ಬೇಸರದ ಸುದ್ದಿ: ಲಂಕಾ ಪ್ರವಾಸದ ಬಳಿಕ ಕೊಹ್ಲಿ ಪಡೆಯ ಮತ್ತೊಂದು ಟೂರ್ ರದ್ದು!

India vs Sri Lanka: ಜೂನ್-ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಾಗುತ್ತಿಲ್ಲ. ಇದರ ಜೊತೆಗೆ ಆಗಸ್ಟ್​ನಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನೂ ರದ್ದು ಮಾಡಲಾಗಿದೆ.

news18-kannada
Updated:June 12, 2020, 3:14 PM IST
ಬೇಸರದ ಸುದ್ದಿ: ಲಂಕಾ ಪ್ರವಾಸದ ಬಳಿಕ ಕೊಹ್ಲಿ ಪಡೆಯ ಮತ್ತೊಂದು ಟೂರ್ ರದ್ದು!
ಟೀಂ ಇಂಡಿಯಾ.
  • Share this:
ಭಾರತ ಕ್ರಿಕೆಟ್ ತಂಡ ಜೂನ್ ಅಂತ್ಯದಲ್ಲಿ ಸೀಮಿತ ಓವರ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಬೆಳೆಸಬೇಕಿತ್ತು. ಆದರೆ, ಕೊರೋನಾ ವೈರಸ್ ಹಿನ್ನಲೆಯಲ್ಲಿ ಸರಣಿಯನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಎರಡೂ ದೇಶದ ಕ್ರಿಕೆಟ್ ಮಂಡಳಿಗಳು ನಿರ್ಧಾರ ತೆಗೆದುಕೊಂಡಿವೆ. ಇದರ ಬೆನ್ನಲ್ಲೆ ಟೀಂ ಇಂಡಿಯಾದ ಮತ್ತೊಂದು ಪ್ರವಾಸ ಕೂಡ ರದ್ದಾಗಿದೆ. ಇದರಿಂದ ಕೊಹ್ಲಿ ಹುಡುಗರ ಆಟ ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದ ಅಭಿಮಾನಿಗಳಿಗೆ ಆಘಾತ ಉಂಟಾಗಿದೆ.

ಸಿಂಹಳೀಯರ ವಿರುದ್ಧ ಭಾರತ ಜೂನ್ ತಿಂಗಳಾಂತ್ಯಕ್ಕೆ ಏಕದಿನ ಪಂದ್ಯಗಳ ಸರಣಿ ಮತ್ತು ಜುಲೈ ಆರಂಭಕ್ಕೆ ಟಿ-20 ಪಂದ್ಯಗಳ ಸರಣಿ ಆಯೋಜಿಸಲಾಗಿತ್ತು. ಪಂದ್ಯಗಳಿಗೆ ದಿನಾಂಕ ಇನ್ನೂ ಅಂತಿಮಗೊಂಡಿರಲಿಲ್ಲ. ಆದರೆ, ಆಟದತ್ತ ಮುಂದುವರಿಯಲು ಇದು ಸರಿಯಾದ ಸಂದರ್ಭವಲ್ಲ ಎಂದು ಹೇಳಿರುವ ಬೋರ್ಡ್ ಪ್ರವಾಸ ರದ್ದುಗೊಳಿಸಿದೆ.

ಆಸೀಸ್ ನಾಡಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಕರುನಾಡ ಯುವಕ: ಕೊಂಡಾಡಿದ ಡೇವಿಡ್ ವಾರ್ನರ್

ಇದಾದ ಬೆನ್ನಲ್ಲೆ ಸದ್ಯ ಜಿಂಬಾಬ್ವೆ ವಿರುದ್ಧದ ಸರಣಿಯನ್ನೂ ರದ್ದು ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ. ಆಗಸ್ಟ್​ 22 ರಿಂದ ಜಿಂಬಾಬ್ವೆ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಬೇಕಿತ್ತು.

'ಜೂನ್-ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಾಗುತ್ತಿಲ್ಲ. ಇದರ ಜೊತೆಗೆ ಆಗಸ್ಟ್​ನಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನೂ ರದ್ದು ಮಾಡಲಾಗಿದೆ. ನಾವಿದನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ ಹಾಗೂ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್​ಗೆ ಅರ್ಥ ಮಾಡಿಸಿದ್ದೇವೆ. ಏನೇ ಇರಲಿ, ಮುಂದಿನ ದಿನಗಳಲ್ಲಿ ಈ ಸರಣಿ ನಡೆಸಲು ಬದ್ಧರಾಗಿದ್ದೇವೆ,' ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಶಾ ತಿಳಿಸಿದ್ದಾರೆ.

 ಭಾರತದಲ್ಲಿ ಇಂದು ಕೋವಿಡ್‌-19 ಸೋಂಕು ವ್ಯಾಪಕವಾಗಿ ಹೆಚ್ಚುತ್ತಲೇ ಇದೆ. ದೇಶದಲ್ಲಿ ಇನ್ನೇನು ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ 3 ಲಕ್ಷದ ಸಮೀಪವಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಅನುನೀಗಿದ್ದಾರೆ. ಹೀಗಿರುವಾಗ ಕ್ರಿಕೆಟ್‌ ಆರಂಭಿಸಿದರೂ ಪಂದ್ಯ ಆಡುವ ಫಿಟ್ನೆಸ್‌ಗೆ ಮರಳಲು ಆಟಗಾರರಿಗೆ ಕನಿಷ್ಠ 4-6 ವಾರಗಳ ಅಭ್ಯಾಸದ ಅಗತ್ಯವಿದೆ.

Rahul Dravid: ಫಲಿತಾಂಶಕ್ಕೂ ನನಗೂ ಸಂಬಂಧವಿಲ್ಲದಂತೆ ಧೋನಿ ಬ್ಯಾಟ್ ಬೀಸುತ್ತಿದ್ರು..!

'ಆಟಗಾರರಿಗೆ ಅಭ್ಯಾಸ ತಪ್ಪಿದೆ. ಇನ್ನು ಅಂತಾರಾಷ್ಟ್ರೀಯ ಪ್ರವಾಸ ಎಂದು ಸಾಧ್ಯವಾಗುತ್ತದೆ ಎಂಬುದು ತಿಳಿದಿಲ್ಲ. ಹೀಗಾಗಿ ಜೂನ್‌ ಜುಲೈನಲ್ಲಿ ಇದು ಸಾಧ್ಯವಿಲ್ಲ,' ಎಂದು ಧುಮಾಲ್‌ ಹೇಳಿದ್ದಾರೆ. 'ಟೀಂ ಇಂಡಿಯಾ ಜೂನ್‌ನಲ್ಲಿ ಅಭ್ಯಾಸ ಶಿಬಿರ ಆರಂಭಿಸಲಿದೆ. ಮಾನ್‌ಸೂನ್‌ ಬಳಿಕ ದೇಶದಲ್ಲಿ ಕ್ರಿಕೆಟ್‌ ಮರಳಿ ಆರಂಭವಾಗಲಿದೆ' ಎಂದು ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಈ ಮೊದಲು ಹೇಳಿದ್ದರು.
First published: June 12, 2020, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading