IND vs PAK: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವ್ಯಂಗ್ಯ ಮಾಡಿದ್ದು ಯಾರನ್ನು? ಇಲ್ಲಿದೆ ಉತ್ತರ

Virat Kohli Imitating :ನಿನ್ನೆ ಮಳೆಯ ಅಡಚಣೆಯಿಂದ ಕೆಲ ಹೊತ್ತು ಪಂದ್ಯವನ್ನು ನಿಲ್ಲಿಸಲಾಗಿತ್ತು. ಈ ವೇಳೆ ಡಗೌಟ್​ನಲ್ಲಿ ಕೂತಿದ್ದ ಕೊಹ್ಲಿಯು, ಮೈದಾನದಲ್ಲಿ ಪಾಕ್ ನಾಯಕನ ಅವಸ್ಥೆಯನ್ನು ಸಹ ಆಟಗಾರರಿಗೆ ತಿಳಿಸಿದ್ದರು.

Virat Kohli Imitating

Virat Kohli Imitating

  • News18
  • Last Updated :
  • Share this:
ಭಾನುವಾರ ನಡೆದ ಕ್ರಿಕೆಟ್​ ಕಾದಾಟದಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ 89 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದ ಈ ಪಂದ್ಯವು ಕೆಲ ಹಾಸ್ಯ ಸನ್ನಿವೇಶಗಳಿಗೂ ಸಾಕ್ಷಿಯಾಯಿತು. ಅದರಲ್ಲಿ ಮುಖ್ಯವಾಗಿ ಪಾಕ್​ ತಂಡದ ಕಳಪೆ ಫೀಲ್ಡಿಂಗ್ ಒಂದೆಡೆಯಾದರೆ, ನಾಯಕ ಸರ್ಫರಾಜ್ ಅಹ್ಮದ್​ರ ಆಕಳಿಕೆ ಮತ್ತೊಂದೆಡೆ. ಇವೆಲ್ಲಕ್ಕಿಂತ ಎಲ್ಲರ ತಲೆಗೆ ಹುಳ ಬಿಟ್ಟಿದ್ದು ವಿರಾಟ್ ಕೊಹ್ಲಿಯ ಹಾಸ್ಯ ಸಂಭಾಷಣೆ.

ಪಂದ್ಯದ ಎಡೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಡಗೌಟ್​​ನಲ್ಲಿ ಕೇದರ್ ಜಾಧವ್ ಹಾಗೂ ಕುಲ್​ದೀಪ್ ಯಾದವ್ ಜೊತೆ ಕೂತಿದ್ದರು. ಈ ವೇಳೆ ಯಾರನ್ನೊ ಅನುಕರಿಸುತ್ತಾ ಹಾಸ್ಯ ಚಟಾಕಿಯನ್ನು ಕೊಹ್ಲಿ ಹಾರಿಸಿದ್ದರು. ನಾಯಕನ ಹಾಸ್ಯ ಪ್ರಸಂಗವನ್ನು ಕೇಳಿದ ಕೇದರ್ ಮತ್ತು ಕುಲ್​ದೀಪ್ ನಗುತ್ತಿದ್ದರು. ಈ ಸನ್ನಿವೇಶ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

ಆದರೆ ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಹಲವರಿಗೆ ಕೊಹ್ಲಿ ಫನ್ನಿ ಚಾಟ್​ ಏನೆಂಬುದೇ ಅರ್ಥವಾಗಿರಲಿಲ್ಲ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟೀಂ ಇಂಡಿಯಾ ನಾಯಕ ಪಾಕ್ ಕ್ಯಾಪ್ಟನ್​ನನ್ನು ಅನುಕರಿಸಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ನಿನ್ನೆ ಮಳೆಯ ಅಡಚಣೆಯಿಂದ ಕೆಲ ಹೊತ್ತು ಪಂದ್ಯವನ್ನು ನಿಲ್ಲಿಸಲಾಗಿತ್ತು. ಈ ವೇಳೆ ಡಗೌಟ್​ನಲ್ಲಿ ಕೂತಿದ್ದ ಕೊಹ್ಲಿಯು, ಮೈದಾನದಲ್ಲಿ ಪಾಕ್ ನಾಯಕನ ಅವಸ್ಥೆಯನ್ನು ಸಹ ಆಟಗಾರರಿಗೆ ತಿಳಿಸಿದ್ದರು. ಏಕೆಂದರೆ ಕೊಹ್ಲಿ ಹಾಗೂ ಪಾಕ್ ವೇಗಿ ಮೊಹಮ್ಮದ್ ಅಮೀರ್ ನಡುವೆ ಈ ಪಂದ್ಯದಲ್ಲಿ ನೇರ ಕದನ ನಡೆಯಲಿದೆ ಎಂದೇ ಹೇಳಲಾಗಿತ್ತು. ಇದೇ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ್ದ ಕೊಹ್ಲಿಯನ್ನು ನೋಡಿ ಪಾಕ್ ನಾಯಕ ಅಮೀರ್ ಬಾಲ್ ಲೆ...( ಅಮೀರ್ ಬಾಲ್ ತೆಗೆದುಕೊ) ಎಂದಿದ್ದರು. ಇದೇ ಸನ್ನಿವೇಶವನ್ನು ಕೇದರ್ ಮತ್ತು ಕುಲ್ದೀಪ್ ಮುಂದೆ ಕೊಹ್ಲಿ ಮರುಸೃಷ್ಟಿಸಿ ಪಾಕ್ ನಾಯಕನನ್ನು ಅಣಕವಾಡಿದ್ದರು ಎಂಬುದು ಸ್ಪಷ್ಟವಾಗುತ್ತದೆ.ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಕೊಹ್ಲಿ ಕೇವಲ ಉತ್ತಮ ಬ್ಯಾಟ್ಸ್​ಮನ್​ ಅಲ್ಲ, ಅತ್ಯುತ್ತಮ ನಟ ಕೂಡ ಹೌದು. ಕೊಹ್ಲಿಯ ಕ್ಯಾರೆಕ್ಟರ್ ಆ್ಯಕ್ಟಿಂಗ್​ಗೆ ಮರುಳಾದೆ ಎಂಬಿತ್ಯಾದಿ  ಸೂಪರ್ ಕಮೆಂಟ್​ಗಳು ಈ ವಿಡಿಯೋಗೆ ಹರಿದು ಬರುತ್ತಿವೆ.

ಇದನ್ನೂ ಓದಿ: ರೋಚಕ ಪಂದ್ಯದ ನಡುವೆ ರಿಷಭ್ ಪಂತ್​ಗೆ ಬೇಬಿ ಸಿಟ್ಟರ್ ಕೆಲಸ: ವಿಡಿಯೋ ವೈರಲ್ 
View this post on Instagram

 

A post shared by Cricket Videos (@cricket_videos123) on
First published: