ಭಾರತ(India) ಕ್ರಿಕೆಟ್ (Cricket) ತಂಡ ಪ್ರವಾಸಿ ವೆಸ್ಟ್ ಇಂಡೀಸ್(west indies) ವಿರುದ್ಧ 6 ವಿಕೆಟ್ಗಳ(Wicket) ಸ್ಮರಣೀಯ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನ(ODI) ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಮೂಲಕ 1000 ಏಕದಿನ ಪಂದ್ಯ(One day match) ಆಡಿದ ತಂಡ, ಹಾಗೂ ಆ ಪಂದ್ಯದಲ್ಲಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿಶೇಷ ಅಂದ್ರೆ ಭಾರತದ ಮೈಲಿಗಲ್ಲಿನ ಪಂದ್ಯದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಹೊಸ ಅಧ್ಯಾಯ(New Chapter) ಆರಂಭಿಸಿದ ರೋಹಿತ್ ಶರ್ಮ(Rohit Sharma) ಮೊದಲ ಪಂದ್ಯದಲ್ಲಿಯೇ ಗೆಲುವಿನ ರುಚಿ ಕಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವನ್ನು 43.5 ಓವರ್ ಗಳಲ್ಲಿ 176 ರನ್ ಗಳಿಗೆ ಆಲೌಟ್ ಮಾಡಿದ ಭಾರತ ತಂಡ 28 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ದಾಳಿಗೆ ವಿಂಡೀಸ್ ದಾಂಡಿಗರು ಸಂಪೂರ್ಣವಾಗಿ ತತ್ತರಿಸಿದರು. ವಾಶಿಂಗ್ಟನ್ ಸುಂದರ್ ಹಾಗೂ ಯುಜುವೇಂದ್ರ ಚಾಹಲ್ ಅದ್ಭುತ ದಾಳಿಯನ್ನು ಸಂಘಟಿಸಿದರ ಪರಿಣಾಮವಾಗಿ ವಿಂಡೀಸ್ ಬ್ಯಾಟರ್ಗಳು ಕ್ರೀಸ್ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ.
ಜೇಸನ್ ಹೋಲ್ಡರ್ ಹೊರತುಪಡಿಸಿ ಉಳಿದ ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಫಲವಾಗಲಿಲ್ಲ.
ಇದನ್ನೂ ಓದಿ: ಈ ಸೀಸನ್ ಸಖತ್ ಡಲ್ ಹೊಡೆದ ರೆಕಾರ್ಡ್ ಬ್ರೇಕರ್ ಪರ್ದೀಪ್.. ಇವ್ರ ದಾಖಲೆ ಮುರಿಯೋಕೆ ಕಾಯ್ತಿದ್ದಾರೆ 3 ಪ್ಲೇಯರ್ಸ್!
ಇನ್ನು ವೆಸ್ಟ್ ಇಂಡಿಸ್ ನೀಡಿದ ಸುಲಭ ಗುರಿ ಬೆಂನ್ನತ್ತಿದ ಭಾರತ ತಂಡಕ್ಕೆ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 10 ಬೌಂಡರಿ, 1 ಸಿಕ್ಸ್ ನೊಂದಿಗೆ ಆಕರ್ಷಕ 60 ರನ್ ಗಳಿಸಿದರು.
ಇಶಾನ್ ಕಿಶಾನ್ 28, ವಿರಾಟ್ ಕೊಹ್ಲಿ, 8, ರಿಷಭ್ ಪಂತ್, 11, ಸೂರ್ಯ ಕುಮಾರ್ ಯಾದವ್ 34, ದೀಪಕ್ ಹೂಡಾ 26 ರನ್ ಗಳಿಸಿದರು. ಇನ್ನು ಟೀಂ ಇಂಡಿಯಾ ಪರ ನಾಲ್ಕು ವಿಕೆಟ್ ಪಡೆದು ಪಂದ್ಯ ಗೆಲ್ಲಲು ಕಾರಣರಾದ ಯುಜುವೇಂದ್ರ ಚಾಹೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು
1974ರಲ್ಲಿ ಮೊದಲ ಪಂದ್ಯವಾಡಿದ್ದ ಭಾರತ
1974ರ ಜುಲೈ 13ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಭಾರತ ತಂಡ 48 ವರ್ಷಗಳ ಬಳಿಕ ಸಾವಿರ ಪಂದ್ಯ ಆಡಿದ ಮೊದಲ ತಂಡ ಎನಿಸುತ್ತಿದೆ. 958 ಏಕದಿನ ಪಂದ್ಯವಾಡಿರುವ ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿದೆ.
ಪಾಕಿಸ್ತಾನ (936), ಶ್ರೀಲಂಕಾ (870), ವೆಸ್ಟ್ ಇಂಡೀಸ್ (834), ನ್ಯೂಜಿಲೆಂಡ್ (775) ಮತ್ತು ಇಂಗ್ಲೆಂಡ್ (761) 700ಕ್ಕೂ ಅಧಿಕ ಪಂದ್ಯವಾಡಿರುವ ಇತರ ತಂಡಗಳು.
ಇನ್ನು ಇಂಡಿಯಾ ಇದುವರೆಗೆ 999 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 518 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 431 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, 9 ಪಂದ್ಯಗಳು ಟೈನಲ್ಲಿ ಕೊನೆಗೊಂಡಿವೆ. 41 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
1000 ಪಂದ್ಯದಲ್ಲಿ ಹೊಸ ದಾಖಲೆ ಬರೆದ ಯುಜುವೇಂದ್ರ ಚಾಹಲ್
ಇನ್ನು ಈ ಮ್ಯಾಚ್ನಲ್ಲಿ ಯುಜುವೇಂದ್ರ ಚಾಹಲ್ ಹೊಸ ದಾಖಲೆ ಬರೆದಿದ್ದಾರೆ. ಚಾಹಲ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ 100ನೇ ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಚಾಹಲ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವೇಗವಾಗಿ 100 ವಿಕೆಟ್ ತೆಗೆದ ಭಾರತದ 5ನೇ ಬೌಲರ್ ಎನಿಸಿದರು.
ಇದನ್ನೂ ಓದಿ: 2008ರ IPL ಹರಾಜಿನ ಕಥೆ ಬಿಚ್ಚಿಟ್ಟ ವಿರಾಟ್ ಕೊಹ್ಲಿ
ಏಕದಿನ ಪಂದ್ಯದಲ್ಲಿ 5 ಸಾವಿರ ರನ್ ಪೂರೈಸಿದ ಕೊಹ್ಲಿ..
ಇನ್ನು ಭಾರತ ತಂಡದ ಮಾಜಿ ನಾಯಕ ಸಹ ಈ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 2 ಫೋರ್ ಭರಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದಲ್ಲಿ 5002 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ