ಚೀನಾ ಉತ್ಪನ್ನಗಳನ್ನು ಬಳಸಬೇಡಿ; ಸುರೇಶ್ ರೈನಾ ಮನವಿ

Suresh Raina: ಭಾರತೀಯ ಯೋಧರು ಹುತಾತ್ಮರಾಗಿರುವುದು ನಿಜಕ್ಕೂ ದುಃಖದ ಸಂಗತಿ. ಇಲ್ಲಿ ಕುಳಿತುಕೊಂಡು ಹುತಾತ್ಮ ಯೋಧರ ಬಗ್ಗೆ ಮಾತನಾಡುವುದು ಸುಲಭ. ಆದರೆ ಕುಟುಂಬಸ್ಥರ ಕಣ್ಣೀರು ಒರೆಸುವುದು ಕಷ್ಟದ ಕೆಲಸ ಎಂದಿದ್ದಾರೆ ಕ್ರಿಕೆಟಿಗ ಸುರೇಶ್​ ರೈನಾ

news18-kannada
Updated:June 20, 2020, 5:47 PM IST
ಚೀನಾ ಉತ್ಪನ್ನಗಳನ್ನು ಬಳಸಬೇಡಿ; ಸುರೇಶ್ ರೈನಾ ಮನವಿ
ಸುರೇಶ್​ ರೈನಾ
  • Share this:
ಟೀಂ ಇಂಡಿಯಾದ ಆಟಗಾರ ಸುರೇಶ್​ ರೈನಾ ಚೀನಾ ಉತ್ಪನ್ನಗಳನ್ನು ಬಳಸಬೇಡಿ ಎಂದು ಮನವಿ ಮಾಡಿದ್ದಾರೆ. ಲಡಾಖ್​ನ ಗಾಲ್ವಾನ್​ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದರು. ಈ ಕುರಿತಾಗಿ ಮಾತನಾಡಿದ್ದ ಕ್ರಿಕೆಟಿಗ ಸುರೇಶ್​ ರೈನಾ ಚೀನಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಭಾರತೀಯ ಯೋಧರು ಹುತಾತ್ಮರಾಗಿರುವುದು ನಿಜಕ್ಕೂ ದುಃಖದ ಸಂಗತಿ. ಇಲ್ಲಿ ಕುಳಿತುಕೊಂಡು ಹುತಾತ್ಮ ಯೋಧರ ಬಗ್ಗೆ ಮಾತನಾಡುವುದು ಸುಲಭ. ಆದರೆ ಕುಟುಂಬಸ್ಥರ ಕಣ್ಣೀರು ಒರೆಸುವುದು ಕಷ್ಟದ ಕೆಲಸ. ದೇಶದ ಗಡಿ ಕಾಯುವ ಯೋಧರಿಂದಾಗಿ ನಾವು ಸುರಕ್ಷಿತವಾಗಿದ್ದೇವೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ಕಾಯಲು ಹೋಗಿ ಎಂದರೆ ಖಂಡಿತಾ ಹೋಗುವೆ ಎಂದಿದ್ದಾರೆ.

ಸುರೇಶ್​ ರೈನಾ


ನಂತರ ಮಾತು ಮುಂದುವರಿಸಿದ ಅವರು, ನಮ್ಮ ಕೆಲಸವೇನಿದ್ದರು ಕ್ರಿಕೆಟ್​ ಆಡುವುದು ದೇಶವನ್ನು ಹೆಮ್ಮೆ ಪಡುವಂತೆ ಮಾಡುವುದು. ನನ್ನ ಕುಟುಂಬದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದವರಿದ್ದಾರೆ. ಅವರ ಬದುಕು ಯಾವ ರೀತಿ ಇರುತ್ತದೆ ಎಂದು ನನಗೆ ತಿಳಿದಿದೆ. ಚೀನಾ ಉತ್ಪನ್ನಗಳನ್ನು ಬಳಕೆ ಮಾಡದಿದ್ದರೆ ನಮಗೇನೂ ಆಗುವುದಿಲ್ಲ ಎಂದಿದ್ದಾರೆ.

Father’s Day 2020: ಪ್ರತೀ ವರ್ಷ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಫಾದರ್ಸ್​ ಡೇ ವಿಶೇಷ ಮತ್ತು ಇತಿಹಾಸ ನಿಮಗೆ ಗೊತ್ತಾ?

WhatsApp Bug: ವಾಟ್ಸ್​​ಆ್ಯಪ್​ ಪ್ರೈವೆಸಿ ಸೆಟ್ಟಿಂಗ್ಸ್​ ಸಮಸ್ಯೆಯಿಂದ ಗಲಿಬಿಲಿಗೊಂಡ ಬಳಕೆದಾರರು!
First published:June 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading