'ಆ ಒಂದು ಘಟನೆ ನಡೆದ ಬಳಿಕ ಭಾರತದಲ್ಲಿ ನನ್ನನ್ನು ಕ್ರಿಸ್​ ಗೇಲ್​​ರಂತೆ ಕಾಣುತ್ತಾರೆ!'

ಆಗಷ್ಟೇ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಕಾರ್ಲಸ್ ಬ್ರಾಥ್​ವೈಟ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕಳೆಗಾಗಿಸಿದರು. ಸ್ಟೋಕ್ಸ್​ ಅವರ ನಾಲ್ಕೂ ಎಸೆತಗಳನ್ನು ಸಿಕ್ಸರ್​ಗಟ್ಟಿದರು. ಈ ಮೂಲಕ ಕೆರಿಬಿಯನ್ ಪಡೆ ರೋಚಕ ಫೈನಲ್​ನಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಕಾರ್ಲೋಸ್ ಬ್ರಾಥ್​ವೈಟ್.

ಕಾರ್ಲೋಸ್ ಬ್ರಾಥ್​ವೈಟ್.

 • Share this:
  ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡದ ಆಲ್​ರೌಂಡರ್ ಕಾರ್ಲಸ್ ಬ್ರಾಥ್​ವೈಟ್ ಅವರು ಆ ಒಂದು ಘಟನೆ ಬಳಿಕ ಭಾರತದಲ್ಲಿ ನನ್ನನ್ನು ಕ್ರಿಸ್ ಗೇಲ್ ರೀತಿ ಕಾಣುತ್ತಿದ್ದರು ಎಂದು ಹೇಳಿದ್ದಾರೆ. ಯಾವುವು ಆ ಘಟನೆ?, ಇಲ್ಲಿದೆ ಮಾಹಿತಿ.

  2016ರಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಐಸಿಸಿ ಟಿ-20 ವಿಶ್ವಕಪ್ ಫೈನಲ್​ನಲ್ಲಿ ಕಾರ್ಲಸ್ ಬ್ರಾಥ್​ವೈಟ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

  ‘After World T20 triumph, was treated like Chris Gayle in India’: Carlos Brathwaite
  ಕಾರ್ಲೋಸ್ ಬ್ರಾಥ್​ವೈಟ್.


  ಟಿ-20 ವಿಶ್ವಕಪ್ ಮುಂದೂಡಿದರೆ ಮಿ. 360 ಕಮ್​ಬ್ಯಾಕ್ ಸಾಧ್ಯವೇ?; ಈ ಬಗ್ಗೆ ಏನಂದ್ರು ಎಬಿಡಿ?

  ಅದರಲ್ಲೂ ಕೊನೆಯ 6 ಎಸೆತಗಳಲ್ಲಿ ವೆಸ್ಟ್​ ಇಂಡೀಸ್​ಗೆ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು. ಈವೇಳೆ ಬ್ರಾಥ್​ವೈಟ್ ಭರ್ಜರಿ 4 ಸಿಕ್ಸರ್ ಸಿಡಿಸಿ ವಿಂಡೀಸ್ ತಂಡವನ್ನು ಚಾಂಪಿಯನ್​ ಆಗಿಸಿದ್ದರು. ಇದಾದ ಬಳಿಕ ಭಾರತದಲ್ಲಿ ನನ್ನನ್ನು ಗೇಲ್​ರಂತೆ ಕಾಣುತ್ತಿದ್ದರು ಎಂದಿದ್ದಾರೆ.

  'ಭಾರತದಲ್ಲಿ ಕ್ರಿಕೆಟ್ ಒಂದು ಭಾಷೆಯಾಗಿದೆ. 2016 ಟಿ-20 ವಿಶ್ವಕಪ್ ಬಳಿಕ ನಾನು ಭಾರತಕ್ಕೆ ಬಂದಾಗ ವಿಮಾನ ನಿಲ್ದಾಣದಲ್ಲಿ ನನ್ನನ್ನು ಗೇಲ್​ರಂತೆ ಸ್ವಾಗತಿಸಲಾಯಿತು' ಎಂದು ಬ್ರಾಥ್​ವೈಟ್ ಖುಷಿ ಹಂಚಿಕೊಂಡಿದ್ದಾರೆ.

  ಅದು ಏಪ್ರಿಲ್ 3, 2016. ಕೊಲ್ಕತ್ತಾದಲ್ಲಿ ನಡೆದ ವಿಶ್ವಕಪ್​ ಟಿ-20 ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್​ ಇಂಡೀಸ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಜೋ ರೂಟ್ ಅವರ ಭರ್ಜರಿ 54(36) ರನ್​ಗಳ ನೆರವಿನಿಂದ 155 ರನ್​ ಬಾರಿಸಿತ್ತು.

  IPL 2020: ಐಪಿಎಲ್ ಕುರಿತು ಬಿಸಿಸಿಐಯಿಂದ ಇಂದು ಮಹತ್ವದ ಘೋಷಣೆ ಸಾಧ್ಯತೆ..!

  ಈ ಸವಾಲನ್ನು ಬೆನ್ನತ್ತಿದ್ದ ವಿಂಡೀಸ್ ಆರಂಭ ಉತ್ತಮವಾಗಿರಲಿಲ್ಲ. 5 ರನ್​ ಆಗುವಷ್ಟರಲ್ಲಿ ಆರಂಭಿಕರಾದ ಕ್ರಿಸ್ ಗೇಲ್ ಹಾಗೂ ಚಾರ್ಲ್ಸ್​ ಡಕೌಟ್​ಗೆ ಮರಳಿದ್ದರು. ಇನ್ನು ಮೂರನೇ ಓವರ್​​ನಲ್ಲಿ ಸಿಮನ್ಸ್ ಶೂನ್ಯಕ್ಕೆ ಔಟಾಗಿದ್ದರು.

  ಈ ಹಂತದಲ್ಲಿ ಜೊತೆಗೂಡಿದ ಸ್ಯಾಮುವೆಲ್ಸ್ ಹಾಗೂ ಬ್ರಾವೊ ಅರ್ಧಶತಕದ ಜೊತೆಯಾಟದೊಂದಿಗೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

  ಆದರೆ ತಂಡದ ಮೊತ್ತ 86 ಆಗಿದ್ದ ವೇಳೆ ಬ್ರಾವೊ ಪೆವಿಲಿಯನ್​ನತ್ತ ಮುಖ ಮಾಡಿದರು. ಇದರ ಬೆನ್ನಲ್ಲೇ ಆಂಡ್ರೆ ರಸೆಲ್ ಹಾಗೂ 6ನೇ ವಿಕೆಟ್ ಆಗಿ ಡಾರೆನ್ ಸಮಿ ಬಂದ ವೇಗದಲ್ಲೇ ಮರಳಿದರು. ಒಂದೆಡೆ ಅನುಭವಿ ಆಟಗಾರ ಸ್ಯಾಮುವೆಲ್ಸ್ ಇದ್ದರೂ ಪಂದ್ಯದ ಗತಿ ಬದಲಾಗಲಿದೆ ಎಂಬ ಭಾವನೆ ಪಂದ್ಯ ವೀಕ್ಷಿಸುತ್ತಿದ್ದ ಯಾರಲ್ಲೂ ಇರಲಿಲ್ಲ.

  ಒಂದೊಂದೇ ರನ್​ಗಳನ್ನು ಕಲೆಹಾಕುತ್ತಾ ವಿಂಡೀಸ್ ಕೊನೆಯ ಓವರ್​ನಲ್ಲಿ 19 ರನ್​ಗಳ ಗುರಿ ಪಡೆಯಿತು. ಅತ್ತ ಇಂಗ್ಲೆಂಡ್ ಅಭಿಮಾನಿಗಳು ವಿಶ್ವ ಚಾಂಪಿಯನ್ ಆಗುವ ಸಂಭ್ರಮದಲ್ಲಿದ್ದರು. ಇದೇ ಆತ್ಮ ವಿಶ್ವಾದಲ್ಲಿದ್ದ ನಾಯಕ ಇಯಾನ್ ಮೋರ್ಗನ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಕೈಗೆ ಚೆಂಡು ನೀಡಿದರು.

  ಮೊದಲ ಎರಡು ಓವರ್​ಗಳಲ್ಲಿ ಕೇವಲ 17 ರನ್​ ನಿಡಿದ ಸ್ಟೋಕ್ಸ್ ಜಾದು ನಡೆಯಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ…

  ನಾನು ಧೋನಿ ಸ್ಥಾನದಲ್ಲಿ ಇದ್ದಿದ್ದರೆ ಈಗಾಗಲೇ ನಿವೃತ್ತಿ ನೀಡುತ್ತಿದ್ದೆ; ಹೀಗೆ ಹೇಳಿದ್ದು ಯಾರು?

  ಆದರೆ, ಆಗಷ್ಟೇ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಕಾರ್ಲಸ್ ಬ್ರಾಥ್​ವೈಟ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕಳೆಗಾಗಿಸಿದರು. ಸ್ಟೋಕ್ಸ್​ ಅವರ ನಾಲ್ಕೂ ಎಸೆತಗಳನ್ನು ಸಿಕ್ಸರ್​ಗಟ್ಟಿದರು. ಈ ಮೂಲಕ ಕೆರಿಬಿಯನ್ ಪಡೆ ರೋಚಕ ಫೈನಲ್​ನಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

  ಕಾರ್ಲಸ್ ಬ್ರಾಥ್​ವೈಟ್ ಬ್ಯಾಟಿಂಗ್ ವೈಖರಿ ವಿಡಿಯೋ ಇಲ್ಲಿದೆ:

  First published: