Caribbean Premier League 2020: ಕೆರಿಬಿಯನ್ ಪ್ರೀಮಿಯರ್ ಲೀಗ್ 8ನೇ ಆವೃತ್ತಿಗೆ ಭರ್ಜರಿ ಚಾಲನೆ ದೊರೆತಿದ್ದು, ಮೊದಲ ಉದ್ಘಾಟನಾ ಪಂದ್ಯವೇ ಸಾಕಷ್ಟು ರೋಚಕವಾಗಿತ್ತು. ಸುಮಾರು ಐದು ತಿಂಗಳ ಬಳಿಕ ಅಭಿಮಾನಿಗಳಂತು ತುದಿಗಾಲಿನಲ್ಲಿ ನಿಂತು ಕೊನೆಯ ಓವರ್ ವರೆಗೆ ಪಂದ್ಯ ವೀಕ್ಷಿಸುವಂತಾಯಿತು. ಸುನಿಲ್ ನರೈನ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಯಿಂದ ಈ ಸೀಸನ್ನ ಚೊಚ್ಚಲ ಪಂದ್ಯದಲ್ಲಿ ಗಯಾನ ಅಮೆಜಾನ್ ವಾರಿಯರ್ಸ್ ವಿರುದ್ಧ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡ 4ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಟಾಸ್ ಗೆದ್ದ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡ ಗಯಾನ ಅಮೆಜಾನ್ ವಾರಿಯರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ ಪಂದ್ಯ ಆರಂಭಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಕೊಂಚ ತಡವಾಗಿ ಶುರುಮಾಡಿ ಪಂದ್ಯವನ್ನು 17 ಓವರ್‌ಗಳಿಗೆ ಸೀಮಿತಗೊಳಿಸಿಲಾಗಿತ್ತು.
MS Dhoni: ಧೋನಿ ನಿವೃತ್ತಿ ಬಳಿಕ ಭಾರತದ ಈ 2 ಆಟಗಾರರು ನೆಮ್ಮದಿಯ ನಿದ್ರೆ ಮಾಡುತ್ತಾರೆ ಎಂದ ಕ್ರಿಕೆಟಿಗ
ಅದರಂತೆ ಬ್ಯಾಟಿಂಗ್‌ಗೆ ಇಳಿದ ಗಯಾನ ತಂಡ ಆರಂಭದಲ್ಲೇ ಬ್ರಾಂಡನ್ ಕಿಂಗ್(0) ಹಾಗೂ ಚಂದ್ರಪಾಲ್ ಹೇಮರಾಜ್(3) ವಿಕೆಟ್ ಕಳೆದುಕೊಂಡಿತು. ಬಳಿಕ ಶಿಮ್ರೋನ್ ಹೆಟ್ಮೇರ್ ಹಾಗೂ ರಾಸ್ ಟೇಲರ್ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ, ಇವರಿಬ್ಬರ ಜೊತೆಯಾಟಕ್ಕೆ ನರೈನ್ ಬ್ರೇಕ್ ಹಾಕಿದರು. ಟೇಲರ್ 33 ರನ್ ಗಳಿಸಿ ಬೌಲ್ಡ್ ಆದರು. ಪೂನರ್ 18 ರನ್ ಕಲೆಹಾಕಿದರು.
Sunil Narine is the @Dream11 MVP for match 1. Go to https://t.co/cbVDBUKc89 to pick your your team now. #CPL20 #TKRvGAW #CricketPlayedLouder pic.twitter.com/JOBC2S7gKo
— CPL T20 (@CPL) August 18, 2020
145 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಟ್ರಿನ್ ಬ್ಯಾಗೋ ತಂಡ ಆರಂಭದಲ್ಲೇ ಸ್ಪೋಟಕ ಆರಂಭ ಪಡೆದುಕೊಂಡಿತು. ನರೈನ್ ಮನಬಂದಂತೆ ಬ್ಯಾಟ್ ಬೀಸಿದರು. ಕೇವಲ 28 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ 50 ರನ್ ಚಚ್ಚಿದರು. ಡ್ಯಾರೆನ್ ಬ್ರಾವೋ(30 ರನ್) ಅತ್ಯುತ್ತಮ ಆಟ ತಂಡದ ಗೆಲುವನ್ನು ಹತ್ತಿರ ಮಾಡಿತು.
IPL: ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಉರುಳಿಸಿದ ವೇಗಿಗಳು ಯಾರು ಗೊತ್ತೇ?
ಟ್ರಿನ್ ಬ್ಯಾಗೋ 16.4 ಓವರ್ನಲ್ಲಿ ಇನ್ನೆರಡು ಎಸೆತ ಬಾಕಿ ಇರುವಂತೆಯೆ 6 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಗೆಲುವಿನ ನಗೆ ಬೀರುತು. ಸುನಿಲ್ ನರೈನ್ ಪಂದ್ಯಶ್ರೇಷ್ಠ ತಮ್ಮದಾಗಿಸಿದರು.
ಇನ್ನೂ ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ಎಸ್ಎನ್ಪಿ ವಿರುದ್ಧ ಬಾರ್ಬಡಸ್ ಟ್ರಿಡೆಂಟ್ಸ್ ತಂಡ 6 ವಿಕೆಟ್ಗಳಿಂದ ಜಯ ಕಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ