• Home
  • »
  • News
  • »
  • sports
  • »
  • 'ನಾಯಕನಿಗೇ ಎದುರು ಮಾತಾಡ್ತೀಯಾ?'; ಬುಮ್ರಾಗೆ ಖಡಕ್ ವಾರ್ನಿಂಗ್ ನೀಡಿದ ಕೊಹ್ಲಿ

'ನಾಯಕನಿಗೇ ಎದುರು ಮಾತಾಡ್ತೀಯಾ?'; ಬುಮ್ರಾಗೆ ಖಡಕ್ ವಾರ್ನಿಂಗ್ ನೀಡಿದ ಕೊಹ್ಲಿ

ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)

ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)

ಐಪಿಎಲ್ 12ನೇ ಆವೃತ್ತಿಗೆ ಇನ್ನೇನು ಬೆರಳಣಿಕೆಯ ದಿನಗಳಷ್ಟೆ ಬಾಕಿ ಉಳಿದಿವೆ. ಇಷ್ಟು ದಿನ ಒಂದೇ ತಂಡದಲ್ಲಿ ಆಡುತ್ತಿದ್ದ ಟೀಂ ಇಂಡಿಯಾ ಆಟಗಾರರು ಈಗ ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆ. ಅಂತೆಯೆ ಐಪಿಎಲ್​​ ಸ್ಟಾರ್ ಆಟಗಾರರ ಜಾಹೀರಾತು ವಾರ್ ಕೂಡ ಜೋರಾಗಿದೆ.

  • News18
  • 2-MIN READ
  • Last Updated :
  • Share this:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ 1 ಬ್ಯಾಟ್ಸ್​ಮನ್​​. ಅಂತೆಯೆ ಜಸ್​ಪ್ರೀತ್ ಬುಮ್ರಾ ವಿಶ್ವದ ನಂಬರ್ 1 ಬೌಲರ್. ಸದ್ಯ ಇವರಿಬ್ಬರ ನಡುವೆ ಜಗಳ ಶುರುವಾಗಿದೆ. ಅರೇ ಟೀಂ ಇಂಡಿಯಾ ಆಟಗಾರರ ನಡುವೆಯೇ ಒಳಜಗಳವ ಎಂದು ಟೆನ್ಶನ್ ತೆಗೊಬೇಡಿ.

ಐಪಿಎಲ್ 12ನೇ ಆವೃತ್ತಿಗೆ ಇನ್ನೇನು ಬೆರಳಣಿಕೆಯ ದಿನಗಳಷ್ಟೆ ಬಾಕಿ ಉಳಿದಿವೆ. ಇಷ್ಟು ದಿನ ಒಂದೇ ತಂಡದಲ್ಲಿ ಆಡುತ್ತಿದ್ದ ಟೀಂ ಇಂಡಿಯಾ ಆಟಗಾರರು ಈಗ ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆ. ಅಂತೆಯೆ ಐಪಿಎಲ್​​ ಸ್ಟಾರ್ ಆಟಗಾರರ ಜಾಹೀರಾತು ವಾರ್ ಕೂಡ ಜೋರಾಗಿದೆ.

ಮೊನ್ನೆಯಷ್ಟೆ ಬುಮ್ರಾ ಅವರು ಐಪಿಎಲ್ ಜಾಹೀರಾತುವಿನಲ್ಲಿ, 'ನಾನು ವಿಶ್ವದ ನಂಬರ್ 1 ಬೌಲರ್. ಆದರೆ, ನಾನಿನ್ನು ವಿಶ್ವದ ನಂಬರ್ 1 ಬ್ಯಾಟ್ಸ್​ಮನ್​​​​ ಅನ್ನು ಔಟ್ ಮಾಡುವುದು ಬಾಕಿ ಉಳಿದಿದೆ. ಈಬಾರಿ ನಾವು ಒಂದೇ ತಂಡದಲ್ಲಿ ಇರುವುದಿಲ್ಲ. ನಾನು ಬರ್ತಿದ್ದೀನಿ ಚೀಕೊ ಬಯ್ಯಾ, ನೋಡಿಕೊಳ್ತೀನಿ' ಎಂದು ಹೇಳಿದ್ದರು.

ಇದನ್ನೂ ಓದಿ: India vs Australia: ನಾಳೆಯಿಂದ ಏಕದಿನ ಸರಣಿ; ಬದಲಾವಣೆ ಅಗತ್ಯ, ಹೇಗಿರಲಿದೆ ಭಾರತದ ಆಡುವ ಬಳಗ?

 ಸದ್ಯ ಬುಮ್ರಾಗೆ ತಿರುಗೇಟು ನೀಡಿರುವ ಕೊಹ್ಲಿ, 'ಕ್ಯಾಪ್ಟನ್​​ಗೇ ಎದುರು ಮಾತಾಡ್ತೀಯಾ?, ಅದರಲ್ಲು ನನ್ನ ಚೀಕೊ ಬಯ್ಯಾ ಅಂತೀಯಾ?, ನೋಡೋಣ ಹಾಗಾದ್ರೆ' ಎಂದು ಜಾಹೀರಾತುವಿನಲ್ಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 


First published: