ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆರಂಭಕ್ಕೆ ದಿನಗಣನೆ ಶುರುವಾಗಿದೆ. 2103 ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪ್ರಾರಂಭಿಸಿದ ಈ ಸಿಪಿಎಲ್ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಸಾಕಷ್ಟು ವಿದೇಶಿ ಸ್ಟಾರ್ ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೇ ಆಗಸ್ಟ್ 18 ರಂದು ಈ ಹೊಡಿಬಡಿ ಟೂರ್ನಿಗೆ ಚಾಲನೆ ಸಿಗಲಿದ್ದು, ಟ್ರಿನಿಡಾಡ್ ಮತ್ತು ಟೊಬ್ಯಾಗೋದಲ್ಲಿ ಆಯೋಜನೆಯಾಗಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳಲ್ಲಿ ಗಯಾನಾ ಅಮೆಜಾನ್ ತಂಡ ಅತ್ಯಂತ ದುರದೃಷ್ಟಕರ ತಂಡ ಎಂದರೆ ತಪ್ಪಾಗಲಾರದು. ಹೌದು, ಈವರೆಗೆ ಒಟ್ಟು 5 ಬಾರಿ ಫೈನಲ್ ಪ್ರವೇಶ ಪಡೆದರೂ ಗಯಾನ ಟ್ರೋಫಿಗೆ ಮುತ್ತಿಕ್ಕಲು ಸಾಧ್ಯವಾಗದೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು. ಎರಡು ಬಾರಿ 3ನೇ ಸ್ಥಾನವನ್ನು ಪಡೆದುಕೊಂಡಿದೆ.
ಆದರೆ, ಈ ಬಾರಿ ಸಾಕಷ್ಟು ಬಲಿಷ್ಠವಾಗಿರುವ ಗಯಾನಾ ಅಮೆಜಾನ್ ಪ್ರಶಸ್ತಿ ಗೆಲ್ಲಲೇ ಬೇಕೆಂದು ಟೊಂಕಕಟ್ಟಿ ನಿಂತಿದೆ. ಹಾಗಾದ್ರೆ ಈ ಈ ಬಾರಿಯ ಗಯಾನಾ ಅಮೆಜಾನ್ ತಂಡ ಹೇಗಿದೆ ನೋಡೋಣ.
IPL 2020: ಈ ಬಾರಿ RCB ಕಪ್ ಗೆದ್ದರೆ ನಾನು ಬೆತ್ತಲಾಗುವೆ: ಹೀಗೆ ಹೇಳಿದ್ದು ಯಾರು ಗೊತ್ತೇ?
ಗಯಾನಾ ಅಮೆಜಾನ್ ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಜೊತೆಗೆ ಹೆಚ್ಚು ಯುವ ಆಟಗಾರರಿಂದ ಕೂಡಿದೆ. ಇಮ್ರಾನ್ ತಾಹಿರ್, ರಾಸ್ ಟೇಲರ್ರಂತಹ ಹಿರಿಯ ಆಟಗಾರರೊಂದಿಗೆ ಶಿಮ್ರಾ ಹೇಟ್ಮೇರ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ ,ಶೆರ್ಫೇನ್ ರುದರ್ಫೋರ್ಡ್ ರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ 9 ಪಂದ್ಯಗಳಿಂದ 16 ವಿಕೆಟ್ ಕಬಳಿಸಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಮಿಂಚಿದ್ದರು. ಇತ್ತ ಬ್ಯಾಟಿಂಗ್ನಲ್ಲಿ ಬ್ರಾಂಡನ್ ಕಿಂಗ್ 12 ಪಂದ್ಯಗಳಿಂದ 496 ರನ್ ಗಳಿಸಿ 55.11 ಸರಾಸರಿಯಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳೊಂದಿಗೆ ಅಗ್ರ ಸ್ಕೋರರ್ ಆಗಿದ್ದರು.
ಆದರೆ, ಇದೇ ಅಮೆಜಾನ್ ತಂಡಕ್ಕೆ ದೌರ್ಬಲ್ಯ ಕೂಡ ಹೌದು. ತಾಹಿರ್ 40 ವರ್ಷದವರಾಗಿದ್ದಾರೆ. ಮತ್ತೊಂದೆಡೆ ರಾಸ್ ಟೇಲರ್ ಕೂಡ ಇದೇ ಆಸುಪಾಸಿನಲ್ಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ವಯಸ್ಸಿನ ಮಿತಿಯನ್ನು ನೀರಿದ ಪ್ರದರ್ಶನವನ್ನು ನಿಡಲೇಬೇಕಾದ ಒತ್ತಡವಿದೆ.
Hardik Pandya: ಜೂನಿಯರ್ ಪಾಂಡ್ಯ ಹೆಸರು ರಿವೀಲ್..!
ಗಯಾನಾ ಅಮೆಜಾನ್ ತಂಡದಲ್ಲಿರುವ ಆಟಗಾರರು ವಿವರ ಇಲ್ಲಿದೆ.
ಇಮ್ರಾನ್ ತಾಹಿರ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ಗ್ರೀನ್, ಕೈಸ್ ಅಹ್ಮದ್, ಕೀಮೋ ಪಾಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ನವೀನ್ ಉಲ್ ಹಕ್, ಚಂದ್ರಪಾಲ್ ಹೆಮರಾಜ್, ಕೆವಿನ್ ಸಿಂಕ್ಲೇರ್, ಅಶ್ಮೀಡ್ ನೆಡ್, ಓಡಿಯನ್ ಸ್ಮಿತ್ , ಜಸ್ದೀಪ್ ಸಿಂಗ್.
ಈ ಬಾರಿಯ ಸಿಪಿಎಲ್ ಟೂರ್ನಿಯ ಒಟ್ಟು 33 ಪಂದ್ಯಗಳು ಟ್ರಿನಿಡಾಡ್ ಅಂಡ್ ಟೊಬೇಗೊದಲ್ಲಿ ಇರುವ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿವೆ. ತರೊಬಾದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯ ಆಯೋಜಿಸಲಾಗಿದ್ದು, ಒಟ್ಟು 23 ಪಂದ್ಯಗಳು ನಡೆಯಲಿದೆ. ಉಳಿದ 10 ಲೀಗ್ ಪಂದ್ಯಗಳಿಗೆ ಪೋರ್ಟ್ ಆಫ್ ಸ್ಪೇನ್ನಲ್ಲಿರುವ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣ ಆತಿಥ್ಯ ವಹಿಸುವುದಾಗಿ ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ