Ranji Trophy – ಕರ್ನಾಟಕದ ಪಾಲಿಗೆ ಕಂಟಕರಾದ ಪೂಜಾರ; ದ್ವಿಶತಕದತ್ತ ಸೌರಾಷ್ಟ್ರ ಸರದಾರ

ಕರ್ನಾಟಕ ವಿರುದ್ಧ ಚೇತೇಶ್ವರ್ ಪೂಜಾರ ರನ್ ದಾಹ ಮುಂದುವರಿದಿದೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 50ನೇ ಶತಕ ದಾಖಲಿಸಿರುವ ಪೂಜಾರ ಅವರ ಅಮೋಘ ಆಟದ ನೆರವಿನಿಂದ ಸೌರಾಷ್ಟ್ರ 2 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿದೆ.

Vijayasarthy SN | news18
Updated:January 11, 2020, 6:06 PM IST
Ranji Trophy – ಕರ್ನಾಟಕದ ಪಾಲಿಗೆ ಕಂಟಕರಾದ ಪೂಜಾರ; ದ್ವಿಶತಕದತ್ತ ಸೌರಾಷ್ಟ್ರ ಸರದಾರ
ಕರ್ನಾಟಕ ವಿರುದ್ಧ ಚೇತೇಶ್ವರ್ ಪೂಜಾರ ರನ್ ದಾಹ ಮುಂದುವರಿದಿದೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 50ನೇ ಶತಕ ದಾಖಲಿಸಿರುವ ಪೂಜಾರ ಅವರ ಅಮೋಘ ಆಟದ ನೆರವಿನಿಂದ ಸೌರಾಷ್ಟ್ರ 2 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿದೆ.
  • News18
  • Last Updated: January 11, 2020, 6:06 PM IST
  • Share this:
ರಾಜಕೋಟ್(ಜ. 11): ಟೀಮ್ ಇಂಡಿಯಾ ಆಟಗಾರ ಚೇತೇಶ್ವರ್ ಪೂಜಾರ ಕರ್ನಾಟಕದ ಪಾಲಿಗೆ ಕಂಟಕರಾಗಿ ಮುಂದುವರಿದಿದ್ದಾರೆ. ಕರ್ನಾಟಕ ಮತ್ತು ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ದಿನದ ಗೌರವ ಪೂಜಾರ ಅವರಿಗೆ ಸಂದಾಯವಾಯಿತು. ಪೂಜಾರ ಅವರ ಅಮೋಘ ಬ್ಯಾಟಿಂಗ್​ನಿಂದಾಗಿ ಸೌರಾಷ್ಟ್ರ 2 ವಿಕೆಟ್ ನಷ್ಟಕ್ಕೆ 296 ರನ್​ಗಳೊಂದಿಗೆ ಮೊದಲ ದಿನಾಂತ್ಯಗೊಳಿಸಿತು. ಪೂಜಾರ ಅಜೇಯ 162 ರನ್ ಗಳಿಸಿ ದ್ವಿಶತಕದತ್ತ ದಾಪುಗಾಲಿಕ್ಕಿದ್ದಾರೆ.

ಇಂದು ಪ್ರಾರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ಆರಂಭಿಕ ಆಘಾತ ಅನುಭವಿಸಿತು. 33 ರನ್ನಾಗುಷ್ಟರಲ್ಲಿ 2 ವಿಕೆಟ್ ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಚೇತೇಶ್ವರ್ ಪೂಜಾರ ಮತ್ತು ಶೆಲ್ಡಾನ್ ಜ್ಯಾಕ್ಸನ್ 3ನೇ ವಿಕೆಟ್​ಗೆ 263 ರನ್​ಗಳ ಮುರಿಯದ ಜೊತೆಯಾಟ ಆಡಿ ಪಂದ್ಯಕ್ಕೆ ಹೊಸ ಗತಿ ತಂದುಕೊಟ್ಟರು. ಪೂಜಾರ ಅಜೇಯ 162 ರನ್ ಗಳಿಸಿದರೆ, ಶೆಲ್ಡನ್ ಜ್ಯಾಕ್ಸನ್ ಅಜೇಯ 99 ರನ್ ಭಾರಿಸಿ ಶತಕಕ್ಕೆ ಕೇವಲ 1 ರನ್ ಹಿಂದಿದ್ದಾರೆ.

ಇದನ್ನೂ ಓದಿ: ಚೆನ್ನಾಗಿ ಆಡದಿದ್ರೆ ಮನೆಗೆ ಬರಬೇಡಿ: ಹೆಂಡತಿಯಿಂದ ಕ್ರಿಕೆಟಿಗನಿಗೆ ಬೆದರಿಕೆ..!

ಪೂಜಾರ 50 ಶತಕಗಳ ಮೈಲಿಗಲ್ಲು:

ಭಾರತ ಕಂಡ ಉತ್ತಮ ಟೆಸ್ಟ್ ಬ್ಯಾಟುಗಾರರಲ್ಲೊಬ್ಬರೆನಿಸಿರುವ ಚೇತೇಶ್ವರ್ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 50 ಶತಕ ಗಳಿಸಿದ ಮೈಲಿಗಲ್ಲು ಮುಟ್ಟಿದ್ಧಾರೆ. ಈ ಸಾಧನೆ ಮಾಡಿದ 9ನೇ ಭಾರತೀಯರೆನಿಸಿದ್ಧಾರೆ. ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಅವರು 81 ಶತಕಗಳನ್ನು ಗಳಿಸಿರುವುದು ಈ ಪಟ್ಟಿಯಲ್ಲಿ ಆದಿಯಲ್ಲಿದೆ. ರಾಹುಲ್ ದ್ರಾವಿಡ್, ವಿಜಯ್ ಹಜಾರೆ, ವಾಸಿಮ್ ಜಾಫರ್, ದಿಲೀಪ್ ವೆಂಗ್ಸರ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಅವರ ನಂತರದ ಸ್ಥಾನದಲ್ಲಿ ಪೂಜಾರ ಇದ್ದಾರೆ. ಆದರೆ, ಹಾಲಿ ಕ್ರಿಕೆಟಿಗರ ಪೈಕಿ ವಾಸಿಂ ಜಾಫರ್ ಅವರೊಬ್ಬರು ಮಾತ್ರ ಪೂಜಾರಗಿಂತ ಮೇಲಿದ್ಧಾರೆ.

ಕರ್ನಾಟಕಕ್ಕೆ ಮಗ್ಗುಲ ಮುಳ್ಳು:

ಚೇತೇಶ್ವರ್ ಪೂಜಾರ ಅವರು ಕರ್ನಾಟಕದ ವಿರುದ್ಧ ಯಾವಾಗಲೂ ಚೆನ್ನಾಗಿ ಆಡುತ್ತಾರೆ. ಅವರ ಗರಿಷ್ಠ ಸ್ಕೋರಾದ 352 ರನ್ ಕೂಡ ಕರ್ನಾಟಕದ ವಿರುದ್ಧವೇ ಬಂದಿದೆ. ಕರ್ನಾಟಕದ ವಿರುದ್ಧ ಇದು ಅವರ 14ನೇ ಇನ್ನಿಂಗ್ಸ್ ಆಗಿದ್ದು ನೂರಕ್ಕೂ ಹೆಚ್ಚು ರನ್ ಸರಾಸರಿಯಂತೆ 1 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಕಳೆದ ವರ್ಷದ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪ್ರಶಸ್ತಿ ಆಸೆಗೆ ತಣ್ಣೀರು ಎರಚಿದ್ದು ಇದೇ ಪೂಜಾರನೇ.ಇದನ್ನೂ ಓದಿ: IND vs SL: ಮಿಂಚಿದ ನವದೀಪನಿಗೆ ಸರಣಿಶ್ರೇಷ್ಠ, ಠಾಕೂರ್ ಪಂದ್ಯಶ್ರೇಷ್ಠ: 3ನೇ ಟಿ-20 ಪಂದ್ಯದ ರೋಚಕ ಕ್ಷಣಗಳು ಇಲ್ಲಿದೆ!

ಈ ಬಾರಿಯ ರಣಜಿ ಋತುವಿನಲ್ಲಿ ಕರ್ನಾಟಕ ಉತ್ತಮ ಫಾರ್ಮ್​ನಲ್ಲಿದೆ. 4 ಪಂದ್ಯವಾಡಿರುವ ಕರ್ನಾಟಕ 2 ಗೆಲುವು ಹಾಗೂ 2 ಡ್ರಾವೊಂದಿಗೆ 16 ಅಂಕ ಕಲೆಹಾಕಿ ಅಗ್ರಸಾಲಿನಲ್ಲಿದೆ. ಇನ್ನು, ಸೌರಾಷ್ಟ್ರ ತಂಡ 3 ಪಂದ್ಯಗಳಿಂದ 13 ಅಂಕ ಹೊಂದು ಸುಸ್ಥಿತಿಯಲ್ಲಿದೆ. ಒಂದು ಸೋಲಿನ ಹೊರತಾಗಿಯೂ ಸೌರಾಷ್ಟ್ರ ಕೂಡ ಅದ್ಭುತ ಫಾರ್ಮ್​ನಲ್ಲಿದೆ.

ಸೌರಾಷ್ಟ್ರ-ಕರ್ನಾಟಕ ಸ್ಕೋರು ವಿವರ (ಮೊದಲ ದಿನಾಂತ್ಯ):

ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 90 ಓವರ್ 296/2
(ಚೇತೇಶ್ವರ್ ಪೂಜಾರ ಅಜೇಯ 162, ಶೆಲ್ಡನ್ ಜಾಕ್ಸನ್ ಅಜೇಯ 99 ರನ್ – ಜಗದೀಶ್ ಸುಚಿತ್ 85/2).

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: January 11, 2020, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading