(VIDEO): ಪಂದ್ಯದ ಮಧ್ಯೆ ಮೈದಾನದಲ್ಲೇ ಕುಸಿದು ಬಿದ್ದ ಆ್ಯಂಡ್ರೆ ರಸೆಲ್; ಮುಂದೇನಾಯ್ತು?

ಅದು 14ನೇ ಓವರ್​. ಆಗ ತಾನೆ ಮೈದಾನಕ್ಕಿಳಿದಿದ್ದ ರಸೆಲ್ 2 ಬಾಲ್​​ಗಳಲ್ಲಿ ಯಾವುದೇ ರನ್ ಕಲೆಹಾಕಲಿಲ್ಲ. ಹರ್ಡಸ್ ವಿಲ್​ಜೋನ್​ ಬೌಲಿಂಗ್​ನ 5ನೇ ಎಸೆತವನ್ನು ಪುಲ್ ಮಾಡಲು ವಿಫಲವಾದ ರಸೆಲ್, ನೇರವಾಗಿ ಬಾಲ್​ ಅವರ ಹೆಲ್ಮೆಟ್​ಗೆ ಬಡಿಯಿತು.

Vinay Bhat | news18-kannada
Updated:September 13, 2019, 11:57 AM IST
(VIDEO): ಪಂದ್ಯದ ಮಧ್ಯೆ ಮೈದಾನದಲ್ಲೇ ಕುಸಿದು ಬಿದ್ದ ಆ್ಯಂಡ್ರೆ ರಸೆಲ್; ಮುಂದೇನಾಯ್ತು?
ಅದು 14ನೇ ಓವರ್​. ಆಗ ತಾನೆ ಮೈದಾನಕ್ಕಿಳಿದಿದ್ದ ರಸೆಲ್ 2 ಬಾಲ್​​ಗಳಲ್ಲಿ ಯಾವುದೇ ರನ್ ಕಲೆಹಾಕಲಿಲ್ಲ. ಹರ್ಡಸ್ ವಿಲ್​ಜೋನ್​ ಬೌಲಿಂಗ್​ನ 5ನೇ ಎಸೆತವನ್ನು ಪುಲ್ ಮಾಡಲು ವಿಫಲವಾದ ರಸೆಲ್, ನೇರವಾಗಿ ಬಾಲ್​ ಅವರ ಹೆಲ್ಮೆಟ್​ಗೆ ಬಡಿಯಿತು.
  • Share this:
ಬೆಂಗಳೂರು (ಸೆ. 13): ವೆಸ್ಟ್​ ಇಂಡೀಸ್​ನಲ್ಲಿ ಸಾಗುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ನಿನ್ನೆ ನಡೆದ ಜಮೈಕಾ ತಲ್ಲವಾಸ್ ವಿರುದ್ಧದ ಪಂದ್ಯದಲ್ಲಿ ಲೂಸಿಯ ಜೌಕ್ಸ್​ ತಂಡ 5 ವಿಕೆಟ್​ಗಳಿಂದ ಗೆದ್ದು ಬೀಗಿತು. ಈ ಮಧ್ಯೆ ಪಂದ್ಯ ನಡೆಯುತ್ತಿರುವಾಗ ಜಮೈಕಾ ತಂಡದ ಪ್ರಮುಖ ಆಟಗಾರ ಆ್ಯಂಡ್ರೆ ರಸೆಲ್ ಮೈದಾನದಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಜಮೈಕಾ ಉತ್ತಮ ಆರಂಭ ಪಡೆದುಕೊಂಡಿಲ್ಲ. ನಾಯಕ ಕ್ರಿಸ್ ಗೇಲ್(0) ಹಾಗೂ ವಾಲ್ಟನ್(8) ಬೇಗನೆ ಔಟ್ ಆದರು. ನಂತರ ಒಂದಾದ ಗ್ಲೆನ್ ಪಿಲಿಪ್ಸ್ ಹಾಗೂ ರೋಮನ್ ಪಾವೆಲ್ ಆರ್ಭಟಿಸಿದರು.

ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದ ಈ ಜೋಡಿ 10 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಪಾವೆಲ್ 44 ರನ್ ಬಾರಿಸಿದರೆ, ಪಿಲಿಪ್ಸ್​ 58 ರನ್ ಚಚ್ಚಿದರು.

‘233 ಎಸೆತಗಳಲ್ಲಿ 483 ರನ್​​, 27 ಸಿಕ್ಸರ್’​; ಗೇಲ್ ಸಿಡಿಲಬ್ಬರ ಬ್ಯಾಟಿಂಗ್ ಹೊರತಾಗಿಯು ಸೋತ ಜಮೈಕಾ!

ಇವರು ಔಟ್ ಆದ ನಂತರ ಕ್ರೀಸ್​ಗೆ ಬಂದಿದ್ದು ಸ್ಫೋಟಕ ಬ್ಯಾಟ್ಸ್​ಮನ್​ ಆ್ಯಂಡ್ರೋ ರಸೆಲ್. ಅದು 14ನೇ ಓವರ್​. ಆಗ ತಾನೆ ಮೈದಾನಕ್ಕಿಳಿದಿದ್ದ ರಸೆಲ್ 2 ಬಾಲ್​​ಗಳಲ್ಲಿ ಯಾವುದೇ ರನ್ ಕಲೆಹಾಕಲಿಲ್ಲ. ಹರ್ಡಸ್ ವಿಲ್​ಜೋನ್​ ಬೌಲಿಂಗ್​ನ 5ನೇ ಎಸೆತವನ್ನು ಪುಲ್ ಮಾಡಲು ವಿಫಲವಾದ ರಸೆಲ್, ನೇರವಾಗಿ ಬಾಲ್​ ಅವರ ಹೆಲ್ಮೆಟ್​ಗೆ ಬಡಿಯಿತು.

 ಕೆ ಎಲ್ ರಾಹುಲ್​ ಬಗ್ಗು ಬಡಿದು ಶುಭ್ಮನ್ ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು ಹೇಗೆ ಗೊತ್ತಾ?

ತಕ್ಷಣ ಮೈದಾನದಲ್ಲೇ ಕುಸಿದು ಬಿದ್ದ ರಸೆಲ್ ಒಂದು ಕ್ಷಣ ಕದಲಲಿಲ್ಲ. ಜೋರಾಗಿ ಪೆಟ್ಟಾದ ಕಾರಣ ಏಳಲೂ ಸಾಧ್ಯವಾಗದ ರಸೆಲ್​ರನ್ನು ಆಗಲೇ ಮೈದಾನಿಂದ ಕರೆದುಕೊಂಡು ಹೋಗಲಾಯಿತು. ಸದ್ಯ ರಸೆಲ್ ಚಿಕಿತ್ಸೆ ಪಡೆಯುತ್ತಿದ್ದು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

 ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಮೈಕಾ 20 ಓವರ್​ಗೆ 5 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿತು. 171 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಲೂಸಿಯ ತಂಡ ಓಪನರ್​ಗಳಾದ ಆ್ಯಂಡ್ರೆ ಫ್ಲೆಟ್ಚರ್(ಅಜೇಯ 47) ಹಾಗೂ ರಹ್ಕೀಮ್ ಕಾರ್ನ್​ವೆಲ್​​(75) ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 16.4 ಓವರ್​ನಲ್ಲೇ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ 5 ವಿಕೆಟ್​ಗಳ ಜಯ ಸಾಧಿಸಿತು.

 

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading