ಧ ಸೇಂಟ್ ಲೂಸಿಯಾ ಜೌಕ್ಸ್ ತಂಡ 10 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.


ಈ ಮೂಲಕ ನಾಳೆ ಗುರುವಾರದಂದು ಟ್ರಿಂಬಾಗೋ ನೈಟ್​ ರೈಡರ್ಸ್ ಹಾಗೂ ಸೇಂಟ್ ಲೂಸಿಯಾ ಜೌಕ್ಸ್ ತಂಡ ಫೈನಲ್​ನಲ್ಲಿ ಮುಖಾಮುಖಿ ಆಗಲಿದ್ದು, ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

top videos
    First published: