ವೆಸ್ಟ್ ಇಂಡೀಸ್ನಲ್ಲಿ ಶುರುವಾಗಿರುವ 8ನೇ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಈ ನಡುವೆ ಭಾರತದ 48 ವರ್ಷದ ಹಿರಿಯ ಸ್ಪಿನ್ನರ್ ಪ್ರವೀಣ್ ತಾಂಬೆ ಟ್ರಿಂಬ್ಯಾಗೊ ನೈಟ್ ರೈಡರ್ಸ್ ತಂಡದ ಪರ ಪದಾರ್ಪಣೆ ಮಾಡಿ ಸಿಪಿಎಲ್ನಲ್ಲಿ ಆಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ತನ್ನ ಚೊಚ್ಚಲ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದಿದ್ದಾರೆ.
ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದ ಮುಂಬೈ ಮೂಲದ ಕ್ರಿಕೆಟಿಗನನ್ನು ಸಿಪಿಎಲ್ ಹರಾಜಿನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ಫ್ರಾಂಚೈಸಿ ಖರೀದಿ ಮಾಡಿತ್ತು. ಅಂತೆಯೇ ಬುಧವಾರ ನಡೆದ ಸಿಪಿಎಲ್ 2020 ಟೂರ್ನಿಯ ಸೇಂಟ್ ಲೂಸಿಯಾ ಝೂಕ್ಸ್ ವಿರುದ್ಧದ ಪಂದ್ಯದಲ್ಲಿ ತಾಂಬೆಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು.
IPL 2020: ಕ್ವಾರಂಟೈನ್ ಮುಗಿಸಿದ ಆರ್ಸಿಬಿ: ಇಂದಿನಿಂದ ಅಭ್ಯಾಸಕ್ಕಿಳಿಯಲಿದೆ ಕೊಹ್ಲಿ ಪಡೆ
Welcome to the party, India! We're delighted to see Pravin Tambe in Hero CPL for the first time at 48 years young - what a story!#CPL20 #CricketPlayedLouder #SLZvTKR pic.twitter.com/x2P73Epz2G
— CPL T20 (@CPL) August 26, 2020
ಇನ್ನೂ ಸಿಪಿಎಲ್ನ ತನ್ನ ಚೊಚ್ಚಲ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ತಾಂಬೆ ಕೊನೆಯ ಎಸೆತದಲ್ಲಿ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ಬರೆದರು. ಈ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 6 ವಿಕೆಟ್ಗಳ ಜಯ ಸಾಧಿಸಿತು.
First CPL wicket for Pravin Tambe! Historic moment for this Indian star! #CPL20 #CricketPlayedLouder pic.twitter.com/XFoLyxBIrO
— CPL T20 (@CPL) August 26, 2020
2020ರ ಐಪಿಎಲ್ ಹರಾಜಿನಲ್ಲಿ ಪ್ರವೀಣ್ ತಾಂಬೆ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 20 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಬಿಸಿಸಿಐನಿಂದ ಎನ್ಒಸಿ ಪಡೆಯದೆ ಅಬುದಾಬಿ ಟಿ10 ಲೀಗ್ನಲ್ಲಿ ಆಡಿದ್ದರಿಂದ ಅವರನ್ನು 2020ರ ಐಪಿಎಲ್ನಿಂದ ಅನರ್ಹಗೊಳಿಸಿಲಾಗಿತ್ತು. ಟಿಎನ್‌ಆರ್ ಹಾಗೂ ಕೆಕೆಆರ್ ಎರಡೂ ತಂಡಗಳ ಮಾಲೀಕ ಬಾಲಿವುಡ್ ಸ್ಟಾರ್ ನಟ ಶಾರೂಖ್ ಖಾನ್ ಆಗಿದ್ದರಿಂದ ತಾಂಬೆ ಸಿಪಿಎಲ್‌ನಲ್ಲಿ ಆಡುವ ಅವಕಾಶ ನೀಡಲಾಗಿದೆ.
ಪ್ರವೀಣ್ ತಾಂಬೆ ತಮ್ಮ 41ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ 2013ಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಾಂಬೆ ಈವರೆಗೆ ಆಡಿದ 33 ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ