‘233 ಎಸೆತಗಳಲ್ಲಿ 483 ರನ್​​, 27 ಸಿಕ್ಸರ್’​; ಗೇಲ್ ಸಿಡಿಲಬ್ಬರ ಬ್ಯಾಟಿಂಗ್ ಹೊರತಾಗಿಯು ಸೋತ ಜಮೈಕಾ!

18.5 ಓವರ್​ನಲ್ಲೇ 6 ವಿಕೆಟ್ ಕಳೆದುಕೊಂಡು 242 ರನ್ ಬಾರಿಸಿ ನೆವಿಸ್ 4 ವಿಕೆಟ್​ಗಳಿಂದ ಜಯ ಸಾಧಿಸಿತು. ಇಡೀ ಪಂದ್ಯಗಳಲ್ಲಿ ದಾಖಲೆಯ 27 ಸಿಕ್ಸರ್​ಗಳು ಮೂಡಿ ಬಂದರೆ, 233 ಎಸೆತಗಳಲ್ಲಿ 483 ರನ್​ಗಳು ಹರಿದುಬಂದವು.

Vinay Bhat | news18-kannada
Updated:September 11, 2019, 10:33 AM IST
‘233 ಎಸೆತಗಳಲ್ಲಿ 483 ರನ್​​, 27 ಸಿಕ್ಸರ್’​; ಗೇಲ್ ಸಿಡಿಲಬ್ಬರ ಬ್ಯಾಟಿಂಗ್ ಹೊರತಾಗಿಯು ಸೋತ ಜಮೈಕಾ!
ಕ್ರಿಸ್ ಗೇಲ್
  • Share this:
ಬೆಂಗಳೂರು (ಸೆ. 11): ಕೆರಿಬಿಯನ್ ಪ್ರೀಮಿಯರ್ ಲೀಗ್​ನ ನಿನ್ನೆಯ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ವಿರುದ್ಧ ನೆವಿಸ್ ಪಾಟ್ರಿಯಾಟ್ಸ್​ ತಂಡ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಕ್ರಿಸ್ ಗೇಲ್​ರ ಸ್ಫೋಟಕ ಶತಕದ ಹೊರತಾಗಿಯು ಜಮೈಕಾ ಸೋಲುಂಡಿದೆ. ಇಡೀ ಪಂದ್ಯದಲ್ಲಿ 233 ಎಸೆತಗಳಲ್ಲಿ 483 ರನ್ ಹರಿದು ಬಂದಿದ್ದು ವಿಶೇಷ!

ಟಾಸ್ ಸೋತು ಬ್ಯಾಟಿಂಗ್​ಗೆ ಉಳಿದ ಜಮೈಕಾ ಆರಂಭದಲ್ಲೇ ಗ್ಲೆನ್ ಪಿಲಿಪ್ಸ್​(8) ವಿಕೆಟ್ ಕಳೆದುಕೊಂಡಿತು. ನಂತರ ನಡೆದಿದ್ದು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಗೂ ಚಾಡ್ವಿಕ್ ವಲ್ಟನ್ ಆಟ. ಮೈದಾನದಲ್ಲಿ ದೂಳೆಬ್ಬಿಸಿದ ಈ ಜೋಡಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಅದರಲ್ಲು ಅಬ್ಬರಿಸಿದ ಗೇಲ್ ಮನ ಬಂದಂತೆ ಬ್ಯಾಟ್ ಬೀಸಿದರು.

2ನೇ ವಿಕೆಟ್​ಗೆ ಈ ಜೋಡಿ 162 ರನ್​ಗಳ ಜೊತೆಯಾಟ ಆಡಡಿದರು. ವಾಲ್ಟನ್ 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ 73 ರನ್ ಬಾರಿಸಿದರೆ, ಗೇಲ್ 62 ಎಸೆತಗಳಲ್ಲಿ 7 ಬೌಂಡರಿ ಹಾಗೂ ಬರೋಬ್ಬರಿ 10 ಸಿಕ್ಸರ್​​ನೊಂದಿಗೆ 116 ರನ್ ಚಚ್ಚಿದರು. ಇವರ ಆಟದ ನೆರವಿನಿಂದ ಜಮೈಕಾ ತಂಡ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿತು.

 


ಅಂದು ಕುಡಿದ ಮತ್ತಿನಲ್ಲಿ ವಾರ್ನರ್ ಮಾಡಿದ್ದೇನು ಗೊತ್ತಾ?; ಅಚ್ಚರಿ ಸಂಗತಿ ಬಹಿರಂಗ ಪಡಿಸಿದ ಕುಕ್!

242 ರನ್​ಗಳ ಗುರಿ ಬೆನ್ನಟ್ಟಿದ ನೆವಿಸ್ ತಂಡ ಎಲ್ಲಿಲ್ಲದ ಆರಂಭ ಪಡೆದುಕೊಂಡಿತು. ಎವಿನ್ ಲೆವಿಸ್ ಕೇವಲ 18 ಎಸೆತಗಳಲ್ಲಿ 53 ರನ್ ಬೀಸಿದರು. ಡೆವನ್ ಥೋಮಸ್ 40 ಎಸೆತಗಳಲ್ಲಿ 71 ರನ್ ಬಾರಿಸಿದರು. ಲೌರಿ ಎವನ್ಸ್​ 20 ಎಸೆತ 41 ರನ್ ಹಾಗೂ ಫಾಬಿನ್ ಅಲೆನ್ 15 ಎಸೆತ ಅಜೇಯ 37 ರನ್ ಗಳಿಸಿದರು. ಜಯಕ್ಕೆ ಎಲ್ಲಿದ ಹೋರಾಟ ನಡೆಸಿದ ನೆವಿಸ್ ತಂಡದ ಬ್ಯಾಟ್ಸ್​ಮನ್​ಗಳು ಕೊನೆಗೂ ಗೆದ್ದು ಬೀಗಿದರು.

18.5 ಓವರ್​ನಲ್ಲೇ 6 ವಿಕೆಟ್ ಕಳೆದುಕೊಂಡು 242 ರನ್ ಬಾರಿಸಿ ನೆವಿಸ್ 4 ವಿಕೆಟ್​ಗಳಿಂದ ಜಯ ಸಾಧಿಸಿತು. ಇಡೀ ಪಂದ್ಯಗಳಲ್ಲಿ ದಾಖಲೆಯ 27 ಸಿಕ್ಸರ್​ಗಳು ಮೂಡಿ ಬಂದರೆ, 233 ಎಸೆತಗಳಲ್ಲಿ 483 ರನ್​ಗಳು ಹರಿದುಬಂದವು.

ಪಂದ್ಯದ ಹೈಲೇಟ್ಸ್​ ಇಲ್ಲಿದೆ:

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ