• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • CPL 2020: ನಾಯಕನಾಗಿ 2 ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದ ಬ್ರಾವೋ ಈ ಬಾರಿ ಕೇವಲ ಆಟಗಾರ! ಕಾರಣ?

CPL 2020: ನಾಯಕನಾಗಿ 2 ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದ ಬ್ರಾವೋ ಈ ಬಾರಿ ಕೇವಲ ಆಟಗಾರ! ಕಾರಣ?

ಡ್ವೇನ್ ಬ್ರಾವೋ.

ಡ್ವೇನ್ ಬ್ರಾವೋ.

2017 ಹಾಗೂ 2018ರ ಆವೃತ್ತಿಯಲ್ಲಿ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡದ ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಡ್ವೇನ್ ಬ್ರಾವೋಗೆ ಸಲ್ಲುತ್ತದೆ.

  • Share this:

ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕೊರೋನಾ ಭೀತಿಯ ಮಧ್ಯೆ ಆರಂಭವಾಗಲಿರುವ ಮೊದಲ ಪ್ರಮುಖ ಲೀಗ್‌ ಟೂರ್ನಮೆಂಟ್​ಗೆ ಕೇವಲ 5 ದಿನವಷ್ಟೆ ಬಾಕಿಯಿದೆ. 2103 ರಲ್ಲಿ ವೆಸ್ಟ್​ ಇಂಡೀಸ್ ಕ್ರಿಕೆಟ್ ಮಂಡಳಿ ಪ್ರಾರಂಭಿಸಿದ ಈ ಸಿಪಿಎಲ್ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಸಾಕಷ್ಟು ವಿದೇಶಿ ಸ್ಟಾರ್ ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


ಈ ನಡುವೆ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಸ್ಟಾರ್ ಆಲ್​ರೌಂಡರ್ ಆಟಗಾರ ಡ್ವೇನ್ ಬ್ರಾವೋ ಈ ಬಾರಿ ಕ್ಯಾಪ್ಟನ್ ಪಟ್ಟ ತೊಟ್ಟಿಲ್ಲ. ಬದಲಾಗಿ ಕೇವಲ ಆಟಗಾರನಾಗಿಯಷ್ಟೆ ಕಣಕ್ಕಿಳಿಯುತ್ತಾರೆ. ಇದಕ್ಕೆ ಕಾರಣವೇನು?.


International Lefthanders Day: ಟೀಂ ಇಂಡಿಯಾದ ಯಶಸ್ಸಿಗೆ ಕೊಡುಗೆ ನೀಡಿದ ಎಡಗೈ ದಾಂಡಿಗರಿವರು!


ಬ್ರಾವೋ ಟಿ-20 ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪ್ರಮುಖ ಪ್ಲೇಯರ್ ಕೂಡ ಹೌದು. ತವರು ನಾಡಿನ ಕೆರಿಬಿಯನ್ನ ಪ್ರೀಮಿಯರ್ ಲೀಗ್‌ನಲ್ಲೂ ಎರಡು ಬಾರಿ ಚಾಂಪಿಯನ್ ತಂಡದ ನಾಯಕನಾಗಿ ಇವರು ಯಶಸ್ಸು ಕಂಡಿದ್ದಾರೆ.


2017 ಹಾಗೂ 2018ರ ಆವೃತ್ತಿಯಲ್ಲಿ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡದ ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಡ್ವೇನ್ ಬ್ರಾವೋಗೆ ಸಲ್ಲುತ್ತದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ ಟ್ರಿನ್‌ ಬ್ಯಾಗೋ ನೈಟ್‌ರೈಡರ್ಸ್ ತಂಡದಲ್ಲಿ ಬ್ರಾವೋ ಕಾಣಿಸಿಕೊಳ್ಳುತ್ತಿದ್ದರೂ ಕೇವಲ ಆಟಗಾರನಾಗಿ ಮಾತ್ರವೇ ಇರಲಿದ್ದಾರೆ.




ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡದ ನಾಯಕತ್ವ ಈ ಬಾರಿ ಕಿರಾನ್ ಪೊಲಾರ್ಡ್ ಹೆಗಲೇರಿದೆ. ಬ್ರಾವೋ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಗಾಯಗೊಂಡಿದ್ದ ಬ್ರಾವೋ ಟೂರ್ನಿಯಿಂದ ಸಂಪೂರ್ಣ ಹೊರಗುಳಿದಿದ್ದರು. ತಂಡದ ನಾಯಕತ್ವದ ಜವಾಬ್ಧಾರಿಯನ್ನು ಪೊಲಾರ್ಡ್‌ಗೆ ನೀಡಲಾಗಿತ್ತು. ಸದ್ಯ ಕಳೆದ ಆವೃತ್ತಿಯ ನಾಯಕನನ್ನೇ ಈ ಬಾರಿಯೂ ಮುಂದುವರಿಸುವ ನಿರ್ಧಾರವನ್ನು ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಂಡಿದೆ.


IPL 2020 Schedule: ಐಪಿಎಲ್ ವೇಳಾಪಟ್ಟಿ ಕಾತರಕ್ಕೆ ಕೊನೆಗೂ ಬಿತ್ತು ತೆರೆ: ಯಾವಾಗ ರಿಲೀಸ್? ಇಲ್ಲಿದೆ ಮಾಹಿತಿ!


ಈ ಬಾರಿ ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ನಡೆಯಲಿದ್ದು ಆಗಸ್ಟ್‌ 18ರಂದು ಆರಂಭಾಗಿ ಸೆಪ್ಟೆಂಬರ್‌ 10ರಂದು ಕೊನೆಗೊಳ್ಳಲಿದೆ. ಸೆಪ್ಟೆಂಬರ್ 19 ರಿಂದ ಐಪಿಎಲ್ 2020 ಪ್ರಾರಂಭವಾಗಲಿದ್ದು, ಇದಕ್ಕೂ ಮುಂಚಿತವಾಗಿ ಒಂಬತ್ತು ದಿನಗಳ ಮುನ್ನ ಸಿಪಿಎಲ್​ಗೆ ತೆರೆಬೀಳಲಿದೆ.


ಈ ಬಾರಿಯ ಸಿಪಿಎಲ್‌ ಟೂರ್ನಿಯ ಒಟ್ಟು 33 ಪಂದ್ಯಗಳು ಟ್ರಿನಿಡಾಡ್‌ ಅಂಡ್‌ ಟೊಬೇಗೊದಲ್ಲಿ ಇರುವ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿವೆ. ತರೊಬಾದಲ್ಲಿರುವ ಬ್ರಿಯಾನ್‌ ಲಾರಾ ಕ್ರಿಕೆಟ್‌ ಅಕಾಡೆಮಿಯಲ್ಲಿ ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯ ಆಯೋಜಿಸಲಾಗಿದ್ದು, ಒಟ್ಟು 23 ಪಂದ್ಯಗಳು ನಡೆಯಲಿದೆ. ಉಳಿದ 10 ಲೀಗ್‌ ಪಂದ್ಯಗಳಿಗೆ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿರುವ ಕ್ವೀನ್ಸ್‌ ಪಾರ್ಕ್‌ ಕ್ರೀಡಾಂಗಣ ಆತಿಥ್ಯ ವಹಿಸುವುದಾಗಿ ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

top videos
    First published: