'ನಮ್ಮ ಬೆಂಗಳೂರು ಕುಟುಂಬ ರೆಡಿನಾ'; ಚಹಾಲ್ ಕನ್ನಡ ಟ್ವೀಟ್​ಗೆ ಬೆಂಗಳೂರು ಅಭಿಮಾನಿಗಳು ಫಿದಾ!

Yuzvendra Chahal RCB: ಕಳೆದ 12 ಸೀಸನ್'ಗಿಂತಲೂ ಈ ಬಾರಿ ಆರ್​ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. 13ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆಲ್ಲುವ ಹಠಕ್ಕೆ ಬಿದ್ದಿರುವ ನಾಯಕ ವಿರಾಟ್ ಕೊಹ್ಲಿ ಪಡೆ, ಉತ್ತಮ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿದೆ.

ಯಜುವೇಂದ್ರ ಚಹಾಲ್.

ಯಜುವೇಂದ್ರ ಚಹಾಲ್.

 • Share this:
  ಬೆಂಗಳೂರು (ಮಾ. 09): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಎಲ್ಲ ತಂಡಗಳು ಈಗಾಗಲೇ ಭರ್ಜರಿ ತಯಾರಿಯಲ್ಲಿ ಬ್ಯುಸಿಯಾಗಿದೆ. ಕೆಲ ತಂಡದ ಆಟಗಾರರು ಅಭ್ಯಾಸವನ್ನೂ ಪ್ರಾರಂಭಿಸಿದ್ದಾರೆ. ಮಾರ್ಚ್​ 29 ರಂದು ಈ ರಂಗು ರಂಗಿನ ಕ್ರೀಡಾ ಹಬ್ಬಕ್ಕೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ.

  Chahal tweeted in kannada about Bengaluru audience on IPL 2020 and RCB; his fans surprised
  ಯಜುವೇಂದ್ರ ಚಹಾಲ್, ಆರ್​ಸಿಬಿ ತಂಡದ ಆಟಗಾರ.


  ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದೊಂದು ತಿಂಗಳುಗಳಿಂದ ಕನ್ನಡಿಗರ ಮನ ಗೆಲ್ಲಲು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪದ ಬಳಸುತ್ತಿದೆ. ಇದೇ ಮಾದರಿಯಲ್ಲಿ ಆರ್​ಸಿಬಿ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೂಡ ಕನ್ನಡದಲ್ಲೇ ಟ್ವೀಟ್ ಮಾಡಿ ಕನ್ನಡಿಗರ ಮನ ಗೆದ್ದಿದಾರೆ.

  ತಾವು ಬೌಲಿಂಗ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಚಹಾಲ್, 'ನಮ್ಮ ಬೆಂಗಳೂರು ಕುಟುಂಬ, ರೆಡಿ ನಾ?' ಎಂದು ಉಲ್ಲೇಖಿಸಿದ್ದಾರೆ. ಚಹಾಲ್ ಅವರ ಟ್ವೀಟ್‍ಗೆ ಕನ್ನಡಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ.

  RCB: 2020 ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುವವರು ಯಾರು?; ಇಲ್ಲಿದೆ ಪ್ಲೇಯಿಂಗ್ XI

     ಚಹಾಲ್ ಟ್ವೀಟ್​ಗೆ ಕೆಲವರು, ‘ಫಿದಾ ಆಗೋದೇ ಗುರು ನಿಮ್ಮ ಕನ್ನಡ ಟ್ವಿಟ್ ನೋಡಿ ಎಂದು ಹೇಳಿದರೆ, ಇನ್ನಬೊಬ್ಬರು ‘ಬೇರೆ ರಾಜ್ಯದವರು ನಮ್ಮ ಕನ್ನಡ ಪದಬಳಕೆ ಮಾಡಿದಾಗ ಅದರಲ್ಲಿ ಸಿಗುವ ಮಜಾನೇ ಬೇರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ 'ನಾವು ಯಾವಾಗ್ಲೂ ರೆಡಿಯಾಗಿದ್ದೇವೆ. ಕನ್ನಡದಲ್ಲೇ ಟ್ವೀಟ್ ಮಾಡಿದ್ದಕ್ಕಾಗಿ ನಿಮಗೆ ಕೋಟಿ ನಮನಗಳು' ಎಂದು ಕಮೆಂಟ್ ಮಾಡಿದ್ದಾರೆ.

   

  ಚೆನ್ನೈಗೆ ಪ್ರಯಾಣ ಮಾಡುವ ವೇಳೆ ವಿಮಾನದಲ್ಲಿ ಹರ್ಭಜನ್ ಸಿಂಗ್ ಬ್ಯಾಟ್ ಕಳವು?

  ಕಳೆದ 12 ಸೀಸನ್'ಗಿಂತಲೂ ಈ ಬಾರಿ ಆರ್​ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. 13ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆಲ್ಲುವ ಹಠಕ್ಕೆ ಬಿದ್ದಿರುವ ನಾಯಕ ವಿರಾಟ್ ಕೊಹ್ಲಿ ಪಡೆ, ಉತ್ತಮ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿದೆ. ಹೀಗಾಗಿ ಈ ಬಾರಿಯಾದರೂ ಬೆಂಗಳೂರಿಗೆ ಐಪಿಎಲ್ ಕಪ್ ಒಲಿಯುತ್ತಾ ಎಂಬುದು ಕಾದು ನೋಡಬೇಕಿದೆ.

  First published: