IND vs ENG: ಮ್ಯಾಜಿಕ್ ಮಾಡುವುದೇ ಭಾರತ?: ಪಂದ್ಯ ಗೆಲ್ಲಿಸಿ ಕೊಡುವ ಇಬ್ಬರು ಆಟಗಾರರು ಇವರೇ ನೋಡಿ

ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದ ಗತಿಯನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತಾರೆ ಎಂಬುದೆ ಕುತೂಹಲ. ಮೊದಲ ಇನ್ನಿಂಗ್ಸ್​ನಲ್ಲಿ 48 ಎಸೆತಗಳಲ್ಲಿ 11 ರನ್ ಗಳಿಸಿ ಔಟ್ ಆಗಿದ್ದ ಕೊಹ್ಲಿ ಈ ಬಾರಿ ಎರಡನೇ ಇನ್ನಿಂಗ್ಸ್​ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಬೇಕಿದೆ.

India vs England

India vs England

 • Share this:
  ಚೆನ್ನೈ (ಫೆ. 09): ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯ ಅಂತಿಮ ಘಟ್ಟಕ್ಕೆ ಬಂದುನಿಂತಿದೆ. ಇಂದು ಕೊನೆಯ ದಿನದಾಟ ನಡೆಯಲಿದ್ದು, ಭಾರತದ ಗೆಲುವಿಗೆ 381 ರನ್​ಗಳ ಅವಶ್ಯಕತೆಯಿದೆ. 9 ವಿಕೆಟ್​ಗಳು ಟೀಂ ಇಂಡಿಯಾ ಕೈಯಲ್ಲಿವೆ. ಕೊಹ್ಲಿ ಹುಡಗರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದ್ದು ಗೆದ್ದೇ ಗೆಲ್ಲಲಿದೆ ಎಂಬ ನಂಬಿಕೆಯಲ್ಲಿದ್ದಾರೆ ಅಭಿಮಾನಿಗಳು. ಭಾರತ ಈ ಕಠಿಣ ಸವಾಲನ್ನು ಬೆನ್ನೆಟ್ಟಿ ಜಯ ಸಾಧಿಸಬೇಕಾದ್ರೆ ಈ ಇಬ್ಬರು ಆಟಗಾರರು ಅಬ್ಬರಿಸಲೇ ಬೇಕಾಗಿದೆ.

  ಹೌದು, ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದ ಗತಿಯನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತಾರೆ ಎಂಬುದೆ ಕುತೂಹಲ. ಮೊದಲ ಇನ್ನಿಂಗ್ಸ್​ನಲ್ಲಿ 48 ಎಸೆತಗಳಲ್ಲಿ 11 ರನ್ ಗಳಿಸಿ ಔಟ್ ಆಗಿದ್ದ ಕೊಹ್ಲಿ ಈ ಬಾರಿ ಎರಡನೇ ಇನ್ನಿಂಗ್ಸ್​ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಬೇಕಿದೆ. ಕಳೆದೊಂದು ವರ್ಷದಿಂದ ಕೊಹ್ಲಿ ಬ್ಯಾಟ್​ನಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬಂದಿಲ್ಲ.

  Ishant Sharma: ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 3ನೇ ವೇಗಿ, 6ನೇ ಬೌಲರ್ ಇಶಾಂತ್ ಶರ್ಮಾ..!

  ಇನ್ನೂ ಇಂದಿನ ಪಂದ್ಯವನ್ನು ಗೆಲ್ಲಿಸಿ ಕೊಡುವ ಸಾಮರ್ಥ್ಯ ಇರುವ ಮತ್ತೊಬ್ಬ ಆಟಗಾರ ರಿಷಭ್ ಪಂತ್. ಭಾರತಕ್ಕೆ ಇದೇ ಅಗ್ನಿ ಪರೀಕ್ಷೆ ಆಸ್ಟ್ರೇಲಿಯಾದಲ್ಲೂ ಉಂಟಾಗಿತ್ತು. ಕಳೆದ ಆಸ್ಟ್ರೇಲಿಯಾ ಸರಣಿಯ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿಯೂ ಭಾರತ ತಂಡಕ್ಕೆ ಕೊನೆಯ ದಿನ ದಾಖಲೆಯ ಗುರಿ ಇತ್ತು. ಆದರೂ, ಅಂದಿನ ದಿನ ಅದ್ಭುತ ಬ್ಯಾಟಿಂಗ್‌ ಮಾಡಿದ್ದ ಭಾರತದ ಯುವ ಪಡೆ ಐತಿಹಾಸಿಕ ಜಯ ಸಾಧಿಸಿತ್ತು. ಅದರಲ್ಲೂ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

  IPL 2021: IPL ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ದೇಶೀಯ ಟಿ20 ಟೂರ್ನಿಯಲ್ಲಿ ಮಿಂಚಿದ ಈ ನಾಲ್ವರು..!

  ಭಾರತ ತಂಡ 2008ರಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 387 ರನ್​ಗಳನ್ನು ಯಶಸ್ವಿಯಾಗಿ ಚೇಸ್​ ಮಾಡಿ ಗೆಲುವು ಸಾಧಿಸಿತ್ತು. ಆಗ ಗಂಭೀರ್​ 66 ರನ್, ವಿರೇಂದ್ರ ಸೆಹ್ವಾಗ್​ 83 ಸಚಿನ್ ಅಜೇಯ 103, ಯುವರಾಜ್ ಸಿಂಗ್​ ಅಜೇಯ 85 ರನ್​ಗಳಿಸಿ ಗಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

  ಒಟ್ಟಾರೆ ಭಾರತ ತಂಡ ನಾಲ್ಕನೇ ದಿನದ ಅಂತ್ಯಕ್ಕೆ 13 ಓವರ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು 39 ರನ್‌ ಗಳಿಸಿದೆ. ಕೊಹ್ಲಿ ಪಡೆಯ ಗೆಲುವಿಗೆ 381 ರನ್‌ ಅಗತ್ಯವಿದೆ. ಭಾರತ ಈ ಪಂದ್ಯ ಗೆದ್ದಿದ್ದೇ ಆದಲ್ಲಿ ಕೊಹ್ಲಿ ಪಡೆಯ ಪಾಲಿಗೆ ಇದು ಸ್ಮರಣೀಯ ಜಯವಾಗಲಿದೆ.
  Published by:Vinay Bhat
  First published: