ಭಾರತ ಕ್ರಿಕೆಟ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿ ಪೂಜಾರ ಟೀಕೆಗೆ ಗುರಿಯಾಗಿದ್ದರು.
ಹೀಗೆ ತನ್ನ ಮಂದಗತಿಯ ಬ್ಯಾಟಿಂಗ್ ವಿಚಾರವಾಗಿ ಮಾತನಾಡುವವರಿಗೆ ತಿರುಗೇಟು ನೀಡಿರುವ ಪೂಜಾರ, ನನಗೆ ಡೇವಿಡ್ ವಾರ್ನರ್ ಅಥವಾ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟ್ ಬೀಸಲು ಬರುವುದಿಲ್ಲ. ನನ್ನ ಬ್ಯಾಟಿಂಗ್ ಶೈಲಿಯೇ ಹೀಗೆ ಎಂದು ಹೇಳಿದ್ದಾರೆ.
ಕೊರೋನಾ ನಿಯಮ ಮುರಿದ ಬಾಕ್ಸರ್ ಮೇರಿ ಕೋಮ್ ; ರಾಷ್ಟ್ರಪತಿಗಳ ಭೋಜನ ಕೂಟದಲ್ಲಿ ಭಾಗಿ
ಇತ್ತೀಚೆಗಷ್ಟೆ ಮುಕ್ತಾಯಗೊಂಡ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪೂಜಾರ ಅವರು ಬರೋಬ್ಬರಿ 237 ಎಸೆತಗಳಲ್ಲಿ ಕೇವಲ 66 ರನ್ ಗಳಿಸಿದ್ದರು. ಈ ವಿಚಾರವಾಗಿ ಅವರನ್ನು ಪ್ರಶ್ನೆ ಮಾಡಿದಾಗ ನನ್ನ ತಂಡಕ್ಕೆ ಹೇಗೆ ಬೇಕು ಹಾಗೇ ನಾನು ಆಡುತ್ತೇನೆ ಎಂದು ಹೇಳಿದ್ದಾರೆ.
'ನನ್ನ ಆಟದಲ್ಲಿ ನಾನು ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ನನ್ನನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದು ನನ್ನ ಇದೇ ಶೈಲಿಯ ಬ್ಯಾಟಿಂಗ್ ನೋಡಿ. ನನ್ನ ಸ್ಟ್ರೈಕ್ ರೇಟ್ ವಿಚಾರದಲ್ಲಿ ತಂಡದ ಕೋಚ್ ಆಗಲಿ ಅಥವಾ ಕ್ಯಾಪ್ಟನ್ ಅಗಲಿ ಯಾವುದೇ ರೀತಿಯ ಒತ್ತಡ ಹಾಕಿಲ್ಲ' ಎಂದು ತಿಳಿಸಿದ್ದಾರೆ.
ಮ್ಯಾಜಿಶಿಯನ್ ಆದ ಟೀಂ ಇಂಡಿಯಾ ಆಟಗಾರ; ಅಯ್ಯರ್ ಜಾದೂ ವಿಡಿಯೋ ಭಾರೀ ವೈರಲ್!
'ನನ್ನ ಬ್ಯಾಟಿಂಗ್ ವಿಚಾರವಾಗಿ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂಬುದು ನನಗೆ ಗೊತ್ತು. ಆದರೆ, ನಾನು ಅದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ. ನನ್ನ ನಿಧಾನಗತಿಯ ಬ್ಯಾಟಿಂಗ್ ಅನ್ನು ಹೊರಗೆ ಬೇರೆ ರೀತಿಯಲ್ಲಿ ವರ್ಣಿಸಲಾಗುತ್ತಿದೆ. ಆದರೆ, ತನ್ನ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಲು ಟೀಂ ಇಂಡಿಯಾ ನನಗೆ ಸಂಪೂರ್ಣಬೆಂಬಲವನ್ನು ನೀಡುತ್ತಿದೆ' ಎಂದು ಚೇತೇಶ್ವರ ಪೂಜಾರ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ