Cricket Record- ಒಂದೇ ಪಂದ್ಯದಲ್ಲಿ ನಾಲ್ವರು ನಾನ್ ಸ್ಟ್ರೈಕರ್​ಗಳನ್ನ ಔಟ್ ಮಾಡಿದ 16 ವರ್ಷದ ಬೌಲರ್

Maeva Douma- ಕ್ರಿಕೆಟ್​ನಲ್ಲಿ ಮಂಕಡಿಂಗ್ ಮಾಡುವುದನ್ನು ನಾನು ಕೇಳಿದ್ದೇವೆ, ನೋಡಿದ್ಧೇವೆ. ಕ್ಯಾಮರೂನ್​ನ 16 ವರ್ಷದ ವೇಗದ ಬೌಲರ್ ಮೇವಾ ಡೌಮಾ ಅವರು ಟಿ20 ಪಂದ್ಯವೊಂದರಲ್ಲಿ ನಾಲ್ವರು ನಾನ್ ಸ್ಟ್ರೈಕಿಂಗ್ ಬ್ಯಾಟುಗಾರರನ್ನ ಔಟ್ ಮಾಡಿದ್ದಾಳೆ.

ಮೇವಾ ಡೌಮಾ

ಮೇವಾ ಡೌಮಾ

  • Cricketnext
  • Last Updated :
  • Share this:
    ಕ್ಯಾಮರೂನ್: ಬೌಲರ್ಸ್ ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕಿಂಗ್ ಕ್ರೀಸ್​ನಲ್ಲಿರುವ ಬ್ಯಾಟ್ಸ್​ಮನ್ ಚೆಂಡು ಹಾಕುವ ಮುನ್ನವೇ ಕ್ರೀಸ್ ಬಿಡುವ ಸಾಕಷ್ಟು ನಿದರ್ಶನಗಳನ್ನ ಕಾಣುತ್ತೇವೆ. ಕ್ರಿಕೆಟ್ ನಿಯಮಗಳ ಪ್ರಕಾರ ಬೌಲಿಂಗ್ ಮಾಡುವಾಗ ಕ್ರೀಸ್ ಬಿಟ್ಟು ಹೊರಗೆ ಹೋಗುವ ಬ್ಯಾಟ್ಸ್​ಮನ್ ಅನ್ನು ಔಟ್ ಮಾಡಲು ಸಾಧ್ಯವಿದೆ. ಆದರೆ, ಅಪರೂಪಕ್ಕೊಮ್ಮೆ ಮಾತ್ರ ಈ ರೀತಿ ಔಟ್ ಮಾಡಲಾಗುತ್ತದೆ. ಹಲವು ಬಾರಿ ಬೌಲರ್​ಗಳು ಎಚ್ಚರಿಕೆ ಕೊಟ್ಟು ಸುಮ್ಮನಾಗುವುದುಂಟು. ಈಗ ಕ್ಯಾಮರೂನ್​ನ ಕ್ರಿಕೆಟ್ ಆಟಗಾರ್ತಿಯೊಬ್ಬಳು ಒಂದೇ ಪಂದ್ಯದಲ್ಲಿ ನಾಲ್ವರು ನಾನ್ ಸ್ರೈಕಿಂಗ್ ಬ್ಯಾಟುಗಾರ್ತಿಯರನ್ನ ಔಟ್ ಮಾಡಿ ದಾಖಲೆ ಬರೆದಿದ್ದಾಳೆ. ಕ್ಯಾಮರೂನ್​ನ ಈ ಆಟಗಾರ್ತಿಯ ಹೆಸರು ಮೇವಾ ಡೌಮಾ. ಭಾನುವಾರ ಉಗಾಂಡಾ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾಳೆ.

    ನಾನ್ ಸ್ಟ್ರೈಕರ್​ಗಳನ್ನ ಈ ರೀತಿ ಔಟ್ ಮಾಡಲು ಅನುಭವಿಗಳೇ ಹಿಂದೆ ಮುಂದೆ ನೋಡುವಾಗ ಚೊಚ್ಚಲ ಪಂದ್ಯವಾಡುತ್ತಿರುವ 16 ವರ್ಷದ ಬಾಲಕಿ ಬರೋಬ್ಬರಿ ನಾಲ್ವರನ್ನ ಔಟ್ ಮಾಡಿ ಸೈ ಎನಿಸಿದ್ದಾಳೆ. ಈ ಪಂದ್ಯ ಯಾವುದೇ ಲೋಕಲ್ ಟೂರ್ನಿಯದ್ದಲ್ಲ. ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಯ ಪಂದ್ಯವೊಂದರಲ್ಲಿ ನಡೆದದ್ದು. ಮೀವಾ ಡೋಮಾ ಬಲಗೈ ವೇಗದ ಬೌಲರ್ ಆಗಿದ್ದಾಳೆ. ನಿನ್ನೆ ಭಾನುವಾರ ನಡೆದ ಆ ಪಂದ್ಯದಲ್ಲಿ ಡೌಮಾ ನಾಲ್ಕು ಓವರ್​ನಲ್ಲಿ 27 ರನ್ನಿತ್ತು ಒಂದು ವಿಕೆಟ್ ಪಡೆದಿದ್ದಾಳೆ. ಆದರೆ, ಕಿತ್ತಿದ್ದು ಒಂದೇ ವಿಕೆಟ್ ಆದರೂ ಐವರು ಉಗಾಂಡಾ ಬ್ಯಾಟುಗಾರ್ತಿಯರ ವಿಕೆಟ್ ಕೀಳಲು ಈಕೆ ಕಾರಣಳಾಗಿದ್ದಂತೂ ಹೌದು. ಆ ಪಂದ್ಯದಲ್ಲಿ ಔಟಾದ ಆರು ಉಗಾಂಡಾ ಆಟಗಾರ್ತಿಯರಲ್ಲಿ ನಾಲ್ವರು ಕ್ರೀಸ್​ನಿಂದ ಹೊರಬಂದ ತಪ್ಪಿಗೆ ಮೀವಾ ಡೋಮಾದಿಂದ ಔಟಾದವರೇ ಆಗಿದ್ದಾರೆ. ಆದರೆ, ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಅಂತಿಮವಾಗಿ ಗೆದ್ದದ್ದು ಉಗಾಂಡಾ ಮಹಿಳೆಯರೇ. ಉಗಾಂಡದ 190 ರನ್​ಗೆ ಪ್ರತಿಯಾಗಿ ಕ್ಯಾಮರೂನ್ ಕೇವಲ 35 ರನ್​ಗೆ ಆಲೌಟ್ ಆಯಿತು.

    ಇದನ್ನೂ ಓದಿ: IPL 2021- ಈ ಕನ್ನಡಿಗನಿಂದ 2-3 ಶತಕ: ಈ ಬಾರಿಯ ಐಪಿಎಲ್​ನಲ್ಲಿ ಗೌತಮ್ ಗಂಭೀರ್ ಭವಿಷ್ಯ

    ಮೊದಲು ಬ್ಯಾಟ್ ಮಾಡಿದ ಉಗಾಂಡ ಮಹಿಳೆಯರು ಒಂದು ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ 200 ರನ್ ಗಡಿ ದಾಟುವ ಸುಳಿವು ನೀಡಿದ್ದರು. ಎರಡನೇ ವಿಕೆಟ್​ಗೆ 100 ರನ್ ಜೊತೆಯಾಟ ಆಡಿ ಡೇಂಜರಸ್ ಆಗಿದ್ದ ರೀಟಾ ಮುಸಮಲಿ ಮತ್ತು ಕೆವಿನ್ ಅವಿನೋ ಇಬ್ಬರನ್ನೂ ನಾನ್ ಸ್ಟ್ರೈಕಿಂಗ್ ಕ್ರೀಸ್​ನಲ್ಲೇ ಮೀವಾ ಡೌಮಾ ಔಟ್ ಮಾಡಿ ಪೆವಿಲಿಯನ್​ಗೆ ಮರಳಿಸಿದ್ದಳು. ನಂತರ ನಾಯಕಿ ಇಮ್ಯಾಕ್ಯುಲೇಟ್ ನಕಿಸೂಯಿ ಮತ್ತು ಜನೆಟ್ ಎಂಬನಾಜಿ ಅವರಿಬ್ಬರನ್ನೂ ಇದೇ ರೀತಿ ಔಟ್ ಮಾಡುತ್ತಾಳೆ.

    ಇದನ್ನೂ ಓದಿ: Ajay Jadeja| ಟಿ20 ವಿಶ್ವಕಪ್‌ಗೆ ಧೋನಿ ಮೆಂಟರ್‌: ಬಿಸಿಸಿಐ ತೀರ್ಮಾನವನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತೇ..?

    ಬೌಲರ್​ಗಳು ಈ ರೀತಿ ನಾನ್ ಸ್ಟ್ರೈಕೀಂಗ್ ಕ್ರೀಸ್​ನಲ್ಲಿ ಬ್ಯಾಟ್ಸ್​ಮನ್ ಅನ್ನು ಔಟ್ ಮಾಡುವುದಕ್ಕೆ ಆಡುಮಾತಿನಲ್ಲಿ ಮಂಕಡಿಂಗ್ ಎನ್ನುತ್ತಾರೆ. ಭಾರತದ ಕ್ರಿಕೆಟಿಗ ವಿನೂ ಮಂಕಡ್ ಅವರು ಮೊದಲ ಬಾರಿಗೆ ಈ ರೀತಿ ಎದುರಾಳಿ ಬ್ಯಾಟ್ಸ್​ಮನ್ ಅನ್ನು ಔಟ್ ಮಾಡಿದ್ದರು. ಆಗಿನಿಂದ ಇದಕ್ಕೆ ಮಂಕಡಿಂಗ್ ಎಂದು ಕರೆಯುವ ಪರಿಪಾಠ ಬೆಳೆದಿದೆ. ಮಂಕಡಿಂಗ್ ಮಾಡುವುದು ಕ್ರಿಕೆಟ್ ನಿಯಮಗಳಿಗೆ ಅನುಗುಣವಾಗಿಯೇ ಇದೆ. ಆದರೆ, ಕ್ರೀಡಾಸ್ಫೂರ್ತಿ ದೃಷ್ಟಿಯಿಂದ ಈಗಲೂ ಇದನ್ನ ಒಪ್ಪದವರೇ ಹೆಚ್ಚು ಮಂದಿ. 2019ರ ಐಪಿಎಲ್ ಟೂರ್ನಿಯ ಪಂದ್ಯದ ವೇಳೆ ಆರ್ ಅಶ್ವಿನ್ ಅವರು ಜೋಸ್ ಬಟ್ಲರ್ ಅವರನ್ನ ಔಟ್ ಮಾಡಿದ್ದರು.
    Published by:Vijayasarthy SN
    First published: