ಇವೆರಡು 2019ರ ಹೃದಯ ವಿದ್ರಾವಕ ಫೋಟೋಗಳು; ಟ್ವಿಟ್ಟರ್​ನಲ್ಲಿ ಭಾರತೀಯರ ಬೇಸರ!

ಎಂ ಎಸ್ ಧೋನಿ ರನೌಟ್ ಹಾಗೂ ಚಂದ್ರಯಾನ-2 ವಿಫಲ

ಎಂ ಎಸ್ ಧೋನಿ ರನೌಟ್ ಹಾಗೂ ಚಂದ್ರಯಾನ-2 ವಿಫಲ

ಎಂ ಎಸ್ ಧೋನಿ ಔಟ್ ಆಗಿ ಸೆಮೀಸ್​ನಲ್ಲಿ ಭಾರತ ಸೋತಾಗ ಇಡೀ ಭಾರತೀಯ ಕ್ರೀಡಾಭಿಮಾನಿಗಳು ದುಃಖ ಪಟ್ಟಿದ್ದರು. ಇಂದು ಇಸ್ರೋ ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ವಿಫಲವಾಗಿದ್ದು, ಚಂದ್ರನ ಅಧ್ಯಯನ ಮಾಡುವ ಉದ್ದೇಶ ಸಫಲವಾಗಿಲ್ಲ. ಈ ವಿಚಾರ ತಿಳಿದು ಭಾರತೀಯರು ಬೇಸರದಿಂದಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಸೆ. 07): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಈ ಮೂಲಕ ಚಂದ್ರನ ಅಧ್ಯಯನ ಮಾಡುವ ಉದ್ದೇಶ ಕೊನೆಗೂ ಸಫಲವಾಗಿಲ್ಲ.

ವಿಕ್ರಮ್ ಲ್ಯಾಂಡರ್ ಚಂದ್ರನಿಂದ 2.1 ಕಿ.ಮೀ ದೂರದಲ್ಲಿರುವಾಗ ಎಲ್ಲವೂ ಸಾಮಾನ್ಯವಾಗಿತ್ತು. ಆನಂತರ ಲ್ಯಾಂಡರ್​ ಹಾಗೂ ಭೂಮಿ ನಡುವೆ ಇದ್ದ  ಸಂಪರ್ಕ ಕಡಿತಗೊಂಡಿದೆ. ಇದರ ದತ್ತಾಂಶ ವಿಶ್ಲೇಷಣೆ ಮಾಡಬೇಕಿದೆ ಎಂದು ಇಸ್ರೋ ಮುಂಜಾನೆ 2.15ಕ್ಕೆ ಹೇಳಿಕೆ ನೀಡಿತ್ತು.

ಆದರೆ, ಈಗ ಚಂದ್ರಯಾನ ಕೊನೆಯ ಕ್ಷಣದಲ್ಲಿ ವಿಫಲವಾಗಿರುವುದು ಬೇಸರ ಮೂಡಿಸಿದ್ದರೂ ಇಸ್ರೋದ ಪ್ರಯತ್ನಕ್ಕೆ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಇದರ ಮಧ್ಯೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಫೊಟೋ ಒಂದನ್ನು ಹಂಚಿಕೊಂಡಿದ್ದು ಭಾರೀ ವೈರಲ್ ಆಗುತ್ತಿದೆ.

Video: ಕನಸು ನನಸಾಗದ್ದಕ್ಕೆ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ ಕೆ. ಶಿವನ್; ತಬ್ಬಿ ಸಂತೈಸಿದ ಪ್ರಧಾನಿ ಮೋದಿ

2019 ಐಸಿಸಿ ವಿಶ್ವಕಪ್ ಸೆಮಿ ಫೈನಲ್​ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 18 ರನ್​ಗಳಿಂದ ಸೋತಿತ್ತು. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಗೆಲುವಿಗಾಗಿ ಕೊನೆಯವರೆಗೂ ಕಠಿಣ ಹೋರಾಟ ನಡೆಸಿದ್ದರು. ಆದರೆ, ಅಂತಿಮ ಹಂತದಲ್ಲಿ ಎರಡು ರನ್ ಕಲೆಹಾಕಲೋಗಿ ಧೋನಿ ಕೂದಳೆಯಿಂದ ರನೌಟ್​ಗೆ ಬಲಿಯಾದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಧೋನಿ ಔಟ್ ಆಗಿದ್ದೇ ನ್ಯೂಜಿಲೆಂಡ್ ಗೆಲುವಿನ ನಗೆ ಬೀರಿತ್ತು.

ಎಂ ಎಸ್ ಧೋನಿ ಔಟ್ ಆಗಿ ಸೆಮೀಸ್​ನಲ್ಲಿ ಭಾರತ ಸೋತಾಗ ಇಡೀ ಭಾರತೀಯ ಕ್ರೀಡಾಭಿಮಾನಿಗಳು ದುಃಖ ಪಟ್ಟಿದ್ದರು. ಇಂದು ಇಸ್ರೋ ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ವಿಫಲವಾಗಿದ್ದು, ಚಂದ್ರನ ಅಧ್ಯಯನ ಮಾಡುವ ಉದ್ದೇಶ ಸಫಲವಾಗಿಲ್ಲ. ಈ ವಿಚಾರ ತಿಳಿದು ಭಾರತೀಯರು ಬೇಸರದಿಂದಿದ್ದಾರೆ.

ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್ ವಿರುದ್ಧ ಗಂಭೀರ ಆರೋಪ..!

ತಮ್ಮ ಬೇಸರವನ್ನು ಟ್ವಿಟ್ಟರ್​​ನಲ್ಲಿ ವ್ಯಕ್ತಪಡಿಸಿರುವ ಭಾರತೀಯರು, ವಿಶ್ವಕಪ್ ಸೆಮಿ ಫೈನಲ್​​ನಲ್ಲಿ ಧೋನಿ ರನೌಟ್ ಆಗುತ್ತಿರುವ ಫೋಟೋ ಹಾಗೂ ಕೇವಲ 2.1 ಕಿ.ಮೀ ದೂರದಲ್ಲಿ ಇರುವಾಗ ವಿಕ್ರಮ್ ಲ್ಯಾಂಡರ್ನ ಗರ್ಭದಲ್ಲೇ ಮುರುಟಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ‘ಇವೆರಡು 2019ರ ಹೃದಯ ವಿದ್ರಾವಕ ಫೋಟೋಗಳು’ ಎಂದು ಬರೆದುಕೊಂಡಿದ್ದಾರೆ.

 
First published: