Chris Evans: ಸೆಲ್ಫ್​ ಐಸೋಲೇಶನ್​ನಲ್ಲಿರುವ ಕ್ಯಾಪ್ಟನ್​ ಅಮೆರಿಕ ಖ್ಯಾತಿಯ ಕ್ರಿಸ್​ ಇವಾನ್ಸ್​ ಫೋಟೋ ವೈರಲ್​..!

Captain America Chris Evans: ಅವೆಂಜರ್ಸ್​ ಖ್ಯಾತಿಯ ನಟ ಕ್ರಿಸ್ ಇವಾನ್ಸ್​ ಸದ್ಯ ಸೆಲ್ಫ್​ ಐಸೋಲೇಷನ್​ನಲ್ಲಿದ್ದಾರೆ. ಅದರಲ್ಲೂ ಅವರು ತಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತಿದ್ದು ಅದರ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಸ್ ಇವಾನ್ಸ್​

ಕ್ರಿಸ್ ಇವಾನ್ಸ್​

  • Share this:
ಕ್ಯಾಪ್ಟನ್​ ಅಮೆರಿಕ ಪಾತ್ರಧಾರಿ ಕ್ರಿಸ್​ ಇವಾನ್ಸ್​ಗೂ ಈ ಕೊರೋನಾ ಬಿಸಿ ತಟ್ಟಿದೆ. ವಿಶ್ವದೆಲ್ಲೆಡೆ ರುದ್ರ ತಾಂಡವವಾಡುತ್ತಿರುವ ಕೊರೋನಾದಿಂದಾಗಿ ಎಲ್ಲರೂ ತಮ್ಮನ್ನ ತಾವು ಗೃಹ ಬಂಧನಕ್ಕೊಳಗಾಗಿದ್ದಾರೆ.

ಅವೆಂಜರ್ಸ್​ ಖ್ಯಾತಿಯ ನಟ ಕ್ರಿಸ್ ಇವಾನ್ಸ್​ ಸದ್ಯ ಸೆಲ್ಫ್​ ಐಸೋಲೇಷನ್​ನಲ್ಲಿದ್ದಾರೆ. ಅದರಲ್ಲೂ ಅವರು ತಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತಿದ್ದು ಅದರ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಪ್ರೀತಿಯ ನಾಯಿ ಡಾಗರ್​ ಅನ್ನು ಮಡಿಲಿನಲ್ಲಿ ಇಟ್ಟುಕೊಂಡು ಅದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಅದರಲ್ಲೂ ಡಾಗರ್​ ಇವಾನ್ಸ್ ಅವರನ್ನು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿರುವ ಈ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್​ನಿಂದಾಗಿ ಪಾತ್ರೆ ತೊಳೆಯೋದನ್ನು ಕಲಿಯುತ್ತಿರುವ ಬಿ-ಟೌನ್​ ಸ್ಟಾರ್​ ಕಾರ್ತಿಕ್​ ಆರ್ಯನ್​

ಸೆಲ್ಫ್​ ಐಸೋಲೇಷನ್​ನಲ್ಲಿರುವ ಸೆಲೆಬ್ರಿಟಿಗಳು ತಮ್ಮ ಆರೋಗ್ಯ ಹಾಗೂ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್​ ನೀಡುತ್ತಿದ್ದಾರೆ. ಹಾಗೆಯೇ ಕ್ರಿಸ್​ ಸಹ ಮಾಡಿದ್ದಾರೆ. ಈ ಹಿಂದೆ ಹಾಲಿವುಡ್​ ನಟ ಟಾಮ್​ ಹ್ಯಾಂಕ್ಸ್​ ಹಾಗೂ ಅವರ ಪತ್ನಿ ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದರು.

Kiara Advani: ಅರೆನಗ್ನರಾಗಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದ ಕಿಯಾರಾ ಈಗ ಅಂಗಿಯ ಬಟನ್ ತೆಗೆದು ಸುದ್ದಿಯಲ್ಲಿದ್ದಾರೆ..!

First published: