• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • CPL 2020: ಐಪಿಎಲ್​ಗೂ ಮುನ್ನ ಶುರುವಾಗಲಿದೆ ಕೆರಿಬಿಯನ್ ಪ್ರೀಮಿಯರ್ ಲೀಗ್; ಯಾವಾಗ?, ಇಲ್ಲಿದೆ ಮಾಹಿತಿ

CPL 2020: ಐಪಿಎಲ್​ಗೂ ಮುನ್ನ ಶುರುವಾಗಲಿದೆ ಕೆರಿಬಿಯನ್ ಪ್ರೀಮಿಯರ್ ಲೀಗ್; ಯಾವಾಗ?, ಇಲ್ಲಿದೆ ಮಾಹಿತಿ

ಕೆರಿಬಿಯನ್ ಪ್ರೀಮಿಯರ್ ಲೀಗ್

ಕೆರಿಬಿಯನ್ ಪ್ರೀಮಿಯರ್ ಲೀಗ್

ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ನಿಗದಿಯಂತೆ ಆಯೋಜಿಸಲು ಮುಂದಾಗಿರುವ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ, ಈಗಾಗಲೇ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

  • Share this:

ಕೊರೋನಾ ಭೀತಿಯ ನಡುವೆಯೇ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚಾಲನೆ ದೊರೆತಿದೆ. ಈ ಮಧ್ಯೆ ಸೆಪ್ಟೆಂಬರ್​ನಲ್ಲಿ ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಆರಂಭವಾಗಲಿದೆ. ಇದಕ್ಕೂ ಮೊದಲು ಆಗಸ್ಟ್ ತಿಂಗಳಿನಿಂದ ಖ್ಯಾತ ಕ್ರಿಕೆಟ್ ಲೀಗ್ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಸಲು ಸಿದ್ಧತೆಯಾಗುತ್ತಿದೆ.


ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಡೆಸುವ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಇತ್ತೀಚೆಗೆ ಸಾಕಷ್ಟು ಯಶಸ್ಸನ್ನು ಕಾಣುತ್ತಿದೆ. ಸಿಪಿಎಲ್ 2020 ಕೊರೋನಾ ಭೀತಿಯ ಮಧ್ಯೆ ನಡೆಯುವ ಮೊದಲ ಪ್ರಮುಖ ಲೀಗ್‌ ಟೂರ್ನಮೆಂಟ್ ಆಗಲಿದೆ. ಆಗಸ್ಟ್‌ 18ರಿಂದ ಟ್ರಿನಿಡಾಡ್ ಮತ್ತು ಟೊಬ್ಯಾಗೋದಲ್ಲಿ ಸಿಪಿಎಲ್ ಆಯೋಜನೆಯಾಗಿದೆ.


IPL 2020 Schedule: ಬಹುನಿರೀಕ್ಷಿತ ಐಪಿಎಲ್ ವೇಳಾಪಟ್ಟಿ ಲೀಕ್?; ಮೊದಲ ಪಂದ್ಯ ಯಾವುದು ಗೊತ್ತೇ?



ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ನಿಗದಿಯಂತೆ ಆಯೋಜಿಸಲು ಮುಂದಾಗಿರುವ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ, ಈಗಾಗಲೇ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಗಸ್ಟ್‌ 18ರಂದು ಆರಂಭಾಗಲಿರುವ ಸಿಪಿಎಲ್‌ ಟೂರ್ನಿ ಸೆಪ್ಟೆಂಬರ್‌ 10ರಂದು ಕೊನೆಗೊಳ್ಳಲಿದೆ.


ಸೆಪ್ಟೆಂಬರ್ 19 ರಿಂದ ಐಪಿಎಲ್ 2020 ಪ್ರಾರಂಭವಾಗಲಿದ್ದು, ಇದಕ್ಕೂ ಮುಂಚಿತವಾಗಿ ಒಂಬತ್ತು ದಿನಗಳ ಮುನ್ನ ಸಿಪಿಎಲ್​ಗೆ ತೆರೆಬೀಳಲಿದೆ. ಬಳಿಕ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ ಕೆಲ ಸ್ಟಾರ್‌ ಆಟಗಾರರು ಐಪಿಎಲ್​ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಯುಎಇಗೆ ತೆರಳಲಿದ್ದಾರೆ.


ಈ ಬಾರಿಯ ಸಿಪಿಎಲ್‌ ಟೂರ್ನಿಯ ಒಟ್ಟು 33 ಪಂದ್ಯಗಳು ಟ್ರಿನಿಡಾಡ್‌ ಅಂಡ್‌ ಟೊಬೇಗೊದಲ್ಲಿ ಇರುವ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿವೆ. ತರೊಬಾದಲ್ಲಿರುವ ಬ್ರಿಯಾನ್‌ ಲಾರಾ ಕ್ರಿಕೆಟ್‌ ಅಕಾಡೆಮಿಯಲ್ಲಿ ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯ ಆಯೋಜಿಸಲಾಗಿದ್ದು, ಒಟ್ಟು 23 ಪಂದ್ಯಗಳು ನಡೆಯಲಿದೆ. ಉಳಿದ 10 ಲೀಗ್‌ ಪಂದ್ಯಗಳಿಗೆ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿರುವ ಕ್ವೀನ್ಸ್‌ ಪಾರ್ಕ್‌ ಕ್ರೀಡಾಂಗಣ ಆತಿಥ್ಯ ವಹಿಸುವುದಾಗಿ ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.


IPL 2020: CSK ತಂಡದ ನಾಯಕ ಧೋನಿ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ!



ಇನ್ನೂ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್​ಅಪ್ ತಂಡ ಗಯಾನ ವಾರಿಯರ್ಸ್‌ ಮತ್ತು ಟ್ರಿನ್ಬಾಗೊ ನೈಟ್‌ ರೈಡರ್ಸ್ ಮುಖಾಮುಖಿಯಾಗಲಿವೆ. ಅದೇ ದಿನ ನಡೆಯಲಿರುವ ಎರಡನೇ ಪಂದ್ಯದಲ್ಲಿ ಕಳೆದ ವರ್ಷದ ಚಾಂಪಿಯನ್ಸ್‌ ಬಾರ್ಬೇಡೊಸ್‌ ಟ್ರೈಡೆಂಟ್ಸ್‌ ಮತ್ತು ಸೇಂಟ್‌ ಕಿಟ್ಸ್‌ ಅಂಡ್‌ ನೆವೀಸ್‌ ಪೇಟ್ರಿಯಟ್ಸ್‌ ತಂಡಗಳು ಸೆಣಸಲಿವೆ.

ಟೂರ್ನಿಯ ಎಲ್ಲಾ ಪಂದ್ಯಗಳನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಆಡಿಸಲಾಗುತ್ತದೆ. ಕಟ್ಟುನಿಟ್ಟಿನ ಕ್ರಮದೊಂದಿಗೆ ಕೊರೋನಾ ವೈರಸ್‌ ಹರಡದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ವಿಂಡೀಸ್‌ ಕ್ರಿಕೆಟ್ ಮಂಡಳಿ ಹೇಳಿದೆ.

top videos
    First published: