• ಹೋಂ
  • »
  • ನ್ಯೂಸ್
  • »
  • sports
  • »
  • CPL 2020 Final: ಸಿಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ನೈಟ್​ ರೈಡರ್ಸ್​!

CPL 2020 Final: ಸಿಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ನೈಟ್​ ರೈಡರ್ಸ್​!

CPL 2020

CPL 2020

ಇತ್ತ 155 ರನ್​ಗಳ ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್​ ತಂಡ 20 ರನ್​ಗೂ ಮುನ್ನ ಟಿಯಾನ್ ವೆಬ್​ಸ್ಟೆರ್(5) ಹಾಗೂ ಟಿಮ್ ಸೈಫೆರ್ಟ್​(4) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಜೊತೆಯಾದ ಲೆಂಡ್ಲ್ ಸೈಮನ್ಸ್ ಹಾಗೂ ಡ್ಯಾರೆನ್ ಬ್ರಾವೋ ಆರ್ಭಟಿಸಿದರು.

  • Share this:

    ಕೆರಿಬಿಯನ್ ಪ್ರೀಮಿಯರ್ ಲೀಗ್ 8ನೇ ಆವೃತ್ತಿಗೆ ತೆರೆಬಿದ್ದಿದೆ. ನಿನ್ನೆ ನಡೆದ ಅಂತಿಮ ಫೈನಲ್ ಪಂದ್ಯದಲ್ಲಿ ಸೇಂಟ್ ಲೂಸಿಯಾ ವಿರುದ್ಧ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸಿಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಸಾಧನೆ ಮಾಡಿದೆ. ಇಡೀ ಟೂರ್ನಮೆಂಟ್​ನಲ್ಲಿ ಒಂದೇ ಒಂದು ಸೋಲು ಕಾಣದ ಪೊಲಾರ್ಡ್​ ಪಡೆ ಇದೇ ಸಾಧನೆಯನ್ನ ಫೈನಲ್​ನಲ್ಲೂ ಮುಂದುವರೆಸಿ ಈ ದಾಖಲೆ ಬರೆದಿದೆ. ಸರ್ವಾಂಗೀಣ ಪ್ರದರ್ಶನ ನೀಡಿದ ನೈಟ್ ರೈಡರ್ಸ್ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿತು.


    ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಸೇಂಟ್ ಲೂಸಿಯಾ ತಂಡ ಆರಂಭದಲ್ಲೇ ಆರ್. ಕಾರ್ನ್​ವೆಲ್(8) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಮಾರ್ಕ್ ಡೆಯಲ್ ಹಾಗೂ ಆ್ಯಂಡ್ರೆ ಫ್ಲೆಟ್ಚೆರ್ ಉತ್ತಮ ಜೊತೆಯಾಟ ಆಡಿದರು. ಈ ಜೋಡಿ ಪವರ್ ಪ್ಲೇ ಓವರ್ ಅನ್ನು ಅದ್ಭುತವಾಗಿ ಉಪಯೋಗಿಸಿ 67 ರನ್​ಗಳ ಜೊತೆಯಾಟ ಆಡಿದರು.


    Rafale Jets Induction: ಭಾರತೀಯ ವಾಯುಪಡೆಗೆ ರಫೆಲ್​ ಸೇರ್ಪಡೆ: ಐಎಎಫ್​ಗೆ ಶುಭಕೋರಿದ ಎಂಎಸ್ ಧೋನಿ



    ಆದರೆ, ನಂತರ ಶುರುವಾಗಿದ್ದು ನೈಟ್ ರೈಡರ್ಸ್ ತಂಡದ ನಾಯಕ ಕೀರೊನ್ ಪೊಲಾರ್ಡ್​ ಬೌಲಿಂಗ್ ದಾಳಿ. ಡೆಯಲ್ 29 ರನ್​ಗೆ ಔಟ್ ಆದರೆ, ಆ್ಯಂಡ್ರೆ ಫ್ಲೆಟ್ಚೆರ್ 39 ರನ್​ಗೆ ನಿರ್ಗಮಿಸಿದರು. ರೊಸ್ಟನ್ ಚೇಸ್ 14 ಎಸೆತಗಳಲ್ಲಿ 22 ಹಾಗೂ ನಜೀಬುಲ್ಲ 24 ರನ್ ಗಳಿಸಿ ನಿರ್ಗಮಿಸಿದರೆ, ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಸ್ಕೋರ್ ಎರಡಂಕಿ ದಾಟಲಿಲ್ಲ.


    ಅಂತಿಮವಾಗಿ ಸೇಂಟ್ ಲೂಸಿಯಾ ತಂಡ 19.1 ಓವರ್​ನಲ್ಲಿ 154 ರನ್​ಗಳಿಗೆ ಸರ್ವಪತನ ಕಂಡಿತು. ನೈಟ್ ರೈಡರ್ಸ್​ ಪರ ಪೊಲಾರ್ಡ್​ 4 ವಿಕೆಟ್ ಕಿತ್ತು ಮಿಂಚಿದರೆ, ಅಲಿ ಖಾನ್ ಹಾಗೂ ಫವಾದ್ ಅಹ್ಮದ್ ತಲಾ 2 ವಿಕೆಟ್ ಪಡೆದು.


    ಇತ್ತ 155 ರನ್​ಗಳ ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್​ ತಂಡ 20 ರನ್​ಗೂ ಮುನ್ನ ಟಿಯಾನ್ ವೆಬ್​ಸ್ಟೆರ್(5) ಹಾಗೂ ಟಿಮ್ ಸೈಫೆರ್ಟ್​(4) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಜೊತೆಯಾದ ಲೆಂಡ್ಲ್ ಸೈಮನ್ಸ್ ಹಾಗೂ ಡ್ಯಾರೆನ್ ಬ್ರಾವೋ ಆರ್ಭಟಿಸಿದರು.


    ಎಲ್ಲೂ ವಿಕೆಟ್ ಕಳೆದುಕೊಳ್ಳಲು ಅವಕಾಶವನ್ನೇ ನೀಡದ ಈ ಜೋಡಿ ಎದುರಾಳಿ ಬೌಲರ್​ಗಳ ಬೆವರಿಳಿಸಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೈಮನ್ಸ್ ಹಾಗೂ ಬ್ರಾವೋ ಅಮೋಘ ಅರ್ಧಶತಕ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಸೈಮನ್ಸ್ ಕೇವಲ 49 ಎಸೆತಗಳಲ್ಲಿ ಅಜೇಯ 84 ರನ್ ಚಚ್ಚಿದರೆ, ಬ್ರಾವೋ 47 ಎಸೆತಗಳಲ್ಲಿ ಅಜೇಯ 58 ರನ್ ಸಿಡಿಸಿದರು.


    Prithvi Shaw: ಡೇಟಿಂಗ್​ನಲ್ಲಿ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ: ಹುಡುಗಿ ಯಾರು ಕೇಳಿದ್ರೆ ಶಾಕ್ ಆಗ್ತೀರಾ!



    ನೈಟ್ ರೈಡರ್ಸ್ ತಂಡ 18.1 ಓವರ್​ನಲ್ಲೇ 2 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕುವ ಮೂಲಕ 8 ವಿಕೆಟ್​ಗಳ ಭರ್ಜರಿ ಗೆಲುವು ಕಂಡಿತು. ಈ ಮೂಲಕ ನಾಲ್ಕನೆ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಸೈಮನ್ಸ್ ಪಂದ್ಯಶ್ರೇಷ್ಠ ಬಾಜಿಕೊಂಡರೆ, ಕೀರೊನ್ ಪೊಲಾರ್ಡ್​ ಸರಣಿ ಶ್ರೇಷ್ಠ ತಮ್ಮದಾಗಿಸಿದರು.

    Published by:Vinay Bhat
    First published: