Rishabh Pant: ಕೊಹ್ಲಿ, ಧೋನಿ ಹಾಗೂ ರೋಹಿತ್: ಈ ಮೂವರಲ್ಲಿ ಪಂತ್ ಬ್ಯಾಟಿಂಗ್ ಪಾರ್ಟನರ್ ಯಾರಂತೆ ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಪೈಕಿ ತಮ್ಮ ಬ್ಯಾಟಿಂಗ್ ಪಾರ್ಟನರ್ ಯಾರು ಎಂಬ ಪ್ರಶ್ನೆಗೆ ಪಂತ್ ಉತ್ತರಿಸಿದ್ದಾರೆ.

ಕೊಹ್ಲಿ, ರೋಹಿತ್, ಧೋನಿ ಹಾಗೂ ಪಂತ್.

ಕೊಹ್ಲಿ, ರೋಹಿತ್, ಧೋನಿ ಹಾಗೂ ಪಂತ್.

 • Share this:
  ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರ ರಿಷಭ್ ಪಂತ್ ಇತ್ತೀಚೆಗಷ್ಟೆ ನೆಟ್​ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದರು. ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಕೊರೋನಾ ಇದ್ದರೂ ಪಂತ್ ಜೊತೆ ಸುರೇಶ್ ರೈನಾ ಹಾಗೂ ಇನ್ನೂ ಕೆಲ ಆಟಗಾರರು ಅಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಪಂತ್ ತನ್ನ ಫ್ರಾಂಚೈಸಿ ಜೊತೆ ನಡೆಸಿದ ಮಾತುಕತೆಯಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  ಪ್ರಮುಖವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಪೈಕಿ ತಮ್ಮ ಬ್ಯಾಟಿಂಗ್ ಪಾರ್ಟನರ್ ಯಾರು ಎಂಬ ಪ್ರಶ್ನೆಗೆ ಪಂತ್ ಉತ್ತರಿಸಿದ್ದಾರೆ. ಮತ್ಯಾರು ಅಲ್ಲ, ಟೀಂ ಇಂಡಿಯಾದಲ್ಲಿ ಪಂತ್ ಸ್ಥಾನ ಪಡೆಯಲು ಕಾರಣವಾದ ಎಂಎಸ್ ಧೋನಿ.

  Bhuvneshwar Kumar: ತಮ್ಮ ವೃತ್ತಿ ಜೀವನದಲ್ಲಿ ಭುವನೇಶ್ವರ್ ಪಡೆದ ಮೊದಲ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ!

  "ನನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟನರ್ ಎಂಎಸ್ ಧೋನಿ. ಆದರೆ, ಅವರ ಜೊತೆ ನಾನು ಮೈದಾನದಲ್ಲಿ ಬ್ಯಾಟಿಂಗ್ ಹಂಚಿಕೊಂಡಿದ್ದು ಬೆರಳಣಿಕೆಯಷ್ಟು ಪಂದ್ಯಗಳಲ್ಲಿ ಮಾತ್ರ. ಧೋನಿ ಅದ್ಭುತ ಕ್ರಿಕೆಟಿಗ. ಅವರ ಮೆದುಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಪ್ರಮುಖವಾಗಿ ಚೇಸಿಂಗ್ ಸಂದರ್ಭ ಅವರ ಗೇಮ್​ಪ್ಲಾನ್ ಊಹಿಸಲು ಸಾಧ್ಯವಿರುವುದಿಲ್ಲ" ಎಂದು ಪಂತ್ ಹೇಳಿದ್ದಾರೆ.

  ಧೋನಿ ಮಾತ್ರವಲ್ಲದೆ ಕೊಹ್ಲಿ ಹಾಗೂ ರೋಹಿತ್ ಜೊತೆಯೂ ಬ್ಯಾಟ್ ಬೀಸಲು ನನಗಿಷ್ಟ ಎಂದಿರುವ ಪಂತ್, "ಈ ಮೂವರು ಸಿನಿಯರ್​ಗಳ ಜೊತೆ ನನಗೆ ಬ್ಯಾಟ್ ಮಾಡುವಾಗ ಹೊಸ ಅನುಭವ ನೀಡುತ್ತದೆ. ನನ್ನನ್ನು ಸಾಕಷ್ಟು ಹುರಿದುಂಬಿಸುತ್ತಾರೆ. ಅವರ ಅನುಭವಗಳು ನನಗೆ ತುಂಬಾನೆ ಸಹಕಾರಿ" ಆಗಿದೆ ಎಂದಿದ್ದಾರೆ. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಜೊತೆಯೂ ಬ್ಯಾಟ್ ಮಾಡಲು ಇಷ್ಟ ಎಂಬುದು ಪಂತ್ ಮಾತು.

  ಕಳೆದ ಹಲವು ವರ್ಷಗಳಿಂದ ರಿಷಭ್‌ ಪಂತ್‌ ಟೀಂ ಇಂಡಿಯಾದ ಅತ್ಯಂತ ಕುತೂಹಲಕಾರಿ ಆಟಗಾರನಾಗಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದ ಎಡಗೈ ಬ್ಯಾಟ್ಸ್‌ಮನ್‌ನನ್ನು ನಿವೃತ್ತಿ ಅಂಚಿನಲ್ಲಿರುವ ಎಂ.ಎಸ್‌ ಧೋನಿ ಅವರ ಸ್ಥಾನಕ್ಕೆ ಉತ್ತರಾಧಿಕಾರಿಯೆಂದೇ ಪರಿಗಣಿಸಲಾಗುತ್ತಿದೆ.

  ಇಂಗ್ಲೆಂಡ್ ವಿಶ್ವಕಪ್ ಗೆಲುವಿನ ಹಿಂದಿತ್ತು ಒಂದು ಸಿಗರೇಟ್​..!

  ಐಪಿಎಲ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ರಿಷಭ್‌ ಪಂತ್‌, ದಿಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಅತ್ಯಂತ ಸ್ಥಿರ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಯಾವುದೇ ತಂಡದ ವಿರುದ್ಧವಾದರೂ, ಪಂತ್‌ ಕ್ರೀಸ್‌ನಲ್ಲಿ ಇರುವವರೆಗೂ ದಿಲ್ಲಿ ಕ್ಯಾಪಿಟಲ್ಸ್‌ ಸುಲಭವಾಗಿ ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದಾಗ ಅವರು ಸಂಪೂರ್ಣ ವಿಭಿನ್ನವಾಗಿರುತ್ತಿದ್ದರು. ಅದರಲ್ಲೂ 2019 ರಿಷಭ್‌ ಪಂತ್‌ಗೆ ಅತ್ಯಂತ ಕೆಟ್ಟ ವರ್ಷವಾಗಿತ್ತು.
  Published by:Vinay Bhat
  First published: