ಕೆರಿಬಿಯನ್ನರ ನಾಡಿನಲ್ಲಿ ನಡೆಯುತ್ತಿರುವ 2020ನೇ ಸಾಲಿನ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ನಿನ್ನೆ ನಡೆದ ಮೊದಲ ಸೆಮಿ ಫೈನಲ್ ಕಾದಾಟದಲ್ಲಿ ಜಮೈಕಾ ತಲೈವಾಸ್ ವಿರುದ್ಧ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಮೊದಲನೇ ತಂಡವಾಗಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಗಯಾನಾ ಅಮೇಜಾನ್ ವಾರಿಯರ್ಸ್ ವಿರುದ್ಧ ಸೇಂಟ್ ಲೂಸಿಯಾ ಜೌಕ್ಸ್ ತಂಡ 10 ವಿಕೆಟ್ಗಳ ಅಮೋಘ ಜಯದೊಂದಿಗೆ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ ನಾಳೆ ಗುರುವಾರ ನಡೆಯಲಿರುವ ಅಂತಿಮ ಸುತ್ತಿನ ಪಂದ್ಯದಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ಹಾಗೂ ಸೇಂಟ್ ಲೂಸಿಯಾ ಜೌಕ್ಸ್ ತಂಡ ಮುಖಾಮುಖಿ ಆಗಲಿದೆ.
ಇಡೀ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ಟ್ರಿಂಬಾಗೋ ನೈಟ್ ರೈಡರ್ಸ್ ವಿರುದ್ಧ ಹೇಗಾದರು ಮಾಡಿ ಜಯ ಸಾಧಿಸಿಬೇಕೆಂದುಕೊಂಡಿದ್ದ ಜಮೈಕಾ ತಲೈವಾಸ್ ತಂಡಕ್ಕೆ ಭಾರೀ ಹಿನ್ನಡೆಯಾಯಿತು. ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗದಲ್ಲಿ ತಂಡ ಕಳಪೆ ಪ್ರದರ್ಶನ ತೋರಿತು.
CPL 2020: ಅಂತಿಮ ಹಂತದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್: ನಾಳೆ ನೈಟ್ ರೈಡರ್ಸ್-ಲೂಸಿಯಾ ಜೌಕ್ಸ್ ನಡುವೆ ಫೈನಲ್
ಅದರಲ್ಲೂ ತಂಡಕ್ಕೆ ಆಸರೆಯಾಗುತ್ತಿದ್ದ ಸ್ಫೋಟಕ ಬ್ಯಾಟ್ಸ್ಮನ್ ಆ್ಯಂಡ್ರೊ ರಸೆಲ್ ಕೂಡ ಬಹುಬೇಗನೆ ಕೇವಲ 2 ರನ್ಗೆ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಆದರೆ, ರಸೆಲ್ ಔಟ್ ಆಗಿದ್ದು ಅಷ್ಟೊಂದು ಸಮಾಧಾನಕರವಾಗಿರಲಿಲ್ಲ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಜಮೈಕಾ ತಲೈವಾಸ್ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಕೇವಲ 10 ರನ್ ಆಗುವ ಹೊತ್ತಿಗೆ ಬ್ಲಾಕ್ವುಡ್ ಹಾಗೂ ಮುಜೀದ್ ಶೂನ್ಯಕ್ಕೆ ನಿರ್ಗಮಿಸಿದರೆ, ಗ್ಲೆನ್ ಪಿಲಿಪ್ಸ್ 2 ರನ್ಗೆ ಔಟ್ ಆದರು.
ತಂಡದ ಮೊತ್ತ 63 ರನ್ ಆಗಿದ್ದಾಗ ಅದಾಗಲೇ 6 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಕ್ರೀಸ್ಗೆ ಬಂದ ಆ್ಯಂಡ್ರೋ ರಸೆಲ್ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. ಆದರೆ, 2 ರನ್ ಗಳಿಸಿರುವಾಗ ಅಂಪೈರ್ ನೀಡಿದ ತಪ್ಪು ನಿರ್ಧಾರಕ್ಕೆ ರಸೆಲ್ ಪೆವಿಲಿಯನ್ ಸೇರಬೇಕಾಯಿತು.
— Rahul ® (@RahulSadhu009) September 8, 2020
CPL 2020: ಸಿಪಿಎಲ್ನಲ್ಲಿ ಪ್ರವೀಣ್ ತಾಂಬೆಯ ಪರಾಕ್ರಮ: 48ನೇ ವಯಸ್ಸಿನಲ್ಲೂ ಡೈವ್ ಕ್ಯಾಚ್..!
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಡಿಆರ್ಎಸ್ಗೆ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ರಸೆಲ್ ಕೊಂಚ ಹೊತ್ತು ಅಲ್ಲೆ ನಿಂತು ಅಂಪೈರ್ ಮುಖ ನೋಡಿ, ಸಿಟ್ಟುಗೊಂಡು ಬೇರೆ ದಾರಿಯಿಲ್ಲದೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಬೇಕಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ