ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕೋಚ್ ಸುಧೀಂದ್ರ ಶಿಂಧೆ ಬಂಧನ; ಅಪ್ರೂವರ್ ಆಗುವಂತೆ ತಪ್ಪಿತಸ್ಥ ಆಟಗಾರರಿಗೆ ಪೊಲೀಸ್ ಆಯುಕ್ತ ಕಿವಿಮಾತು

39 ವರ್ಷದ ಸುಧೀಂದ್ರ ಶಿಂಧೆ ಅವರು ಕರ್ನಾಟಕ ರಣಜಿ ತಂಡದ ಕ್ರಿಕೆಟಿಗರಾಗಿದ್ದರು. ಕ್ಯಾಪ್ಟನ್ ಕೂಡ ಆಗಿ ಕಾರ್ಯನಿರ್ವಹಿಸಿದ್ದರು. ಹಲವು ವರ್ಷಗಳಿಂದ ರಾಕೆಟ್ ಕ್ಲಬ್ ನಡೆಸುತ್ತಿದ್ದರು. ಅಲಿ ಅಷ್ಫಾಕ್ ಅವರು ಈ ಕ್ಲಬ್​ಗೆ ಪ್ರಾಯೋಜಕರಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಮ್ಯಾಚ್ ಫಿಕ್ಸಿಂಗ್ ದಂಧೆಗೆ ಕೈಹಾಕಿದ್ದಿರಬಹುದು ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಶಂಕಿಸಿದ್ಧಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು(ಡಿ. 04): ಕರ್ನಾಟಕ ಪ್ರೀಮಿಯರ್ ಲೀಗ್​ನ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಪೊಲೀಸರು ಬಗೆದಷ್ಟೂ ಕರ್ಮಕಾಂಡ ಹೊರಬರುತ್ತಿದೆ. ಕೆಎಸ್​ಸಿಎ ಮ್ಯಾನೇಜ್ಮೆಂಟ್ ಕಮಿಟಿ ಸದಸ್ಯ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ಧಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಮಾಜಿ ಕ್ರಿಕೆಟಿಗರೂ ಆಗಿರುವ ಸುಧೀಂದ್ರ ಶಿಂಧೆ ಅವರು ಮ್ಯಾಚ್ ಫಿಕ್ಸಿಂಗ್​ನ ಭಾಗಿಯಾಗಿರುವುದಕ್ಕೆ ಸಾಕಷ್ಟು ಸಾಕ್ಷಿ ಇವೆ. ಸಾಕ್ಷಿ ಸಹಿತವಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ಧಾರೆ.

ಯಾವುದೋ ಕಾರಣಕ್ಕೆ ಫಿಕ್ಸಿಂಗ್ ಜಾಲಕ್ಕೆ ಸಿಕ್ಕಿ ಬಿದ್ದಿರುವ ಆಟಗಾರರಿಗೆ ಪೊಲೀಸ್ ಆಯುಕ್ತರು ಬಚಾವ್ ಆಗುವ ದಾರಿಯನ್ನೂ ತೋರಿಸಿದ್ಧಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದ ಅವರು, “ಈ ಪ್ರಕರಣದಲ್ಲಿ ಬಹಳಷ್ಟು ಜನರು ಭಾಗಿಯಾಗಿರುವುದು ಕಂಡುಬಂದಿದೆ. ಸಿಆರ್​ಪಿಸಿ ಕಾನೂನು ಪ್ರಕಾರ ಆಟಗಾರರು ಅಪ್ರೂವರ್ ಆಗಿ ಪೊಲೀಸರ ತನಿಖೆಗೆ ಸಹಾಯ ಮಾಡಬಹುದಾಗಿದೆ. ಇದರಿಂದ ಆಟಗಾರರು ಬಂಧನಕ್ಕೊಳಗಾಗುವುದರಿಂದ ಬಚಾವ್ ಆಗಬಹುದು” ಎಂದು ಭಾಸ್ಕರ್ ರಾವ್ ವಿವರಿಸಿದ್ದಾರೆ.

ಇದನ್ನೂ ಓದಿ: ಕಿರಿಯರ ವಿಶ್ವಕಪ್ ಟೀಮ್​ನಲ್ಲಿ ರಾಯಚೂರಿನ ವೇಗಿ, ಬೆಂಗಳೂರಿನ ಸ್ಪಿನ್ನರ್

ಈ ಫಿಕ್ಸಿಂಗ್ ಜಾಲವನ್ನು ಭೇದಿಸಲು ಸಿಸಿಬಿ ಪೊಲೀಸರು ಕೆಪಿಎಲ್​ನಿಂದ ಸಿನಿಮಾ ಉದ್ಯಮದವರೆಗೆ ಸಾಕಷ್ಟು ಮಂದಿಯನ್ನು ತನಿಖೆಗೆ ಒಳಪಡಿಸಿದ್ಧಾರೆ. ಪಂದ್ಯಗಳ ಬಳಿಕ ನಡೆಯುವ ಪಾರ್ಟಿಯಲ್ಲಿ ಸಿನಿಮಾದವರು ಭಾಗಿಯಾಗಿದ್ಧಾರೆ. ಫಿಕ್ಸಿಂಗ್ ನಡೆಸಿದ ಅನುಮಾನವಿರುವ ಆಟಗಾರ ಮತ್ತು ಮ್ಯಾನೇಜ್​ಮೆಂಟ್ ಜೊತೆ ಕೆಲ ಹೊಸಬ ಸಿನಿಮಾ ನಟರು ಸಂಪರ್ಕದಲ್ಲಿರುವ ಶಂಕೆ ಇದೆ. ಈ ನಟರ ಹಣದ ಮೂಲವನ್ನು ತನಿಖೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ಧಾರೆ.

ಇನ್ನು, ನಿನ್ನೆ ತಡ ರಾತ್ರಿ ಬಂಧಿತರಾಗಿರುವ ಸುಧೀಂದ್ರ ಶಿಂಧೆ ಅವರು ಬೆಳಗಾವಿ ಪ್ಯಾಂಥರ್ಸ್ ತಂಡದ ಕ್ರಿಕೆಟ್ ಕೋಚ್ ಆಗಿದ್ದಾರೆ. ತಂಡದ ಮಾಲೀಕ ಅಲಿ ಅಷ್ಫಾಕ್ ಅವರೊಂದಿಗೆ ಸೇರಿ ಅನೇಕ ಪಂದ್ಯಗಳನ್ನು ಫಿಕ್ಸ್ ಮಾಡಿದ ಆರೋಪವಿದೆ. ದೊಮ್ಮಲೂರಿನಲ್ಲಿರುವ ಶಿಂಧೆ ನಿವಾಸದಲ್ಲಿ ರೇಡ್ ಮಾಡಿದಾಗ ಪೊಲೀಸರಿಗೆ ಹಲವು ಸಾಕ್ಷ್ಯಾಧಾರಗಳು ಸಿಕ್ಕಿವೆ. ಇಂದು ಅವರನ್ನು ಕೋರ್ಟ್​​ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: ವೀರಪ್ಪನ್ ಊರಲ್ಲಿ ತಮಿಳು ಬದಲು ಕನ್ನಡ ಮಾಧ್ಯಮ ಶಾಲೆ - ಸುರೇಶ್ ಕುಮಾರ್ ಆದೇಶ

39 ವರ್ಷದ ಸುಧೀಂದ್ರ ಶಿಂಧೆ ಅವರು ಕರ್ನಾಟಕ ರಣಜಿ ತಂಡದ ಕ್ರಿಕೆಟಿಗರಾಗಿದ್ದರು. ಕ್ಯಾಪ್ಟನ್ ಕೂಡ ಆಗಿ ಕಾರ್ಯನಿರ್ವಹಿಸಿದ್ದರು. ಹಲವು ವರ್ಷಗಳಿಂದ ರಾಕೆಟ್ ಕ್ಲಬ್ ನಡೆಸುತ್ತಿದ್ದರು. ಅಲಿ ಅಷ್ಫಾಕ್ ಅವರು ಈ ಕ್ಲಬ್​ಗೆ ಪ್ರಾಯೋಜಕರಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಮ್ಯಾಚ್ ಫಿಕ್ಸಿಂಗ್ ದಂಧೆಗೆ ಕೈಹಾಕಿದ್ದಿರಬಹುದು ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಶಂಕಿಸಿದ್ಧಾರೆ.

ಈ ಪ್ರಕರಣದಲ್ಲಿ ಪ್ಯಾಂಥರ್ಸ್ ಮಾಲೀಕ್ ಅಲಿ ಅಷ್ಫಾಕ್ ಅವರು ಈಗಾಗಲೇ ಬಂಧನದಲ್ಲಿದ್ಧಾರೆ. ಇಬ್ಬರು ಖ್ಯಾತ ಕ್ರಿಕೆಟಿಗರನ್ನೂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: